IPL 2021: ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!

First Published | Feb 18, 2021, 10:23 PM IST

ಬೆಂಗಳೂರು: ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಈ ಬಾರಿಯ ಹರಾಜು ಮತ್ತಷ್ಟು ರಂಗೇರುವಂತೆ ಮಾಡಿದೆ. ದಕ್ಷಿಣ ಆಫ್ರಿಕಾ ಆಲ್ರೌಂಡರ್‌ 16.25 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇನ್ನು ಈ ಬಾರಿಯ ಆಟಗಾರರ ಹರಾಜಿನಲ್ಲಿ ದೇಸಿ ಆಟಗಾರರಿಗೂ ಜಾಕ್‌ಪಾಟ್ ಹೊಡೆದಿದೆ.
14ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಭಾರತದ ಟಾಪ್‌ 5 ಆಟಗಾರರ ವಿವರ ಇಲ್ಲಿದೆ ನೋಡಿ.
 

1. ಕೃಷ್ಣಪ್ಪ ಗೌತಮ್‌: 9.25 ಕೋಟಿ ರುಪಾಯಿ
ಕರ್ನಾಟಕದ ಅನುಭವಿ ಆಲ್ರೌಂಡರ್‌ ಕೃಷ್ಣಪ್ಪ ಗೌತಮ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 9.25 ಕೋಟಿ ನೀಡಿ ಖರೀದಿಸಿದೆ. ಈ ಮೂಲಕ ಈ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದುಕೊಂಡ ಭಾರತದ ಆಟಗಾರ ಎನ್ನುವ ಕೀರ್ತಿ ಕನ್ನಡಿಗನ ಪಾಲಾಗಿದೆ.
Tap to resize

2. ಶಾರುಕ್ ಖಾನ್‌: 5.25 ಕೋಟಿ ರುಪಾಯಿ
ಪ್ರತಿಭಾನ್ವಿತ ಆಲ್ರೌಂಡರ್‌ ಶಾರುಕ್‌ ಖಾನ್‌ರನ್ನು ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ಬರೋಬ್ಬರಿ 5.25 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಎಲ್ಲರನ್ನು ಅಚ್ಚರಿಗೆ ನೂಕುವಂತೆ ಮಾಡಿದೆ.
3. ಶಿವಂ ದುಬೆ: 4.40 ಕೋಟಿ ರುಪಾಯಿ
ಮುಂಬೈ ಮೂಲದ ಪ್ರತಿಭಾನ್ವಿತ ಆಲ್ರೌಂಡರ್‌ ಶಿವಂ ದುಬೆಯನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಬರೋಬ್ಬರಿ 4.40 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
4. ಪೀಯೂಸ್‌ ಚಾವ್ಲಾ: 2.40 ಕೋಟಿ ರುಪಾಯಿ
ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾರನ್ನು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2.4 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.
5. ಹರ್ಭಜನ್‌ ಸಿಂಗ್& ಕೇದಾರ್ ಜಾಧವ್‌ಗೆ 2 ಕೋಟಿ ರುಪಾಯಿ
ಟೀಂ ಇಂಡಿಯಾ ಕ್ರಿಕೆಟಿಗರಾದ ಹರ್ಭಜನ್ ಸಿಂಗ್‌ರನ್ನು ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಕೇದಾರ್ ಜಾಧವ್‌ರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮೂಲ ಬೆಲೆ 2 ಕೋಟಿ ರುಪಾಯಿ ನೀಡಿ ಖರೀದಿಸಿದೆ.

Latest Videos

click me!