ದ್ವಾರಕಾ: ಟೀಂ ಇಂಡಿಯಾ ಕ್ರಿಕೆಟಿಗರ ಕುರಿತಂತೆ ರವೀಂದ್ರ ಜಡೇಜಾ ಅವರ ಪತ್ನಿ ಆಡಿದ ಮಾತು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ಪತಿಗೆ ದುಶ್ಚಟವಿಲ್ಲ, ಆದರೆ ಉಳಿದವರಿಗೆ ಇದೆ ಎನ್ನುವುದು ಜಡ್ಡು ಪತ್ನಿ ಹಾಗೂ ಗುಜರಾತ್ ಸಚಿವೆ ರಿವಾಬಾ ಜಡೇಜಾ ಮಾತಾಗಿದೆ.
ಟೀಂ ಇಂಡಿಯಾ ಕ್ರಿಕೆಟಿಗರಿಗೆ ತನ್ನದೇ ಆದ ಗೌರವ ಇದೆ. ಆದರೆ ಇತ್ತೀಚೆಗೆ ರವೀಂದ್ರ ಜಡೇಜಾ ಅವರ ಪತ್ನಿ ನೀಡಿದ ಒಂದು ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
28
ವಿವಾದ ಹುಟ್ಟುಹಾಕಿದ ಜಡೇಜಾ ಪತ್ನಿ
ಗುಜರಾತ್‌ನ ಶಿಕ್ಷಣ ಸಚಿವೆ ಮತ್ತು ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಇತ್ತೀಚೆಗೆ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
38
ನನ್ನ ಪತಿಗೆ ಯಾವುದೇ ವ್ಯಸನವಿಲ್ಲ
ಗುಜರಾತ್‌ನ ದ್ವಾರಕಾದಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಮಾತನಾಡಿದ ರಿವಾಬಾ, ‘ನನ್ನ ಪತಿ ಕ್ರಿಕೆಟ್ ಆಡಲು ಲಂಡನ್, ದುಬೈ, ಆಸ್ಟ್ರೇಲಿಯಾದಂತಹ ದೇಶಗಳಿಗೆ ಪ್ರಯಾಣಿಸುತ್ತಾರೆ. ಆದರೆ ಅವರಿಗೆ ಇಂದಿಗೂ ಯಾವುದೇ ರೀತಿಯ ವ್ಯಸನ ಅಥವಾ ದುಶ್ಚಟಗಳಿಲ್ಲ.
ಏಕೆಂದರೆ, ಅವರು ತಮ್ಮ ಜವಾಬ್ದಾರಿ ಏನೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ತಂಡದ ಇತರೆಲ್ಲರೂ ದುಶ್ಚಟಗಳಲ್ಲಿ ತೊಡಗುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿಲ್ಲ.
58
ಪತಿಯ ಬೆಂಬಲಕ್ಕೆ ನಿಂತ ರಿವಾಬಾ
ನನ್ನ ಪತಿ ಹನ್ನೆರಡು ವರ್ಷಗಳಿಂದ ಮನೆಯಿಂದ ದೂರವಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು. ಆದರೆ ನೈತಿಕ ಕರ್ತವ್ಯ ಮತ್ತು ತಾವು ಏನು ಮಾಡಬೇಕೆಂದು ಅವರು ಅರ್ಥಮಾಡಿಕೊಂಡಿದ್ದಾರೆ. ನಾವು ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ’ ಎಂದಿದ್ದಾರೆ.
68
ವಿವಾದಕ್ಕೆ ಎಡೆ ಮಾಡಿಕೊಟ್ಟ ರಿವಾಬಾ ಹೇಳಿಕೆ
'ನನ್ನ ಗಂಡನಿಗೆ ಯಾವುದೇ ದುಶ್ಚಟಗಳಿಲ್ಲ, ಆದರೆ ತಂಡದ ಇತರೆಲ್ಲರೂ ದುಶ್ಚಟಗಳಲ್ಲಿ ತೊಡಗುತ್ತಾರೆ' ಎನ್ನುವ ಜಡೇಜಾ ಪತ್ನಿಯ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
78
ಭಾರತ ಟೆಸ್ಟ್ & ಏಕದಿನ ತಂಡದ ಅವಿಭಾಜ್ಯ ಅಂಗ
ಕಳೆದ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ರವೀಂದ್ರ ಜಡೇಜಾ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
88
ರಾಜಸ್ಥಾನ ರಾಯಲ್ಸ್ ಪಾಲಾದ ಜಡ್ಡು
ಇನ್ನು ಐಪಿಎಲ್‌ನಲ್ಲಿ ತನ್ನ ಬಹುಪಾಲು ವೃತ್ತಿಬದುಕನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದಿರುವ ಜಡ್ಡು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ.