ಚೆನ್ನೈನಲ್ಲಿ RCB ಕೊನೆ ಸಲ CSK ವಿರುದ್ಧ ಗೆದ್ದಾಗ... ಆಗಿನ್ನೂ ವಾಟ್ಸ್‌ಆ್ಯಪ್‌ ಇರಲಿಲ್ಲ..!

First Published Mar 22, 2024, 1:47 PM IST

ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 17ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಆರ್‌ಸಿಬಿ ಇಲ್ಲಿ ಕೊನೆಯ ಬಾರಿಗೆ ಸಿಎಸ್‌ಕೆ ವಿರುದ್ದ ಗೆದ್ದಾಗ ಏನೇನೆಲ್ಲಾ ಆಗಿತ್ತು ಎನ್ನುವುದರ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ. 
 

2024ನೇ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬದ್ದ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ.

ಚೆನ್ನೈನ ಚೆಪಾಕ್ ಮೈದಾನ ಸಿಎಸ್‌ಕೆ ಪಾಲಿಗೆ ಅದೃಷ್ಟದ ಮೈದಾನ ಎನಿಸಿದ್ದರೆ, ಆರ್‌ಸಿಬಿ ಪಾಲಿಗೆ ಕಬ್ಬಿಣದ ಕಡಲೆ ಎನಿಸಿದೆ. ಆರ್‌ಸಿಬಿ ಇಲ್ಲಿ ಆಡಿದ ಕಳೆದ 7 ಪಂದ್ಯಗಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆಗೆ ಶರಣಾಗಿದೆ.

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆಪಾಕ್ ಮೈದಾನದಲ್ಲಿ ಆರ್‌ಸಿಬಿ ತಂಡವು ಚೆನ್ನೈ ಎದುರು ಗೆಲುವಿನ ನಗೆ ಬೀರಿತ್ತು. ಮೇ 21, 2008- ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ಮೊದಲ ಹಾಗೂ ಕೊನೆಯ ಜಯ. ಇದಾದ ಬಳಿಕ ಆರ್‌ಸಿಬಿಗೆ ಎದುರಾಗಿದ್ದು ಸೋಲು ಸೋಲು ಸೋಲು.

ಆರ್‌ಸಿಬಿ ತಂಡವು ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆಲುವು ಕಂಡಾಗ ಕ್ರಿಕೆಟ್ ಜಗತ್ತಿನಲ್ಲೇ ಏನೇನೆಲ್ಲಾ ಆಗಿತ್ತು ಎನ್ನುವುದರ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ

1. ವಿರಾಟ್‌ ಕೊಹ್ಲಿ ಇನ್ನೂ ಅಂ.ರಾ. ಪಂದ್ಯವನ್ನಾಡಿರಲಿಲ್ಲ:

ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರಲಿಲ್ಲ. ಕೊಹ್ಲಿ ಆಗಷ್ಟೇ ಅಂಡರ್ 19 ವಿಶ್ವಕಪ್ ಗೆದ್ದು, ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು.
 

2. ಅನಿಲ್‌ ಕುಂಬ್ಳೆ ಭಾರತ ಟೆಸ್ಟ್‌ ತಂಡದ ನಾಯಕರಾಗಿದ್ದರು:

ಆರ್‌ಸಿಬಿ ತಂಡವು ಚೆನ್ನೈನಲ್ಲಿ ಸಿಎಸ್‌ಕೆ ಎದುರು ಗೆದ್ದಾಗ ಟೀಂ ಇಂಡಿಯಾ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು. ಇದಾದ ಬಳಿಕ ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದಾರೆ. 
 

3. ಸಚಿನ್‌ ತೆಂಡುಲ್ಕರ್‌ 81 ಅಂ.ರಾ. ಶತಕ ಬಾರಿಸಿದ್ದರು:

ಚೆನ್ನೈನಲ್ಲಿ ಆರ್‌ಸಿಬಿ ಧೋನಿ ಪಡೆಯನ್ನು ಮಣಿಸಿದಾಗ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ 81 ಅಂತಾರಾಷ್ಟ್ರೀಯ ಶತಕಗಳಿದ್ದವು. ಸಚಿನ್ ಶತಕಗಳ ಶತಕ ಸಿಡಿಸಿ ಕ್ರಿಕೆಟ್ ಬದುಕಿಗೆ ಗುಡ್‌ ಬೈ ಹೇಳಿಯೇ ಒಂದು ದಶಕ ಕಳೆದಿದೆ.
 

4. ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ನಲ್ಲಿ 75 ವಿಕೆಟ್‌ ಪಡೆದಿದ್ದರು:

700 ಟೆಸ್ಟ್ ವಿಕೆಟ್‌ಗಳ ಒಡೆಯ ಜೇಮ್ಸ್‌ ಆ್ಯಂಡರ್‌ಸನ್‌ ಆಗ ಚೆನ್ನೈನಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ದ ಗೆದ್ದಾಗ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನು ಕೇವಲ 75 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಜೇಮ್ಸ್‌ ಆ್ಯಂಡರ್‌ಸನ್‌ 625ಕ್ಕೂ ಅಧಿಕ ವಿಕೆಟ್ ಪಡೆದರೂ, ಆರ್‌ಸಿಬಿಗೆ ಚೆನ್ನೈ ನೆಲದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ.
 

5. ರಾಹುಲ್‌ ದ್ರಾವಿಡ್‌ ಆರ್‌ಸಿಬಿ ತಂಡದ ನಾಯಕರಾಗಿದ್ದರು:

ಇನ್ನು ಚೆನ್ನೈ ತಂಡವನ್ನು ಚೆನ್ನೈ ನೆಲದಲ್ಲೇ ಸೋಲಿಸಿದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದವರು ರಾಹುಲ್ ದ್ರಾವಿಡ್. ಇದಾದ ಬಳಿಕ ಆರ್‌ಸಿಬಿಗೆ ಹಲವು ಕ್ಯಾಪ್ಟನ್‌ಗಳು ಬಂದರೂ ಚೆನ್ನೈ ಪಡೆಯನ್ನು ಅವರದ್ದೇ ನೆಲದಲ್ಲಿ ಸೋಲಿಸಲು ಸಾಧ್ಯವಾಗಲಿಲ್ಲ.
 

6. ಆಗಿನ್ನೂ ವಾಟ್ಸ್‌ಆ್ಯಪ್‌ ಇರಲಿಲ್ಲ.

ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆರ್‌ಸಿಬಿ ತಂಡವು ಚೆನ್ನೈನಲ್ಲಿ ಧೋನಿ ಪಡೆ ಎದುರು ಗೆದ್ದಾಗ ಭಾರತಕ್ಕಿನ್ನೂ ವಾಟ್ಸ್‌ಅಪ್ ಪರಿಚಯ ಆಗಿರಲಿಲ್ಲ. ಭಾರತದ ಅತ್ಯಂತ ಜನಪ್ರಿಯ ಚಾಟ್ ಅಪ್ಲಿಕೇಷನ್ ಎನಿಸಿರುವ ವಾಟ್ಸ್‌ಆ್ಯಪ್‌ ಬಂದಿರಲಿಲ್ಲ. 2010ರ ಆರಂಭದಲ್ಲಿ ವಾಟ್ಸ್‌ಆ್ಯಪ್‌ ಭಾರತಕ್ಕೆ ಪರಿಚಯವಾಗಿದ್ದು.
 

click me!