ಸತತ ಸೋಲುಗಳಿಂದ ಕಂಗೆಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಡೆಡ್ಲಿ ಬ್ಯಾಟರ್ ಎಂಟ್ರಿ! ಖಡಕ್ ಸಂದೇಶ ರವಾನೆ

Published : Apr 18, 2025, 06:16 PM ISTUpdated : Apr 18, 2025, 06:24 PM IST

ಬೆಂಗಳೂರು: 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಮೂಲದ ಸ್ಪೋಟಕ ಬ್ಯಾಟರ್, ಇದೀಗ ಧೋನಿ ಪಡೆ ಕೂಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.  

PREV
110
ಸತತ ಸೋಲುಗಳಿಂದ ಕಂಗೆಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಡೆಡ್ಲಿ ಬ್ಯಾಟರ್ ಎಂಟ್ರಿ! ಖಡಕ್ ಸಂದೇಶ ರವಾನೆ

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

210
MS Dhoni

ಆರಂಭದಲ್ಲಿ ಸಿಎಸ್‌ಕೆ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಈ ಸೀಸನ್ ಐಪಿಎಲ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ, ಇದೀಗ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

310

ಹೀಗಿದ್ದೂ ಚೆನ್ನೈ ಅದೃಷ್ಟ ಬದಲಾದಂತಿಲ್ಲ. ಸದ್ಯ ಸಿಎಸ್‌ಕೆ ತಂಡವು ಮೊದಲ ಏಳು ಪಂದ್ಯಗಳನ್ನಾಡಿ 5 ಸೋಲು ಹಾಗೂ ಎರಡು ಗೆಲುವು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

410

ಸಿಎಸ್‌ಕೆ ತಂಡವು ಪ್ಲೇ ಆಫ್‌ಗೇರಬೇಕಿದ್ದರೇ, ಇನ್ನುಳಿದ 7 ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾ ಮೂಲದ ಡೆಡ್ಲಿ ಬ್ಯಾಟರ್ ಡೆವಾಲ್ಡ್ ಬ್ರೇವಿಸ್ ತಂಡ ಸೇರ್ಪಡೆಗೊಂಡಿದ್ದಾರೆ.

510

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಗುರ್ಜಾಪನೀತ್ ಸಿಂಗ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೇವಿಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡಿದ್ದಾರೆ. 

610

ಕೇವಲ 75 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಡೆವಾಲ್ಡ್ ಬ್ರೇವಿಸ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಇದೀಗ ಬ್ರೇವಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 2.2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

710

ಪ್ರತಿಭಾನ್ವಿಯ ಯುವ ಬ್ಯಾಟರ್ ಆಗಿರುವ ಡೆವಾಲ್ಡ್ ಬ್ರೇವಿಸ್ ಅವರನ್ನು ಈಗಾಗಲೇ ಕ್ರಿಕೆಟ್ ಜಗತ್ತು ಜೂನಿಯರ್ ಎಬಿ ಡಿವಿಲಿಯರ್ಸ್ ಎಂದೇ ಗುರುತಿಸಲಾಗುತ್ತಿದೆ. ಎಬಿಡಿಯಂತೆ 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಕ್ಷಮತೆ ಬ್ರೇವಿಸ್ ಅವರಿಗಿದೆ.

810
Image credit: Getty

ಕೇವಲ 21 ವರ್ಷದ ಡೆವಾಲ್ಡ್ ಬ್ರೇವಿಸ್ ಈಗಾಗಲೇ 81 ಟಿ20 ಪಂದ್ಯಗಳನ್ನಾಡಿದ್ದು, 145ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇತ್ತೀಚೆಗಷ್ಟೇ ನಡೆದ SA20 ಲೀಗ್ ಟೂರ್ನಿಯಲ್ಲಿ ಬ್ರೇವಿಸ್ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. 
 

910

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಳ್ಳುತ್ತಿದ್ದಂತೆಯೇ ಬ್ರೇವಿಸ್, ಯೆಲ್ಲೋ ಬಣ್ಣದ ಪೋಸ್ಟರ್ ಶೇರ್ ಮಾಡುವ ಮೂಲಕ ತಾವು ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾಗಿದ್ದೇನೆ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
 

1010

ಈ ಮೊದಲು ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಬ್ರೇವಿಸ್ ಇದೀಗ, ಏಪ್ರಿಲ್ 20ರಂದು ಚೆನ್ನೈ ಪರ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

Read more Photos on
click me!

Recommended Stories