ರಾಜಸ್ಥಾನ ರಾಯಲ್ಸ್ ಎದುರಿನ IPL ಎಲಿಮಿನೇಟರ್ ಪಂದ್ಯಕ್ಕೆ ಬಲಿಷ್ಠ RCB ಸಂಭಾವ್ಯ ತಂಡ ಪ್ರಕಟ..!

First Published May 21, 2024, 5:06 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೇ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟವಾಗಿದ್ದು, ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.
 

1. ವಿರಾಟ್ ಕೊಹ್ಲಿ:

ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಸದ್ಯ 14 ಪಂದ್ಯಗಳಿಂದ 708 ರನ್ ಬಾರಿಸಿದ್ದು, ಆರ್‌ಸಿಬಿ ಪ್ಲೇ ಆಫ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆರ್‌ಸಿಬಿ ಕಪ್ ಗೆಲ್ಲಬೇಕಿದ್ದರೇ, ಇದೇ ಲಯ ಮುಂದುವರೆಸಬೇಕಿದೆ.

2. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್‌, ಚೆನ್ನೈ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಫಾಫ್ ಮತ್ತೊಮ್ಮೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ.

Latest Videos


3. ಗ್ಲೆನ್ ಮ್ಯಾಕ್ಸ್‌ವೆಲ್:

ಆಸ್ಟ್ರೇಲಿಯಾ ಮೂಲದ ಅನುಭವಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಬದಲಿಗೆ ತಂಡ ಕೂಡಿಕೊಂಡು ಅಮೂಲ್ಯ ಕಾಣಿಕೆ ನೀಡಿದ್ದರು. ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆಲ್ರೌಂಡ್ ಆಟವಾಡಲು ಎದುರು ನೋಡುತ್ತಿದ್ದಾರೆ.

4. ರಜತ್ ಪಾಟೀದಾರ್:

ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿ ರಜತ್ ಪಾಟೀದಾರ್. ಯಾವುದೇ ಪಿಚ್‌ನಲ್ಲಿ ಯಾವುದೇ ಎದುರಾಳಿ ಇದ್ದರೂ ಪಾಟೀದಾರ್ ಆರ್ಭಟಿಸುವುದನ್ನು ನಿಲ್ಲಿಸಿಲ್ಲ. ಪಾಟೀದಾರ್ ಅವರಿಂದ ಆರ್‌ಸಿಬಿ ಮತ್ತೊಂದು ಸೊಗಸಾದ ಇನಿಂಗ್ಸ್ ನಿರೀಕ್ಷಿಸುತ್ತಿದೆ.

5. ಕ್ಯಾಮರೋನ್ ಗ್ರೀನ್:

ನಾಕೌಟ್ ಪಂದ್ಯಗಳಲ್ಲಿ ಆಸೀಸ್ ಮೂಲದ ಆಟಗಾರರು ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಗ್ರೀನ್ ಕಳೆದ ಪಂದ್ಯದಲ್ಲಿ ಅದ್ಭುತ ಆಲ್ರೌಂಡ್ ಆಟವಾಡಿ ತಂಡಕ್ಕೆ ನೆರವಾಗಿದ್ದರು. ಇದೀಗ ಮತ್ತೊಮ್ಮೆ ಗ್ರೀನ್ ಮಿಂಚಲು ಎದುರು ನೋಡುತ್ತಿದ್ದಾರೆ.

6. ದಿನೇಶ್ ಕಾರ್ತಿಕ್:

ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್, ತಮ್ಮ ವೃತ್ತಿಬದುಕಿನ ಕೊನೆಯ ಐಪಿಎಲ್ ಆಡುತ್ತಿದ್ದಾರೆ. ಡಿಕೆಗೆ ಡೆತ್ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.

7. ಮಹಿಪಾಲ್ ಲೋಮ್ರಾರ್:

ಆರಂಭದ ಕೆಲ ಪಂದ್ಯಗಳಲ್ಲಿ ಮಿಂಚಿದ್ದ ಮಹಿಪಾಲ್ ಲೋಮ್ರಾರ್ ಆ ಬಳಿಕ ಸೂಕ್ತ ಅವಕಾಶ ಸಿಕ್ಕಿಲ್ಲ. ಗೆಲುವಿನ ಲಯದಲ್ಲಿರುವ ಆರ್‌ಸಿಬಿ ಆರ್‌ಸಿಬಿ ಮತ್ತೆ ಲೋಮ್ರಾರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.

8. ಸ್ವಪ್ನಿಲ್ ಸಿಂಗ್:

ಆರ್‌ಸಿಬಿ ತಂಡದ ಲಕ್ಕಿ ಚಾರ್ಮ್ ಎನಿಸಿಕೊಂಡಿರುವ ಸ್ವಪ್ನಿಲ್ ಸಿಂಗ್, ಅಗತ್ಯವಿದ್ದರೆ ಸ್ವಪ್ನಿಲ್ ಸಿಕ್ಸರ್‌ ಕೂಡಾ ಸಿಡಿಸಬಲ್ಲರು. ಸ್ವಪ್ನಿಲ್ ಸಿಂಗ್ ಬೌಲಿಂಗ್‌ನಲ್ಲಿ ಕರಾರುವಕ್ಕಾದ ದಾಳಿ ನಡೆಸುತ್ತಾ ಬಂದಿದ್ದಾರೆ.

9. ಕರ್ಣ್ ಶರ್ಮಾ:

ಆರ್‌ಸಿಬಿ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಕರ್ಣ್ ಶರ್ಮಾ ಕೂಡಾ ಮಹತ್ವದ ಘಟ್ಟದಲ್ಲಿ ತಂಡಕ್ಕೆ ವಿಕೆಟ್ ಕಬಳಿಸುವ ಮೂಲಕ ಆಸರೆಯಾಗುತ್ತಿದ್ದಾರೆ. ಇದೀಗ ನಾಕೌಟ್ ಪಂದ್ಯದಲ್ಲಿ ಕರ್ಣ್ ಶರ್ಮಾ ಜವಾಬ್ದಾರಿಯುತ ಆಟವಾಡಬೇಕಿದೆ.

10. ಮೊಹಮ್ಮದ್ ಸಿರಾಜ್:

ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್, ಮಹತ್ವದ ಘಟ್ಟದಲ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಆರ್‌ಸಿಬಿ ನಾಕೌಟ್ ಪಂದ್ಯ ಗೆಲ್ಲಬೇಕಿದ್ದರೇ 100% ಪ್ರದರ್ಶನ ನೀಡಬೇಕಿದೆ.

11. ಲಾಕಿ ಫರ್ಗ್ಯೂಸನ್:

ಕಿವೀಸ್ ಮೂಲದ ವೇಗಿ ಲಾಕಿ ಫರ್ಗ್ಯೂಸನ್ ಕೂಡಾ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದಾರೆ. ಫರ್ಗ್ಯೂಸನ್ ಒಮ್ಮೊಮ್ಮೆ ಕೊಂಚ ದುಬಾರಿಯಾದರೂ, ವಿಕೆಟ್ ಕಬಳಿಸುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಲಾಕಿ ಕೂಡಾ ಮಾರಕ ದಾಳಿ ನಡೆಸಬೇಕಿದೆ.

12. ಯಶ್ ದಯಾಳ್:

ಇನ್ನು ಇಂಪ್ಯಾಕ್ಟ್ ಬೌಲರ್‌ ಆಗಿ ಎಡಗೈ ವೇಗಿ ಯಶ್ ದಯಾಳ್ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಯಶ್ ದಯಾಳ್ 17 ರನ್ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಯಶ್ ದಯಾಳ್ ಆರ್‌ಸಿಬಿ ಆಪತ್ಬಾಂದವನಾಗಬೇಕಿದೆ.

click me!