ಲಕ್ನೋದಲ್ಲಿ ರೈಲ್ವೆ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಉಪೇಂದ್ರ ಯಾದವ್ (Upendra Yadav) ಐಪಿಎಲ್‌ನಲ್ಲಿ (IPL) ಕನಸಿನ ಚೊಚ್ಚಲ ಪ್ರವೇಶ ಪಡೆದಿದ್ದಾರೆ. ಇತ್ತೀಚೆಗಷ್ಟೇ ಆಡಿದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಉಪೇಂದ್ರ ಯಾದವ್ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಆಟ ತೋರಲು ರೆಡಿಯಾಗಿದ್ದಾರೆ.
ರಣಜಿ ಟ್ರೋಫಿ ಪಂದ್ಯದಲ್ಲಿ ಏಳು, ಎಂಟನೇ ಮತ್ತು ಒಂಬತ್ತನೇ ವಿಕೆಟ್ ಪಾರ್ಟನರ್‌ಶಿಪ್‌ಗೆ ಉಪೇಂದ್ರ ಸಿಂಗ್ ಯಾದವ್ ಅವರು ಸಿಡಿಸಿದ ಅಜೇಯ ದ್ವಿಶತಕ (239 ಬಾಲ್‌ನಲ್ಲಿ) ಐಪಿಎಲ್ ಸೆಲೆಕ್ಟರ್‌ಗಳ ಗಮನ ಸೆಳೆದಿದೆ.
26
ಇದಕ್ಕೂ ಮೊದಲು ಉಪೇಂದ್ರ ಯಾದವ್ ಅವರು ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ 70 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್ ಕಾರಣದಿಂದ ಯುಪಿ ತಂಡವು ಬಿ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿತು.
36
Iಉತ್ತರ ಪ್ರದೇಶದ ವಿಕೆಟ್‌ಕೀಪರ್ ಬ್ಯಾಟ್ಸ್‌ಮ್ಯಾನ್ ಉಪೇಂದ್ರ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ಮೂಲ ಬೆಲೆಗೆ ಖರೀದಿಸಲು ಪ್ರಯತ್ನಿಸಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ಈ ಆಟಗಾರನನ್ನು 25 ಲಕ್ಷಕ್ಕೆ ತಮ್ಮ ತಂಡಕ್ಕೆ ಸೇರಿಸಿಕೊಂಡರು.
46
ಉಪೇಂದ್ರ ಯಾದವ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೂರನೇ ವಿಕೆಟ್ ಕೀಪರ್ ಆಗಿದ್ದಾರೆ. ತಂಡವು ಈಗಾಗಲೇ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಹೆನ್ರಿಕ್ ಕ್ಲಾಸೆನ್ ಮತ್ತು ನ್ಯೂಜಿಲೆಂಡ್ ವಿಕೆಟ್ ಕೀಪರ್ ಗ್ಲೆನ್ ಫಿಲಿಪ್ಸ್ ಅವರನ್ನು ಖರೀದಿಸಿದೆ.
56
ನಿವೃತ್ತ ಯುಪಿ ಸಬ್ ಇನ್ಸ್‌ಪೆಕ್ಟರ್ ದಿವಾನ್ ಸಿಂಗ್ ಯಾದವ್ ಅವರ ಪುತ್ರ ಉಪೇಂದ್ರ ಯಾದವ್ ಅವರು ತಮ್ಮ ಯಶಸ್ಸಿನ ಶ್ರೇಯವನ್ನು ಹಿರಿಯ ಸಹೋದರ ವರುಣ್ ಯಾದವ್‌ಗೆ ನೀಡುತ್ತಾರೆ.
66
ಕ್ರಿಕೆಟಿಗನಾಗುವ ಕನಸನ್ನು ತೋರಿಸಿದ್ದು ನನ್ನ ಸಹೋದರ ಎಂದು ಉಪೇಂದ್ರ ಹೇಳಿದ್ದಾರೆ. ಉಪೇಂದ್ರ ಅವರು ವಿಜ್ಞಾನ ಪದವೀಧರರಾಗಿದ್ದು, 2017ರಲ್ಲಿ ರೈಲ್ವೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು.