Published : Jun 03, 2025, 02:43 PM ISTUpdated : Jun 03, 2025, 02:46 PM IST
ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡದ ಪಾಲಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸ್ಪೋಟಕ ಬ್ಯಾಟರ್ ತಂಡ ಕೂಡಿಕೊಂಡಿರುವುದು ಬೆಂಗಳೂರು ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.
2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿಂದು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ.
28
ಇಂದು ಸಂಜೆ 7.30ಕ್ಕೆ ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಿದೆ.
38
ಕಳೆದ 17 ಅವೃತ್ತಿಗಳನ್ನು ಆಡಿಯೂ ಐಪಿಎಲ್ ಟ್ರೋಫಿ ಬರ ಅನುಭವಿಸಿದ್ದ ಈ ಎರಡು ತಂಡಗಳ ಪೈಕಿ ಒಂದು ತಂಡ ಇಂದು ಐಪಿಎಲ್ ಟ್ರೋಫಿಗೆ ಮುತ್ತಿಕ್ಕಲಿದೆ. ಎರಡು ತಂಡಗಳು ಮೇಲ್ನೋಟಕ್ಕೆ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ.
48
ಹೀಗಿರುವಾಗಲೇ ಆರ್‌ಸಿಬಿ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಪಂಜಾಬ್ ಕಿಂಗ್ಸ್ ಎದುರಿನ ಫೈನಲ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಇದು ಆರ್‌ಸಿಬಿ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿತ್ತು.
58
ಫಿಲ್ ಸಾಲ್ಟ್ ಅವರ ಪತ್ನಿ ಮಗುವಿಗೆ ಜನ್ಮ ನೀಡಲಿದ್ದು, ಈ ಕಾರಣಕ್ಕಾಗಿ ಇಂಗ್ಲೆಂಡ್‌ಗೆ ವಾಪಾಸ್ಸಾಗಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಫಿಲ್ ಸಾಲ್ಟ್ ನಿನ್ನೆ ಸಂಜೆಯ ಆರ್‌ಸಿಬಿ ಪ್ರಾಕ್ಟೀಸ್ ಸೆಷನ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
68
ಇದೀಗ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಹೊರಬಿದ್ದಿದ್ದು, ಇಂಗ್ಲೆಂಡ್‌ಗೆ ತೆರಳಿದ್ದ ಫಿಲ್ ಸಾಲ್ಟ್ ಇಂದು ಮುಂಜಾನೆ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಸದ್ಯ ಸಾಲ್ಟ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
78
ಫಿಲ್ ಸಾಲ್ಟ್ ತಂಡ ಕೂಡಿಕೊಂಡಿದ್ದು, ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ಬರುವಂತೆ ಮಾಡಿದೆ. ಕಳೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸಾಲ್ಟ್ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಬೆಂಗಳೂರು ತಂಡ ಫೈನಲ್ ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
88
ಆರ್‌ಸಿಬಿ ತಂಡವು ಫೈನಲ್‌ನಲ್ಲಿಂದು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ, ಚೊಚ್ಚಲ ಕಪ್ ಎತ್ತಿಹಿಡಿಯಲಿ ಎನ್ನುವುದು ಲಕ್ಷಾಂತರ ಅಭಿಮಾನಿಗಳ ಹಾರೈಕೆಯಾಗಿದೆ. ಆಲ್ ದಿ ಬೆಸ್ಟ್ ಆರ್‌ಸಿಬಿ.