ಇಂದಿನ RCB Vs PBKS ಪಂದ್ಯದ ಬಗ್ಗೆ ಕಾಂಡೋಮ್ ಕಂಪನಿಯಿಂದ ಪೋಸ್ಟ್; ನಕ್ಕು ನಕ್ಕು ಸುಸ್ತಾದ ಫ್ಯಾನ್ಸ್

Published : Jun 03, 2025, 04:28 PM IST

ಇಂದು ನಡೆಯಲಿರುವ RCB ಮತ್ತು ಪಂಜಾಬ್ ನಡುವಿನ ಫೈನಲ್ ಪಂದ್ಯದ ಬಗ್ಗೆ ಡುರೆಕ್ಸ್ ತಮಾಷೆಯ ಟ್ವೀಟ್ ಮಾಡಿದೆ. ಡುರೆಕ್ಸ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

PREV
15

ಇವತ್ತಿನ ಫೈನಲ್ ಪಂದ್ಯ ಗೆಲ್ಲೋದು ಯಾರು? ಇದು ದೇಶದ ಮುಂದಿರುವ ಪ್ರಶ್ನೆ. ಇಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯ ನೋಡಲು ಇಡೀ ದೇಶವೇ ಕಾಯುತ್ತಿದೆ.

25

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಹಾಗೆಯೇ ಎರಡು ತಂಡಗಳಿಗೆ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈ ಬಾರಿ ಫೈನಲ್ ಪ್ರವೇಶಿಸಿರುವ ಎರಡು ತಂಡಗಳು ಇದುವರೆಗೂ ಒಮ್ಮೆಯೂ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿಲ್ಲ.

35

ಇದೀಗ ಕಾಂಡೋಮ್ ಕಂಪನಿ ಡುರೆಕ್ಸ್ ಎರಡೂ ತಂಡಗಳಿಗೆ ತನ್ನದೇ ಶೈಲಿಯಲ್ಲಿ ವಿಶ್ ಮಾಡಿದೆ. 18 ವರ್ಷ, ಇಬ್ಬರು ವರ್ಜಿನ್‌ಗಳು. ಇಂದಿನ ರಾತ್ರಿ ಗೆಲ್ಲೋರು ಯಾರು ಎಂದು ತಮಾಷೆಯಾಗಿ ಡುರೆಕ್ಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

45

ಮೊದಲ ಸಮಯ ಯಾವಾಗಲೂ ವಿಶೇಷವಾಗಿರುತ್ತದೆ. ನೀವು ಯಾರನ್ನು ಪ್ರೀತಿಸುತ್ತಿದ್ದೀರಿ ಎಂದು ಡುರೆಕ್ಸ್ ಕೇಳಿದೆ. ಡುರೆಕ್ಸ್ ಕಾಂಡೋಮ್ ಕಂಪನಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

55

ಡುರೆಕ್ಸ್ ಪೋಸ್ಟ್‌ಗೆ ನೆಟ್ಟಿಗರು ಸಹ ಅದರದ್ದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕಪ್ ಗೆದ್ದಿರುವ ತಂಡಗಳು ವರ್ಜಿನಿಟಿ ಕಳೆದುಕೊಂಡಿವೆಯಾ? ಹೊಸಬರ ಆಟ ನೋಡಲು ಯಾವಾಗಲೂ ರೋಚಕವಾಗಿರುತ್ತವೆ. ಹಾಗಾಗಿ ಇಂದು ತುಂಬಾ ವಿಶೇಷವಾದ ಪಂದ್ಯ ಪೋಲಿಯಾಗಿ ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories