1. ಸುರೇಶ್ ರೈನಾ
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅನ್‌ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ರೈನಾ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಒಲವು ತೋರಲಿಲ್ಲ. ರೈನಾ ಐಪಿಎಲ್‌ನಲ್ಲಿ ಒಟ್ಟು 205 ಪಂದ್ಯಗಳನ್ನಾಡಿ 5,528 ರನ್ ಬಾರಿಸಿದ್ದಾರೆ.
2. ಸ್ಟೀವ್ ಸ್ಮಿತ್
ಆಸ್ಟ್ರೇಲಿಯಾದ ರನ್ ಮಷೀನ್ ಸ್ಟೀವ್ ಸ್ಮಿತ್ ಕೂಡಾ ಈ ಬಾರಿಗೆ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮಿತ್ ಅನ್‌ಸೋಲ್ಡ್ ಆಗಿ ನಿರಾಸೆ ಅನುಭವಿಸಿದ್ದಾರೆ.
Image Credit: Getty Images
3. ಶಕೀಬ್ ಅಲ್ ಹಸನ್
ಐಸಿಸಿ ಏಕದಿನ ಆಲ್ರೌಂಡರ್‌ಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಹಾಗೂ ಟಿ20 ಆಲ್ರೌಂಡರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಹೊಂದಿರುವ ಶಕೀಬ್ ಅಲ್ ಹಸನ್ ಕೂಡಾ ಅನ್‌ಸೋಲ್ಡ್ ಆದರು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಶಕೀಬ್ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಒಲವು ತೋರಲಿಲ್ಲ
Suvarna IPL 2022-Adil
4. ಆದಿಲ್ ರಶೀದ್
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್‌ನ ಸ್ಟಾರ್ ಲೆಗ್ ಸ್ಪಿನ್ನರ್ ಆದಿಲ್ ರಶೀದ್, ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಗಿದ್ದೂ ರಶೀದ್ ಅನ್‌ಸೋಲ್ಡ್ ಆಗಿದ್ದಾರೆ.
Suvarna IPL 2022-Imran
5. ಇಮ್ರಾನ್ ತಾಹಿರ್
ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಅತ್ಯಂತ ಶಿಸ್ತುಬದ್ದ ದಾಳಿಗೆ ಹೆಸರುವಾಸಿಯಾಗಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಮ್ರಾನ್ ತಾಹಿರ್ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಒಲವು ತೋರಲಿಲ್ಲ.
Suvarna IPL 2022-Aaron Finch
6. ಆ್ಯರೋನ್ ಫಿಂಚ್
ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್, 2020ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 12 ಪಂದ್ಯಗಳಿಂದ 268 ರನ್ ಬಾರಿಸಿದ್ದರು. ಹೀಗಿದ್ದೂ ಈ ಬಾರಿಯ ಹರಾಜಿನಲ್ಲಿ ಫಿಂಚ್ ಖರೀದಿಸಲು ಯಾವ ಫ್ರಾಂಚೈಸಿಯು ಮನಸು ಮಾಡಲಿಲ್ಲ.
Suvarna IPL 2022-Dawid Malan
7. ಡೇವಿಡ್ ಮಲಾನ್
ಇಂಗ್ಲೆಂಡ್‌ನ ಅಗ್ರಶ್ರೇಯಾಂಕಿತ ಬ್ಯಾಟರ್ ಡೇವಿಡ್ ಮಲಾನ್ ಅವರ ಮೂಲ ಬೆಲೆ 1.5 ಕೋಟಿ ರುಪಾಯಿ ನಿಗದಿಯಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟರ್ ಎನಿಸಿಕೊಂಡಿರುವ ಮಲಾನ್ ಐಪಿಎಲ್ ಫ್ರಾಂಚೈಸಿಗಳ ಮನ ಗೆಲ್ಲದೇ ಹೋದದ್ದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
8. ಇಯಾನ್ ಮಾರ್ಗನ್
ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮಾರ್ಗನ್, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ನಾಯಕನಾಗಿ ಕೆಕೆಆರ್ ತಂಡವನ್ನು ಫೈನಲ್‌ಗೇರಿಸಿದ್ದರು. ಆದರೆ ಮಾರ್ಗನ್ ಅವರಿಂದ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಾರ್ಗನ್ ಅನ್‌ಸೋಲ್ಡ್ ಆದರು.
9. ಕ್ರಿಸ್ ಲಿನ್
ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಕ್ರಿಸ್ ಲಿನ್, ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆರಂಭಿಕ ಬ್ಯಾಟರ್. ಆದರೆ ಈ ಬಾರಿಯ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಲಿನ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಪರಿಣಾಮ 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಕ್ರಿಸ್ ಲಿನ್ ಅನ್‌ಸೋಲ್ಡ್ ಆದರು.
10. ತಬ್ರೀಜ್ ಶಮ್ಸಿ
ದಕ್ಷಿಣ ಆಫ್ರಿಕಾದ ತಾರಾ ಸ್ಪಿನ್ನರ್ ತಬ್ರಿಜ್ ಶಮ್ಸಿ, ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ 1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಶಮ್ಸಿಯನ್ನು ಯಾವ ಫ್ರಾಂಚೈಸಿಯು ಖರೀದಿಸಲು ಒಲವು ತೋರಲಿಲ್ಲ.