RCB ಗೆದ್ದರೆ ಅಭಿಮಾನಿಗಳ ಆಸೆ ಈಡೇರಸ್ತಾರಾ ಸಿಎಂ ಸಿದ್ದರಾಮಯ್ಯ?

Published : May 31, 2025, 12:18 PM IST

ಕರ್ನಾಟಕ ಮುಖ್ಯಮಂತ್ರಿ, ಕ್ರಿಕೆಟ್ ಪ್ರೇಮಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಅಭಿಮಾನಿಗಳ ಆಸೆ ಈಡೇರುಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.

PREV
16

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಫೈನಲ್ ತಲುಪಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ಫೈನಲ್ ಪ್ರವೇಶಿಸಿದೆ. ಐಪಿಎಲ್‌ ಟ್ರೋಫಿ ಎತ್ತಿಹಿಡಿಯಲು ಒಂದು ಹೆಜ್ಜೆ ಮಾತ್ರ ಹಿಂದಿದೆ.

26

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪುತ್ತಿದ್ದಂತೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆರ್‌ಸಿಬಿ ತನ್ನ ಟ್ರೋಫಿ ಗೆದ್ರೆ ಇಡೀ ರಾಜ್ಯದ ತುಂಬೆಲ್ಲಾ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿಯೂ ಆರ್‌ಸಿಬಿ ಕೆಂಪು ಸೇನೆಯ ಸೈನಿಕರ ಫೋಟೋ ಮತ್ತು ವಿಡಿಯೋಗಳು ರಾರಾಜಿಸಲಿವೆ.

36

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಆರ್‌ಸಿಬಿ ವಿನ್ ಆದ್ರೆ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಆಸೆ ಈಡೇರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಹಾಗಾದ್ರೆ ಅಭಿಮಾನಿಗಳ ಆಸೆ ಏನು ಎಂದು ನೋಡೋಣ ಬನ್ನಿ.

46

ಅಭಿಮಾನಿಗಳ ಆಸೆ ಏನು?

ಈ ಬಾರಿಯ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಖಚಿತವಾಗಿದೆ. ಆದ್ದರಿಂದ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಒಂದು ದಿನ ಅಧಿಕೃತವಾಗಿ ರಜೆ ನೀಡಬೇಕೆಂದು ಅಭಿಮಾನಿಗಳು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

56

ಇನ್ನು ಕೆಲವು ಅಭಿಮಾನಿಗಳು, ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾ ಆಗಾರರನ್ನು ಮುಂಬೈನಲ್ಲಿ ಮೆರವಣಿಗೆ ಮಾಡಲಾಗಿತ್ತು. ಅದೇ ರೀತಿ ಆರ್‌ಸಿಬಿ ತಂಡ ಮತ್ತು ಗೆಲ್ಲುವ ಟ್ರೋಫಿಯ ಮೆರವಣಿಗೆಗೆ ಅವಕಾಶ ಕಲ್ಪಿಸಬೇಕು ಮತ್ತು ಕರ್ನಾಟಕ ಸರ್ಕಾರದಿಂದ ಎಲ್ಲಾ ಆಟಗಾರರನ್ನು ಸಹ ಮನವಿ ಮಾಡಿಕೊಳ್ಳಲಾಗಿದೆ.

66

ಕ್ರಿಕೆಟ್ ಪ್ರೇಮಿಯಾಗಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯನವರು ಕ್ರಿಕೆಟ್ ಪ್ರೇಮಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ತಮ್ಮ ಕೆಲಸದ ಒತ್ತಡದಲ್ಲಿಯೂ ಕ್ರಿಕೆಟ್ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸಮಯ ಮೀಸಲಿರಿಸಿಕೊಂಡಿರುತ್ತಾರೆ.

Read more Photos on
click me!

Recommended Stories