IPL 2024 Auction: ಈ 5 ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗೋದು ಪಕ್ಕಾ..!

First Published Dec 2, 2023, 4:06 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಇದೇ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆಯುತ್ತಿವೆ. ಹೀಗಿರುವಾಗಲೇ ಈ ಹರಾಜಿನಲ್ಲಿ ಪಾಲ್ಗೊಳ್ಳುವ ಈ ಐದು ಆಟಗಾರರು ಅನ್‌ಸೋಲ್ಡ್ ಆಗುವ ಸಾಧ್ಯತೆಯಿದೆ

1. ಮೊಹಮ್ಮದ್ ನಬಿ:

ಆಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ, ಕಳೆದೊಂದು ದಶಕದಿಂದಲೂ ಆಫ್ಘಾನ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಬಿ ಟಿ20 ಕ್ರಿಕೆಟ್‌ನಲ್ಲಿ ಚಾರ್ಮ್ ಕಳೆದುಕೊಂಡಿದ್ದಾರೆ.
 

ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ನಬಿ ಅನ್‌ಸೋಲ್ಡ್ ಆಗಿದ್ದರು. ಇದೀಗ 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಮೊಹಮ್ಮದ್ ನಬಿಯನ್ನು ಫ್ರಾಂಚೈಸಿಗಳು ಖರೀದಿಸದೇ ಹೋದರೂ ಅಚ್ಚರಿಯೇನಿಲ್ಲ.

2. ಆದಿಲ್ ರಶೀದ್:

ಇಂಗ್ಲೆಂಡ್‌ನ ಅನುಭವಿ ಲೆಗ್‌ಸ್ಪಿನ್ನರ್ ಆದಿಲ್ ರಶೀದ್ ಕೂಡಾ 2015ರಿಂದಲೂ ಆಂಗ್ಲರ ಸೀಮಿತ ಓವರ್‌ಗಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 98 ವಿಕೆಟ್ ಕಬಳಿಸಿದ್ದರೂ ರಶೀದ್ ಐಪಿಎಲ್‌ನಲ್ಲಿ ನಿರೀಕ್ಷಿತ ‍ಛಾಪು ಮೂಡಿಸಿಲ್ಲ.
 

35 ವರ್ಷದ ಆದಿಲ್ ರಶೀದ್ ಇದುವರೆಗೂ 3 ಐಪಿಎಲ್ ಪಂದ್ಯಗಳನ್ನಾಡಿ 9ರ ಎಕಾನಮಿಯಲ್ಲಿ ರನ್ ನೀಡಿ ಕೇವಲ ಎರಡು ವಿಕೆಟ್ ಕಬಳಿಸಿದ್ದಾರೆ. ಸಾಕಷ್ಟು ಸ್ಥಳೀಯ ಲೆಗ್‌ಸ್ಪಿನ್ನರ್‌ಗಳು ಹರಾಜಿನಲ್ಲಿ ಲಭ್ಯವಿರುವುದರಿಂದ ಆದಿಲ್ ರಶೀದ್ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚು.

3. ಕ್ರಿಸ್ ಜೋರ್ಡನ್:

ಈ ಬಾರಿಯ ಹರಾಜಿನಲ್ಲಿ ಪಾಲ್ಗೊಂಡಿರುವ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ತಂಡದ ಪರ ತೋರಿದ ಪ್ರದರ್ಶನವನ್ನು ಐಪಿಎಲ್ ಟೂರ್ನಿಯಲ್ಲಿ ಮರುಕಳಿಸಲು ಸಾಧ್ಯವಾಗಿಲ್ಲ. ಐಪಿಎಲ್‌ನಲ್ಲಿ ಜೋರ್ಡನ್ 34 ಪಂದ್ಯಗಳನ್ನಾಡಿ 30 ವಿಕೆಟ್ ಕಬಳಿಸಿದ್ದಾರೆ.

ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಜೋರ್ಡನ್, ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಕೂಡಾ ಹೌದು. ಆದರೆ ಮೂಲಬೆಲೆ 2 ಕೋಟಿ ಹೊಂದಿರುವ ಜೋರ್ಡನ್ ಈ ಬಾರಿ ಅನ್‌ಸೋಲ್ಡ್ ಆದರೆ ಅಚ್ಚರಿಯೇನಿಲ್ಲ.

4. ಸ್ಟೀವ್ ಸ್ಮಿತ್:

ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್, ಐಪಿಎಲ್‌ನಲ್ಲಿ ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸ್ಮಿತ್ ಅವರ ಟಿ20 ಪ್ರದರ್ಶನ ಇಳಿಮುಖವಾಗುತ್ತಿದೆ.

ಬಹುತೇಕ ಅಗ್ರಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸ್ಮಿತ್ ಮೂಲ ಬೆಲೆ 2 ಕೋಟಿ ನಿಗದಿಯಾಗಿದೆ. ಆದರೆ ಬಹುತೇಕ ಎಲ್ಲಾ ತಂಡಗಳಲ್ಲೂ ಅಗ್ರಕ್ರಮಾಂಕ ಭರ್ತಿಯಾಗಿರುವುದರಿಂದಾಗಿ ಸ್ಮಿತ್ ಖರೀದಿಸಲು ಫ್ರಾಂಚೈಸಿಗಳು ಒಲವು ತೋರುವ ಸಾಧ್ಯತೆ ಕಡಿಮೆ.

5. ಡೇವಿಡ್ ಮಲಾನ್:

ಮಾಜಿ ಐಸಿಸಿ ನಂ.1 ಶ್ರೇಯಾಂಕಿತ ಟಿ20 ಬ್ಯಾಟರ್ ಡೇವಿಡ್ ಮಲಾನ್ ಇಂಗ್ಲೆಂಡ್‌ನ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಲಾನ್ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 132.49 ಇದೆ.
 

ಸ್ಮಿತ್ ಅವರಂತೆ ಮಲಾನ್ ಕೂಡಾ ಅಗ್ರಶ್ರೇಯಾಂಕಿತ ಬ್ಯಾಟರ್ ಆಗಿದ್ದಾರೆ. ಇದರ ಜತೆಗೆ ಡೇವಿಡ್ ಮಲಾನ್ ಅವರ ಮೂಲಬೆಲೆ 1.5 ಕೋಟಿ ರುಪಾಯಿ ಇರುವುದರಿಂದಾಗಿ ಇಂಗ್ಲೆಂಡ್ ಬ್ಯಾಟರ್ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚು.
 

click me!