ಒಂದು ಪ್ಲೇ ಆಫ್ ಸ್ಥಾನಕ್ಕೆ 3 ತಂಡಗಳ ನಡುವೆ ಬಿಗ್ ಫೈಟ್; ಯಾರಿಗಿದೆ ಬೆಸ್ಟ್ ಚಾನ್ಸ್?

Published : May 19, 2025, 05:01 PM IST

ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಮ್ಮ ಪ್ಲೇಆಫ್ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ತಂಡಕ್ಕೆ ಹೆಚ್ಚಿನ ಚಾನ್ಸ್ ಇದೆ ನೋಡೋಣ ಬನ್ನಿ.  

PREV
111
ಒಂದು ಪ್ಲೇ ಆಫ್ ಸ್ಥಾನಕ್ಕೆ 3 ತಂಡಗಳ ನಡುವೆ ಬಿಗ್ ಫೈಟ್; ಯಾರಿಗಿದೆ ಬೆಸ್ಟ್ ಚಾನ್ಸ್?

ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಐಪಿಎಲ್ 2025 ರ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಸಾಯಿ ಸುಧರ್ಶನ್ (108*) ಮತ್ತು ಶುಭಮನ್ ಗಿಲ್ (93*) ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಗುಜರಾತ್ ಟೈಟಾನ್ಸ್, ದೆಹಲಿ ಕ್ಯಾಪಿಟಲ್ಸ್ ಅನ್ನು 10 ವಿಕೆಟ್‌ಗಳಿಂದ ಸೋಲಿಸಿದ ಬೆನ್ನಲ್ಲೇ ಈ ಮೂರು ತಂಡಗಳು ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ.
 

211
RCB KKR

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್. ಎರಡೂ ತಂಡಗಳು ಪ್ಲೇಆಫ್‌ಗೆ ಪ್ರವೇಶಿಸುವ ಹಂತದಲ್ಲಿದ್ದವು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ಬೆಂಗಳೂರಿನಲ್ಲಿ ರದ್ದಾದ ನಂತರ ಆರ್‌ಸಿಬಿ ತಮ್ಮ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಪಂಜಾಬ್ ಕಿಂಗ್ಸ್ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಅನ್ನು ಸೋಲಿಸಿದ ನಂತರ ತಮ್ಮ ನಾಕೌಟ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವತ್ತ ಸಾಗಿತ್ತು. ಈ ಎರಡು ತಂಡಗಳು ತಲಾ 17 ಅಂಕ ಕಲೆಹಾಕಿವೆ.

311

ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಿದ್ದಂತೆಯೇ, ನಾಲ್ಕನೇ ಮತ್ತು ಅಂತಿಮ ಸ್ಥಾನಕ್ಕಾಗಿ ಮೂರು ತಂಡಗಳಾದ - ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಹೋರಾಟ ತೀವ್ರಗೊಂಡಿದೆ. ತ್ರಿಕೋನ ಸ್ಪರ್ಧೆ ಮತ್ತು ಕೊನೆಯ ಪ್ಲೇಆಫ್ ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುವ ಸನ್ನಿವೇಶಗಳನ್ನು ನೋಡೋಣ.

411

ಮುಂಬೈ ಇಂಡಿಯನ್ಸ್ ಪ್ರಸ್ತುತ 12 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಐದು ಸೋಲುಗಳೊಂದಿಗೆ 14 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ತಮ್ಮ ಅಭಿಯಾನವನ್ನು ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ನಿರಾಶಾದಾಯಕವಾಗಿ ಆರಂಭಿಸಿತು, ನಂತರ ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಅದ್ಭುತ ಕಮ್‌ಬ್ಯಾಕ್ ಮಾಡಿತು. 

511

ಐದು ಬಾರಿ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯಗಳನ್ನು ಆಡುವುದು ಬಾಕಿ ಇದೆ. ಇತರ ಫಲಿತಾಂಶಗಳನ್ನು ಅವಲಂಬಿಸದೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅವರು ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಎರಡೂ ಪಂದ್ಯಗಳಲ್ಲಿ ಗೆಲುವು ಅವರನ್ನು 18 ಅಂಕಗಳಿಗೆ ಕೊಂಡೊಯ್ಯುತ್ತದೆ. ಹೀಗಾದಲ್ಲಿ ಮುಂಬೈ ಅನಾಯಾಸವಾಗಿ ಪ್ಲೇ ಆಫ್‌ಗೇರಲಿದೆ. 

611

ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ನಂತರ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇಆಫ್ ಅರ್ಹತಾ ಅವಕಾಶಗಳು ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದೆ. ಏಕೆಂದರೆ ಅವರು ಪ್ರಸ್ತುತ 12 ಪಂದ್ಯಗಳಲ್ಲಿ ಆರು ಗೆಲುವು, ಐದು ಸೋಲು ಮತ್ತು ಒಂದು ಫಲಿತಾಂಶವಿಲ್ಲದೆ 13 ಅಂಕಗಳನ್ನು ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಆರಂಭದ ಸತತ ನಾಲ್ಕು ಗೆಲುವುಗಳೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಇದಾದ ನಂತರ ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು, ಆದರೆ ಮುಂದಿನ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದರಿಂದ ಗೆಲ್ಲುವ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಯಿತು.

711

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ದೆಹಲಿ ಕ್ಯಾಪಿಟಲ್ಸ್ ಇನ್ನೂ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಭದ್ರಪಡಿಸಿಕೊಳ್ಳಲಿದೆ. ಎರಡೂ ಪಂದ್ಯಗಳನ್ನು ಗೆಲ್ಲುವುದರಿಂದ ಡೆಲ್ಲಿ ಕ್ಯಾಪಿಟಲ್ಸ್‌ 17 ಅಂಕಗಳನ್ನು ಪಡೆಯಬಹುದು. ಹೀಗಾದಲ್ಲಿ ಡೆಲ್ಲಿ ಪ್ಲೇ ಆಫ್ ಪ್ರವೇಶಿಸಲಿದೆ. ಹೀಗಾಗಬೇಕು ಎಂದರೆ ಡೆಲ್ಲಿ ಬಲಿಷ್ಠ ಮುಂಬೈಗೆ ಸೋಲುಣಿಸಲೇಬೇಕು.
 

811

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್‌ಗೆ ಪ್ರವೇಶಿಸುವ ಸ್ಪರ್ಧೆಯಲ್ಲಿದೆ. ರಿಷಭ್ ಪಂತ್ ನೇತೃತ್ವದ ತಂಡವು ಪ್ರಸ್ತುತ ಐದು ಗೆಲುವು ಮತ್ತು ಆರು ಸೋಲುಗಳೊಂದಿಗೆ 10 ಅಂಕಗಳನ್ನು ಗಳಿಸಿ ಏಳನೇ ಸ್ಥಾನದಲ್ಲಿದೆ. ಕೊನೆಯ ಐದು ಪಂದ್ಯಗಳಲ್ಲಿ, LSG ಕೇವಲ ಒಂದು ಪಂದ್ಯವನ್ನು ಗೆದ್ದಿದೆ ಮತ್ತು ಪ್ರಸ್ತುತ ಮೂರು ಪಂದ್ಯಗಳ ಸೋಲಿನ ಸರಣಿಯಲ್ಲಿದೆ. ಇದು ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಗಮನಾರ್ಹವಾಗಿ ಹಾಳುಗೆಡವಿದೆ. 
 

911
Image Credit: ANI

ಲಕ್ನೋ ಪ್ರಸ್ತುತ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಡಲು ಇನ್ನೂ ಅವಕಾಶವಿದೆ. ತನ್ನ ಪಾಲಿನ ಲೀಗ್ ಹಂತದ 3 ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಉಳಿದ ಲೀಗ್ ಹಂತದ ಪಂದ್ಯಗಳನ್ನು ಗೆಲ್ಲಬೇಕಾದ  ಒತ್ತಡದಲ್ಲಿದೆ.

1011

ಪ್ರಸ್ತುತ ಫಾರ್ಮ್ ಮತ್ತು ಅಂಕಗಳ ಗಳಿಕೆಯನ್ನು ನೋಡಿದರೆ, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಮ್ಮ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇದಾದ ನಂತರ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸತತವಾಗಿ ಆರು ಪಂದ್ಯಗಳನ್ನು ಗೆದ್ದ ಅವರ ಗಮನಾರ್ಹ ತಿರುವು ಅವರನ್ನು ಅಂಕಪಟ್ಟಿಯಲ್ಲಿ ಬಲವಾಗಿ 4ನೇ ಸ್ಥಾನದಲ್ಲಿ ಇರಿಸಿದೆ. ಅಂತಿಮ ಎರಡು ಲೀಗ್ ಹಂತದ ಪಂದ್ಯಗಳಲ್ಲಿ ಅವರು ತಮ್ಮ ಗೆಲುವಿನ ಸರಣಿಯನ್ನು ಕಾಯ್ದುಕೊಂಡರೆ, ಐದು ಬಾರಿ ಐಪಿಲ್ ಚಾಂಪಿಯನ್‌ಗಳು ನಾಲ್ಕನೇ ತಂಡವಾಗಿ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ. 

1111

ಆದಾಗ್ಯೂ, ದೆಹಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ ಸ್ಪರ್ಧಿಗಳಲ್ಲಿ ಒಂದಾಗಿದೆ ಮತ್ತು ಉಳಿದ ಲೀಗ್ ಹಂತದ ಪಂದ್ಯಗಳನ್ನು ಗೆದ್ದರೆ ಮತ್ತು ಮುಂಬೈ ಇಂಡಿಯನ್ಸ್‌ ತಮ್ಮ ಅಂತಿಮ ಪಂದ್ಯಗಳಲ್ಲಿ ಒಂದರಲ್ಲಿ ಜಾರಿದರೆ ಮುಂಬೈ ಇಂಡಿಯನ್ಸ್ ಅನ್ನು ಹಿಂದಿಕ್ಕಬಹುದು. ಲಕ್ನೋ ಸೂಪರ್ ಜೈಂಟ್ಸ್ ಏರಲು ಕಡಿದಾದ ಏಣಿಯನ್ನು ಹೊಂದಿದೆ, ಆದರೆ ಅವರ ಉಳಿದ ಲೀಗ್ ಹಂತದ ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಜಯಿಸಿದರೆ, ಉಳಿದ ತಂಡಗಳ ಫಲಿತಾಂಶ ತಮ್ಮ ಪರವಾಗಿ ಬಂದರಷ್ಟೇ ಲಖನೌ ಪ್ಲೇ ಆಫ್‌ಗೇರಲು ಸಾಧ್ಯ.

Read more Photos on
click me!

Recommended Stories