IPL 2024 ಈ ದಿಗ್ಗಜ ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್‌..? ಈ ಪಟ್ಟಿಯಲ್ಲಿವೆ ಇಂಟ್ರೆಸ್ಟಿಂಗ್ ಹೆಸರುಗಳು

Published : Dec 18, 2023, 12:36 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. 2024ರ ಐಪಿಎಲ್ ಹಲವು ದಿಗ್ಗಜ ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ. ಕೊನೆಯ ಐಪಿಎಲ್ ಆಡುವಂತಹ ಆಟಗಾರರು ಯಾರೆಲ್ಲಾ ಇದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
19
IPL 2024 ಈ ದಿಗ್ಗಜ ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್‌..? ಈ ಪಟ್ಟಿಯಲ್ಲಿವೆ ಇಂಟ್ರೆಸ್ಟಿಂಗ್ ಹೆಸರುಗಳು
1. ಎಂ ಎಸ್ ಧೋನಿ:

ಮಹೇಂದ್ರ ಸಿಂಗ್ ಧೋನಿ ಅವರಿಗೀಗ 42 ವರ್ಷ ವಯಸ್ಸು. ವೈಯುಕ್ತಿಕ ಹಾಗೂ ಫಿಟ್ನೆಸ್ ಕಾರಣಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ವಿದಾಯದ ಐಪಿಎಲ್ ಟೂರ್ನಿ ಆಡುವ ಸಾಧ್ಯತೆಯಿದೆ.
 

29

ಕಳೆದೆರಡು ವರ್ಷಗಳಿಂದ ಧೋನಿ ಐಪಿಎಲ್‌ಗೆ ವಿದಾಯ ಹೇಳಬಹುದು ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಕುಟುಂಬದ ಜತೆ ಹೆಚ್ಚು ಕಾಲಕಳೆಯುವ ಉದ್ದೇಶದಿಂದ ಐಪಿಎಲ್‌ಗೆ ಧೋನಿ ಗುಡ್‌ಬೈ ಹೇಳುವ ಸಾಧ್ಯತೆ ಹೆಚ್ಚು.
 

39
2. ಅಮಿತ್ ಮಿಶ್ರಾ:

ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾಗೆ ಈಗ 41 ವರ್ಷ ವಯಸ್ಸು. ವಯಸ್ಸಿನ ಕಾರಣದಿಂದ ಈ ಬಾರಿಯ ಐಪಿಎಲ್ ಅಮಿತ್ ಮಿಶ್ರಾ ಪಾಲಿಗೂ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ.
 

49

ಸದ್ಯ ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಮಿತ್ ಮಿಶ್ರಾ, ಐಪಿಎಲ್‌ ಕಂಡ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. 

59
3. ವೃದ್ದಿಮಾನ್ ಸಾಹ:

ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಅವರಿಗೀಗ 39 ವರ್ಷ. ಹಲವು ವರದಿಗಳ ಪ್ರಕಾರ ಅನುಭವಿ ಕ್ರಿಕೆಟಿಗ ಸಾಹ ಅವರಿಗೆ ಇದು ಕೊನೆಯ ಐಪಿಎಲ್ ಆಗುವ ಸಾಧ್ಯತೆ ದಟ್ಟವಾಗಿದೆ.

69

ವೃದ್ದಿಮಾನ್ ಸಾಹ ಈಗಾಗಲೇ ಕೋಲ್ಕತಾ ನೈಟ್ ರೈಡರ್ಸ್‌, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್‌ನಂತಹ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಸಾಹ ಸದ್ಯ ಗುಜರಾತ್ ತಂಡದಲ್ಲಿದ್ದಾರೆ.

79
4. ಪೀಯೂಸ್ ಚಾವ್ಲಾ:

ಮುಂಬೈ ಇಂಡಿಯನ್ಸ್‌ ಅನುಭವಿ ಸ್ಪಿನ್ನರ್ ಪೀಯೂಸ್ ಚಾವ್ಲಾ, ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಈ ಐಪಿಎಲ್ ಚಾವ್ಲಾ ಪಾಲಿಗೂ ಕೊನೆಯ ಐಪಿಎಲ್ ಆಗುವುದು ಬಹುತೇಕ ಖಚಿತ

89
5. ದಿನೇಶ್ ಕಾರ್ತಿಕ್:

ಐಪಿಎಲ್‌ನ ಯಶಸ್ವಿ ವಿಕೆಟ್ ಕೀಪರ್ ಬ್ಯಾಟರ್‌ಗಳಲ್ಲಿ ದಿನೇಶ್ ಕಾರ್ತಿಕ್ ಕೂಡಾ ಒಬ್ಬರು. ಸದ್ಯ ದಿನೇಶ್ ಕಾರ್ತಿಕ್‌ಗೆ 37 ವರ್ಷಗಳಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 
 

99
6. ಶಿಖರ್ ಧವನ್:

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವ ಧವನ್, ಈ ಐಪಿಎಲ್ ಬಳಿಕ ಕ್ರಿಕೆಟ್‌ಗೆ ಸನ್ಯಾಸತ್ವ ತೆಗೆದುಕೊಂಡರೆ ಅಚ್ಚರಿಯಿಲ್ಲ.
 

Read more Photos on
click me!

Recommended Stories