IPL Auction 2022: ಹರಾಜಿನಲ್ಲಿ ಪಾಲ್ಗೊಳ್ಳಲು ಕ್ರಿಸ್‌ ಗೇಲ್‌ಗೆ ಗಾಳ ಹಾಕಿದ್ದ ಫ್ರಾಂಚೈಸಿಗಳು..!

Suvarna News   | Asianet News
Published : Feb 02, 2022, 07:09 PM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League) ಕ್ರಿಸ್‌ ಗೇಲ್‌ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹೀಗಿದ್ದೂ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ (Chris Gayle) 2022ರ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೆಲ ಫ್ರಾಂಚೈಸಿಗಳು ಕ್ರಿಸ್‌ ಗೇಲ್‌ ಅವರು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
16
IPL Auction 2022: ಹರಾಜಿನಲ್ಲಿ ಪಾಲ್ಗೊಳ್ಳಲು ಕ್ರಿಸ್‌ ಗೇಲ್‌ಗೆ ಗಾಳ ಹಾಕಿದ್ದ ಫ್ರಾಂಚೈಸಿಗಳು..!

ವೆಸ್ಟ್ ಇಂಡೀಸ್‌ ಸ್ಪೋಟಕ ಬ್ಯಾಟರ್ ಕ್ರಿಸ್‌ ಗೇಲ್‌, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಹಲವು ಅಪರೂಪದ ದಾಖಲೆಗಳನ್ನು ಕ್ರಿಸ್ ಗೇಲ್ ನಿರ್ಮಿಸಿದ್ದಾರೆ. ಇದರ ಹೊರತಾಗಿಯೂ ಕ್ರಿಸ್ ಗೇಲ್‌ 2022ರ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ.

Photo- iplt20.com

26

ಇನ್ನು ತುಂಬಾ ಕುತೂಹಲಕಾರಿ ಸಂಗತಿಯೆಂದರೆ, ಕ್ರಿಸ್‌ ಗೇಲ್ ಅವರು ಪ್ರತಿನಿಧಿಸಿದ್ದ ಈ ಹಿಂದಿನ ತಂಡಗಳ ಫ್ರಾಂಚೈಸಿಗಳು ಕ್ರಿಸ್‌ ಗೇಲ್ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

36

ಇನ್ನು ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೂಡಾ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಫ್ರಾಂಚೈಸಿಗಳು ಮನವೊಲಿಸಿದ್ದಾಗಿಯೂ ವರದಿಯಾಗಿದೆ. ಆದರೆ ಈ ಇಬ್ಬರು ಕ್ರಿಕೆಟಿಗರು ಐಪಿಎಲ್‌ ಹರಾಜಿನಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. 

46

2011ರಿಂದ 2017ರವರೆಗೆ ಕ್ರಿಸ್ ಗೇಲ್‌, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸದಸ್ಯರಾಗಿದ್ದರು. 85 ಐಪಿಎಲ್ ಪಂದ್ಯಗಳಿಂದ 43.33 ರ ಬ್ಯಾಟಿಂಗ್ ಸರಾಸರಿಯಲ್ಲಿ 3,163 ರನ್ ಬಾರಿಸಿದ್ದಾರೆ. ಇನ್ನು 2018ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಗೇಲ್‌ ಕಳೆದ 3 ವರ್ಷಗಳ ಕಾಲ 41 ಪಂದ್ಯಗಳನ್ನಾಡಿ 1,339 ರನ್ ಬಾರಿಸಿದ್ದಾರೆ.

56

ಇದಕ್ಕೂ ಮೊದಲು ಕ್ರಿಸ್ ಗೇಲ್ 2008-2010ರ ಅವಧಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ಪರ ಗೇಲ್ 16 ಪಂದ್ಯಗಳಿಂದ 463 ರನ್ ಬಾರಿಸಿದ್ದರು. ಒಟ್ಟಾರೆ ಕ್ರಿಸ್‌ ಗೇಲ್‌ ಒಟ್ಟು 142 ಐಪಿಎಲ್ ಪಂದ್ಯಗಳನ್ನಾಡಿ 39.7ರ ಬ್ಯಾಟಿಂಗ್ ಸರಾಸರಿಯಲ್ಲಿ 4,965 ರನ್‌ ಬಾರಿಸಿದ್ದಾರೆ.

66

ಇದೀಗ ಮೊದಲ ಬಾರಿಗೆ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ಇಲ್ಲದೇ ಐಪಿಎಲ್ ಕ್ರೀಡಾಕೂಟ ನಡೆಯಲಿದ್ದು, ಗೇಲ್ ಅನುಪಸ್ಥಿತಿ ಅಭಿಮಾನಿಗಳನ್ನು ಕಾಡುವ ಸಾಧ್ಯತೆಯಿದೆ.

Read more Photos on
click me!

Recommended Stories