ಮುಂಬೈ ಇಂಡಿಯನ್ಸ್‌ಗೆ ರಣಬೇಟೆಗಾರ ಎಂಟ್ರಿ; ಪ್ಲೇ ಆಫ್‌ ಹೊಸ್ತಿಲಲ್ಲಿರೋ ಪಾಂಡ್ಯ ಪಡೆಗೆ ಮತ್ತಷ್ಟು ಬಲ!

Published : May 20, 2025, 03:29 PM ISTUpdated : May 20, 2025, 04:10 PM IST

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟ ತಲುಪುತ್ತಿದೆ. ಹೀಗಿರುವಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮೂವರು ಬದಲಿ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಯಾರು ಆ ಆಟಗಾರರು ನೋಡೋಣ ಬನ್ನಿ.  

PREV
18
ಮುಂಬೈ ಇಂಡಿಯನ್ಸ್‌ಗೆ ರಣಬೇಟೆಗಾರ ಎಂಟ್ರಿ; ಪ್ಲೇ ಆಫ್‌ ಹೊಸ್ತಿಲಲ್ಲಿರೋ ಪಾಂಡ್ಯ ಪಡೆಗೆ ಮತ್ತಷ್ಟು ಬಲ!

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಂಡು, ಇದೀಗ ಮತ್ತೆ ಪುನರಾರಂಭವಾಗಿದೆ. ಹೀಗಾಗಿ ಈ ಮೊದಲೇ ನಿಗದಿಯಾಗಿದ್ದ ವೇಳಾಪಟ್ಟಿಯು ಇನ್ನೊಂದು ವಾರ ಮುಂದೆ ಹೋಗಿದೆ.
 

28

ಪರಿಣಾಮ ಕೆಲವು ಆಟಗಾರರು ಈ ಹಿಂದೆ ನಿಗದಿಯಾದಂತೆ ರಾಷ್ಟ್ರೀಯ ತಂಡ ಕೂಡಿಕೊಳ್ಳಲು ಐಪಿಎಲ್ ತೊರೆಯುತ್ತಿದ್ದಾರೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ಅವರಿಗೆ ಬದಲಿ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಕೆಲಸ ಮಾಡುತ್ತಿವೆ.

38

ಇದೀಗ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂವರು ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಓರ್ವ ಬ್ಯಾಟರ್‌, ಎದುರಾಳಿ ಬೌಲರ್‌ಗಳನ್ನು ಚೆಂಡಾಡುವ ಸಾಮರ್ಥ್ಯ ಹೊಂದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
 

48

ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ವಿಲ್ ಜ್ಯಾಕ್ಸ್‌, ಕಾರ್ಬಿನ್ ಬೋಷ್ ಹಾಗೂ ರಿಯಾನ್ ರಿಕೆಲ್ಟನ್ ಇದೀಗ ಲೀಗ್ ಹಂತದ ಪಂದ್ಯಾವಳಿಗೆ ಲಭ್ಯವಿದ್ದು, ಪ್ಲೇ ಆಫ್‌ಗೂ ಮುನ್ನ ಈ ಮೂವರು ಆಟಗಾರರು ನ್ಯಾಷನಲ್ ಡ್ಯೂಟಿಗೆ ಹಾಜರಾಗಲಿದ್ದಾರೆ.
 

58

ವಿಲ್ ಜ್ಯಾಕ್ಸ್‌, ಮೇ 29ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನಪಡೆದಿದ್ದಾರೆ. ಇನ್ನು ಕಾರ್ಬಿನ್ ಬೋಷ್ ಹಾಗೂ ರಿಯಾನ್ ರಿಕೆಲ್ಟನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹರಿಣಗಳ ಪಡೆಯಲ್ಲಿ ಸ್ಥಾನ ಪಡೆದಿದ್ದು, ಪ್ಲೇ ಆಫ್‌ಗೂ ಮುನ್ನವೇ ದಕ್ಷಿಣ ಆಫ್ರಿಕಾ ಕಡೆ ಮುಖಮಾಡಲಿದ್ದಾರೆ.

68

ಹೀಗಾಗಿ ರಿಯಾನ್ ರಿಕಲ್ಟನ್ ಬದಲಿಗೆ ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಅವರನ್ನು ಮುಂಬೈ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ಹಿಂದೆ ಬೇರ್‌ಸ್ಟೋವ್ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.

78

ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರ ಬೇರ್‌ಸ್ಟೋವ್ ಅವರಿಗೆ 5.25 ಕೋಟಿ ರುಪಾಯಿ ನೀಡಿ ಮುಂಬೈ ಫ್ರಾಂಚೈಸಿ ತಾತ್ಕಾಲಿಕವಾಗಿ ಪ್ಲೇ ಆಫ್ ಮಟ್ಟಿಗೆ ತಂಡಕ್ಕೆ ಸೇರಿಸಿಕೊಂಡಿದೆ.

88

ಇನ್ನು ಶ್ರೀಲಂಕಾ ಸೀಮಿತ ಓವರ್‌ಗಳ ತಂಡದ ನಾಯಕ ಚರಿತ್ ಅಸಲಂಕಾ ಹಾಗೂ ಇಂಗ್ಲೆಂಡ್‌ನ ಪ್ರತಿಭಾನ್ವಿತ ಬೌಲರ್ ರಿಚರ್ಡ್ ಗ್ಲೀಶನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

Read more Photos on
click me!

Recommended Stories