IPL ಹರಾಜಿನಲ್ಲಿ ಖರೀದಿಸಿದ RCB ಪ್ಲೇಯರ್ಸ್; ಇಲ್ಲಿದೆ ಫುಲ್ ಲಿಸ್ಟ್!

First Published | Feb 18, 2021, 10:11 PM IST

IPL ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ.  ಈ ಬಾರಿಯ ಹರಾಜಿನಲ್ಲಿ 2ನೇ ಗರಿಷ್ಠ ಖರೀದಿ ಮಾಡಿದ ಹೆಗ್ಗಳಿಕೆಗೂ ಆರ್‌ಸಿಬಿ ಪಾತ್ರವಾಗಿದೆ. ಕೈಲ್ ಜ್ಯಾಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದೇಸಿ ಕ್ರಿಕೆಟಿಗರನ್ನು ಆರ್‌ಸಿಬಿ ತಂಡ ಆಯ್ಕೆ ಮಾಡಿದೆ. ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ 8 ಪ್ಲೇಯರ್ಸ್ ವಿವರ ಇಲ್ಲಿದೆ

ಐಪಿಎಲ್ 2021 ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಉತ್ತಮ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡ ಕಟ್ಟಿದೆ. ಈ ಮೂಲಕ 2021ರ ಐಪಿಎಲ್ ಟೂರ್ನಿಗೆ ಆರ್‌ಸಿಬಿ ಅತ್ಯುತ್ತಮ ತಂಡ ರಚಿಸಿದೆ.
undefined
ಈ ಬಾರಿಯ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತದ ಖರೀದಿಗೆ ಕೈಲ್ ಜ್ಯಾಮಿಸನ್ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ಕೈಲ್ ಜ್ಯಾಮಿಸನ್ ಬರೋಬ್ಬರಿ 15 ಕೋಟಿ ರೂಪಾಯಿಗೆ ಸೇಲಾಗಿದ್ದಾರೆ.
undefined

Latest Videos


ಜಿದ್ದಿಗೆ ಬಿದ್ದ ಆರ್‌ಸಿಬಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 14.25 ಕೋಟಿ ರೂಪಾಯಿ ನೀಡಿ ಖರೀದಿಸಿತು. ಅಲ್ರೌಂಡರ್ ಆಟಗಾರನ ಹುಡುಕಾಟದಲ್ಲಿದ್ದ ಬೆಂಗಳೂರು ತಂಡ ಸಮರ್ಥ ಆಟಗಾರನ ಆಯ್ಕೆ ಮಾಡಿದೆ. ಆದರೆ ಮ್ಯಾಕ್ಸ್‌ವೆಲ್ ಫಾರ್ಮ್ ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
undefined
ಅಂತಿಮ ಹಂತದಲ್ಲಿ ಹರಾಜಿನಲ್ಲಿ ಆರ್‌ಸಿಬಿ ಆಸ್ಟ್ರೇಲಿಯನ್ ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಖರೀದಿ ಮಾಡಿತು. ಡೇನಿಯಲ್‌ಗೆ 4.80 ಕೋಟಿ ರೂಪಾಯಿ ನೀಡಿತು.
undefined
ಸ್ಟಾರ್ ಕ್ರಿಕೆಟಿಗರ ಬಳಿಕ ದೇಸಿ ಕ್ರಿಕೆಟಿಗರನ್ನು ಆರ್‌ಸಿಬಿ ಖರೀದಿಸಿತು. ಕೇರಳ ಬ್ಯಾಟ್ಸ್‌ಮನ್ ಸಚಿನ್ ಬೇಬಿಯನ್ನು ಮೂಲ ಬೆಲೆ 20 ಲಕ್ಷ ರೂಪಾಯಿ ಬೆಲೆಗೆ ಆರ್‌ಸಿಬಿ ಖರೀದಿಸಿತು.
undefined
ಮಧ್ಯ ಪ್ರದೇಶದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ರಜತ್ ಪಾಟೀದಾರ್‌ಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು.
undefined
ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿ ದೇಶದ ಗಮನಸೆಳೆದ ಕೇರಳ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್‌ಗೆ 20 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿತು
undefined
ಗೋವಾ ಕ್ರಿಕೆಟಿಗ ಸುಯಾಶ್ ಪ್ರಭುದೇಸಾಯಿ 2016-17ರಲ್ಲಿ ವಿಜಯ್ ಹಜಾರೆ ಮೂಲಕ ದೇಸಿ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡರು. ಸುಯಾಶ್‌ಗೆ ಆರ್‌ಸಿಬಿ 20 ಲಕ್ಷ ರೂಪಾಯಿ ನೀಡಿ ಖರೀದಿಸಿತು.
undefined
ಕೆಸ್ ಭರತ್ ಎಂದೇ ಖ್ಯಾತಿ ಪಡೆದಿರುವ ಆಂಧ್ರ ಪ್ರದೇಶದ ಕ್ರಿಕೆಟಿಗ ಇದೀಗ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. 20 ಲಕ್ಷ ರೂಪಾಯಿ ಮೂಲ ಬೆಲೆಗೆ ಆರ್‌ಸಿಬಿ ಖರೀದಿಸಿದ್ದಾರೆ.
undefined
click me!