ಜೆಡ್ಡಾದಲ್ಲಿ ಐಪಿಎಲ್ 2025 ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಈಗಾಗಲೇ ಸ್ಥಳವನ್ನು ಬಹುತೇಕ ಅಂತಿಮಗೊಳಿಸಿದ್ದು, ಮೆಗಾ ಹರಾಜಿನ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುವ ನವೆಂಬರ್ 24-25ರಂದು ಈ ಹರಾಜು ನಡೆಯಲಿದೆ.
ಕಳೆದ ವರ್ಷ, ಐಪಿಎಲ್ ಮಿನಿ ಹರಾಜು ದುಬೈನಲ್ಲಿ ನಡೆದಿತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಸೌದಿ ಅರೇಬಿಯಾ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ
ಸೌದಿ ಕ್ರಿಕೆಟ್ ಮಂಡಳಿ, ಎಲ್ಲಾ ಐಪಿಎಲ್ ತಂಡಗಳು ಸೌದಿ ಅರೇಬಿಯಾದ ಹೊಸ ಲೀಗ್‌ನಲ್ಲಿ ಹೂಡಿಕೆ ಮಾಡಬೇಕೆಂದು ಬಯಸುತ್ತದೆ. ಇದರಿಂದ ಐಪಿಎಲ್‌ನ ಖ್ಯಾತಿಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ ಸೌದಿ ಅರೇಬಿಯಾ.
ಆದರೆ ಸೌದಿ ಅರೇಬಿಯಾದಲ್ಲಿ ಹರಾಜು ನಡೆಸುವುದರಲ್ಲಿ ಕೆಲವು ಸಮಸ್ಯೆಗಳಿವೆ. ಮುಖ್ಯವಾಗಿ, ಅಲ್ಲಿ ಹೆಚ್ಚು ಖರ್ಚಾಗುತ್ತದೆ ಎಂಬುದೇ ಸಮಸ್ಯೆ. ಇದರಿಂದಾಗಿ, ಹರಾಜನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂಬ ವರದಿಗಳು ಹೊರಬಿದ್ದವು. ಆದರೆ ಕೊನೆಗೆ ಹಾಗೇನೂ ಆಗಲಿಲ್ಲ. ಬಿಸಿಸಿಐ ಹರಾಜು ವ್ಯವಸ್ಥೆಗಳನ್ನು ಪರಿಶೀಲಿಸಲು ಒಂದು ತಂಡವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿತ್ತು.