IPL 2026 ಮಿನಿ ಹರಾಜಿನಲ್ಲಿ ಈ 4 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು!

Published : Dec 14, 2025, 06:06 PM IST

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಈ ಹರಾಜಿನಲ್ಲಿ ಈ 4 ಆಟಗಾರರನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ. 

PREV
110
ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ಕ್ಕೆ

19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಇದೇ ಡಿಸೆಂಬರ್ 16ರಂದು ಆರಂಭವಾಗಲಿದೆ. ಈ ಮಿನಿ ಹರಾಜಿಗೆ ಒಟ್ಟು 350 ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಈ ಪೈಕಿ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ.

210
ಈ ನಾಲ್ವರ ಮೇಲೆ ಎಲ್ಲಾ ಫ್ರಾಂಚೈಸಿ ಕಣ್ಣು

ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಕೆಲವು ಆಟಗಾರರ ಮೇಲೆ ದುಡ್ಡಿನ ಮಳೆ ಸುರಿಯುವ ನಿರೀಕ್ಷೆಯಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಈ 4 ಆಟಗಾರರ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

310
1. ಕ್ಯಾಮರೋನ್ ಗ್ರೀನ್

ಈ ಪಟ್ಟಿಯಲ್ಲಿರುವ ಮೊದಲ ಹೆಸರು ಆಸ್ಟ್ರೇಲಿಯಾ ಮೂಲದ ಕ್ಯಾಮರೋನ್ ಗ್ರೀನ್. ಗ್ರೀನ್ ಗಾಯದ ಸಮಸ್ಯೆಯಿಂದ ಕಳೆದ ಐಪಿಎಲ್ ಆಡಿರಲಿಲ್ಲ. ಹೀಗಾಗಿ ಈ ಬಾರಿ ಗ್ರೀನ್ ಮೇಲೆ ಎಲ್ಲರ ಕಣ್ಣಿದೆ.

410
ಗ್ರೀನ್‌ ಮೇಲೆ ಕಣ್ಣಿಟ್ಟ ಕೆಕೆಆರ್-ಸಿಎಸ್‌ಕೆ

ಅದರಲ್ಲೂ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ರಿಲೀಸ್ ಮಾಡಿದ್ದು ಸ್ಟಾರ್ ಆಲ್ರೌಂಡರ್ ಹುಡುಕಾಟದಲ್ಲಿದೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ವಿದೇಶಿ ಮಧ್ಯಮ ಕ್ರಮಾಂಕದ ಆಲ್ರೌಂಡ್ ಆಟಗಾರನ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ಎರಡು ಫ್ರಾಂಚೈಸಿಗಳು ಗ್ರೀನ್ ಮೇಲೆ ಕಣ್ಣಿಟ್ಟಿವೆ.

510
2. ಲಿಯಾಮ್ ಲಿವಿಂಗ್‌ಸ್ಟೋನ್

ಈ ಪಟ್ಟಿಯಲ್ಲಿರುವ ಇನ್ನೊಂದು ಹೆಸರು ಇಂಗ್ಲೆಂಡ್ ಮೂಲದ ಲಿಯಾಮ್ ಲಿವಿಂಗ್‌ಸ್ಟೋನ್. ಈ ಆಲ್ರೌಂಡರ್ ಏಕಾಂಗಿಯಾಗಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಲಿವಿಂಗ್‌ಸ್ಟೋನ್ ಬ್ಯಾಟ್ ಘರ್ಜಿಸಿದ್ರೆ ಎದುರಾಳಿ ಪಡೆಗೆ ಉಳಿಗಾಲವಿಲ್ಲ.

610
ಲಿವಿಂಗ್‌ಸ್ಟೋನ್‌ಗೆ ಈ ಬಾರಿ ಜಾಕ್‌ಪಾಟ್?

ಕಳೆದ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಲಿವಿಂಗ್‌ಸ್ಟೋನ್‌ಗೆ 8.75 ಕೋಟಿ ನೀಡಿ ಖರೀದಿಸಿತ್ತು. ಆದರೆ, ಟಿಮ್ ಡೇವಿಡ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಉಳಿಸಿಕೊಂಡು ಲಿವಿಂಗ್‌ಸ್ಟೋನ್ ರಿಲೀಸ್ ಮಾಡಿದೆ. ಈ ಬಾರಿ ಲಿವಿಂಗ್‌ಸ್ಟೋನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

710
3. ಮಥೀಶ್ ಪತಿರಾಣ:

ಶ್ರೀಲಂಕಾ ಮೂಲದ ಮಾರಕ ವೇಗಿ ಮಥೀಶ್ ಪತಿರಾಣಾ ಅವರನ್ನು ಸಿಎಸ್‌ಕೆ ಫ್ರಾಂಚೈಸಿ 13 ಕೋಟಿ ನೀಡಿ ಖರೀದಿಸಿತ್ತು. ಆದರೆ ಫಿಟ್ನೆಸ್ ಕಾರಣದಿಂದಾಗಿ ಸಿಎಸ್‌ಕೆ ಫ್ರಾಂಚೈಸಿಯು ಈ ವೇಗಿಯನ್ನು ರಿಲೀಸ್ ಮಾಡಿದೆ.

810
ಲಂಕಾ ವೇಗಿ ಮೇಲೆ ಹಲವರ ಕಣ್ಣು

ಹೀಗಿದ್ದು ಪತಿರಾಣ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಬಹುದು. ಸಿಎಸ್‌ಕೆ ಫ್ರಾಂಚೈಸಿಯು ಮತ್ತೊಮ್ಮೆ ಪತಿರಾಣ ಖರೀದಿಸುವ ಸಾಧ್ಯತೆಯಿದೆ. ಇದರ ಜತೆಗೆ ಕೆಕೆಆರ್, ಪಂಜಾಬ್ ಕಿಂಗ್ಸ್ ಕೂಡಾ ಓರ್ವ ವಿದೇಶಿ ವೇಗಿಯ ಹುಡುಕಾಟದಲ್ಲಿದ್ದು, ಪತಿರಾಣಗೆ ಜಾಕ್‌ಪಾಟ್ ಹೊಡೆಯುವ ಸಾಧ್ಯತೆಯಿದೆ.

910
4. ರವಿ ಬಿಷ್ಣೋಯಿ

ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯುವ ಪ್ರಮುಖ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ರಿಲೀಸ್ ಮಾಡಿದೆ. ದಿಗ್ವೇಶ್ ರಾಠಿಯಿಂದಾಗಿ ರವಿ ಬಿಷ್ಣೋಯಿ ಅವರನ್ನು ರಿಲೀಸ್ ಮಾಡುವ ದೊಡ್ಡ ತೀರ್ಮಾನ ಮಾಡಿದ ಲಖನೌ.

1010
ಬಿಷ್ಣೋಯಿ ಮೇಲೆ ಎಲ್ಲರ ಕಣ್ಣು

ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಓರ್ವ ಪ್ರಮುಖ ಸ್ಪಿನ್ನರ್ ಹುಡುಕಾಟದಲ್ಲಿದ್ದು, ಬಿಷ್ಣೋಯಿ ಒಳ್ಳೆಯ ಆಯ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ರವಿ ಬಿಷ್ಣೋಯಿ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

Read more Photos on
click me!

Recommended Stories