Natasa Stankovic Pregnant: ಹಾರ್ದಿಕ್ ಪಾಂಡ್ಯ ಪತ್ನಿ ಮತ್ತೆ ಪ್ರೆಗ್ನೆಂಟಾ? ಬೇಬಿ ಬಂಪ್

First Published | Dec 26, 2021, 7:15 PM IST

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya)  ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಕ್ರಿಸ್ಮಸ್ (Christmas) ಆಚರಿಸಿದರು. ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರ ಹೆಂಡತಿ ಮತ್ತು ಮಗ   ಮತ್ತು ಅವರ ತಾಯಿಯೊಂದಿಗೆ ಕಾಣಿಸಿಕೊಂಡಿದ್ದಾನೆ. ಆದರೆ  ಎಲ್ಲರ ಕಣ್ಣುಗಳು ನತಾಶಾ ಸ್ಟಾಂಕೋವಿಕ್ (Natasa Stankovic) ಮೇಲೆ ಬಿದಿದ್ದೆ ಮತ್ತು ಅವರು ಮತ್ತೆ ತಾಯಿಯಾಗಲಿದ್ದಾರೆ ಎಂದು ನೆಟಿಜನ್ಸ್‌ ಗೆಸ್‌ ಮಾಡುತ್ತಿದ್ದಾರೆ. ಕಾರಣವೇನು ಗೊತ್ತಾ?
 

ಶನಿವಾರ ಕ್ರಿಸ್‌ಮಸ್ ಸಂದರ್ಭದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ Instagram ಆಕೌಂಟ್‌ನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಕ್ರಿಸ್‌ಮಸ್ ಆಚರಿಸುತ್ತಿರುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯ ಜೊತೆ  ಅವರ ಮಗ ಅಗಸ್ತ್ಯ, ಅವರ ಪತ್ನಿ ನತಾಶಾ ಸ್ಟಾಂಕೋವಿಕ್, ಅವರ ಸಹೋದರ ಕೃನಾಲ್ ಪಾಂಡ್ಯ, ಪಂಖೂರಿ ಶರ್ಮಾ ಮತ್ತು ಅವರ ತಾಯಿ ನಂದಿನಿ ಪಾಂಡ್ಯ ಅವರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

Is Hardik Pandya s wife Natasa Stankovic pregnant again Netizens spot baby bump in Christmas photos

ಈ ಫೋಟೋಗಳಲ್ಲಿ, ನತಾಶಾ ಸ್ಟಾಂಕೋವಿಕ್ ಪಿಂಕ್‌ ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವಳನ್ನು ನೋಡಿದ ಅಭಿಮಾನಿಗಳು ಮತ್ತೆ ತಾಯಿಯಾಗಲಿದ್ದಾರೆ ಎಂದು ಗೆಸ್‌ ಮಾಡುತ್ತಿದ್ದಾರೆ. ಏಕೆಂದರೆ ಈ ಫೋಟೋದಲ್ಲಿ ಅವರ ಹೊಟ್ಟೆ ಬೇಬಿ ಬಂಪ್‌ನಂತೆ ಗೋಚರಿಸುತ್ತದೆ.

ಹಾರ್ದಿಕ ಪಾಂಡ್ಯ ಪೋಸ್ಟ್ ಮಾಡಿದ ಈ ಫೋಟೋ ಸಖತ್‌ ವೈರಲ್‌ ಆಗಿದ್ದು ನತಾಸಾ ಸ್ಟಾಂಕೋವಿಕ್ ಮತ್ತೆ ಗರ್ಭಿಣಿ ಎಂದು ಅಭಿಮಾನಿಗಳು ಊಹಿಸಿದ್ದಾರೆ.ಬಳಕೆದಾರರೊಬ್ಬರು 'ಭಾಬಾಜಿ, ಅಗಸ್ತ್ಯನ ಕಿರಿಯ ಸಹೋದರ ಮತ್ತು ಸಹೋದರಿ ಬರುತ್ತಿದ್ದಾರೆಯೇ?' ಎಂದು ಕಾಮೆಂಟ್‌ ಮಾಡಿದ್ದಾರೆ.

ಕಳೆದ ವರ್ಷ ಮೇ 2020 ರಲ್ಲಿ, ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ಅವರು ಗರ್ಭಿಣಿಯಾಗಿರುವುದಾಗಿ ಘೋಷಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದರು ಮತ್ತು ಎರಡು ತಿಂಗಳ ನಂತರ ಅವರ ಮಗ ಅಗಸ್ತ್ಯ ಜನಿಸಿದ್ದು ಈಗ ಆತನಿಗೆ ಕೇವಲ ಒಂದೂವರೆ ವರ್ಷ.

ಹಾರ್ದಿಕ್ ಕೆಲವು ಸಮಯದಿಂದ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿದ್ದಾರೆ. T20 ವಿಶ್ವಕಪ್ ನಂತರ, ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಅವರನ್ನು ಕೈ ಬಿಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಅವರನ್ನು ಈ ವರ್ಷ ಅವರ ತಂಡದಿಂದ ಬಿಡುಗಡೆ ಮಾಡಿದೆ. ಹೀಗಿರುವಾಗ ಹಾರ್ದಿಕ್ ಅಹಮದಾಬಾದ್ ತಂಡ ಸೇರಬಹುದು ಎನ್ನಲಾಗುತ್ತಿದೆ. ಈ ಡ್ಯಾಶಿಂಗ್ ಆಲ್ ರೌಂಡರ್ ಅನ್ನು ಯಾವ ಫ್ರಾಂಚೈಸಿ ತನ್ನ ತಂಡದಲ್ಲಿ ಸೇರಿಸಿಕೊಳ್ಳಲಿದೆ ಎಂಬುದನ್ನು ನೋಡಬೇಕಾಗಿದೆ.

ಹಾರ್ದಿಕ್ ಪಾಂಡ್ಯ ಕೂಡ ಐಪಿಎಲ್‌ಗೆ ಮರಳಲು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗೆ ಮೈದಾನದಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ವರ್ಷಗಳಿಂದ ಸಹೋದರರಿಬ್ಬರೂ MI ಗಾಗಿ IPL ಆಡುತ್ತಿದ್ದಾರೆ. ಆದರೆ ಈ ವರ್ಷ ಇಬ್ಬರೂ ಆಟಗಾರರನ್ನು ತಂಡ ಉಳಿಸಿಕೊಂಡಿಲ್ಲ.

Latest Videos

click me!