Ind vs Aus: ಟೀಂ ಇಂಡಿಯಾ ಡೆಲ್ಲಿ ಟೆಸ್ಟ್‌ ಗೆದ್ದಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣಗಳು..!

First Published Feb 20, 2023, 12:31 PM IST

ದೆಹಲಿ(ಫೆ.20): ಟೀಂ ಇಂಡಿತಾ ಸ್ಪಿನ್ ಜೋಡಿಯಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿ ಹಾಗೂ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ 5 ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ
 

1. ಮೊದಲ ಇನ್ನಿಂಗ್ಸಲ್ಲಿ ಅಶ್ವಿನ್‌-ಅಕ್ಷರ್‌ 8ನೇ ವಿಕೆಟ್‌ಗೆ 114 ರನ್‌ ಜೊತೆಯಾಟ:

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 139 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಭಾರೀ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. ಆಗ 8ನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್‌-ಅಕ್ಷರ್ ಪಟೇಲ್‌ 114 ರನ್‌ಗಳ ಜತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದು, ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು.
 

2. ಎರಡೂ ಇನ್ನಿಂಗ್ಸಲ್ಲಿ ಸ್ಮಿತ್‌, ಲಬುಶೇನ್‌ ದೊಡ್ಡ ಇನ್ನಿಂಗ್ಸ್‌ ಆಡದಂತೆ ನಿಯಂತ್ರಿಸಿದ ಭಾರತ:

ಆಸ್ಟ್ರೇಲಿಯಾ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್‌ಗಳಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ ಅವರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಿತು.

3. ಮೂರನೇ ದಿನ ಆರಂಭಿಕ ಅವಧಿಯಲ್ಲೇ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ:

ಎರಡನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು ಸುಸ್ತಿತಿಯಲ್ಲಿತ್ತು. ಆದರೆ ಮೂರನೇ ದಿನದಾಟದ ಮೊದಲ ಸೆಷನ್‌ನಲ್ಲೇ ಟೀಂ ಇಂಡಿಯಾದ ಬೌಲರ್‌ಗಳು ಮಾರಕ ದಾಳಿಸಿ ನಡೆಸಿ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 
 

4. ನಾಲ್ಕನೇ ಇನ್ನಿಂಗ್ಸಲ್ಲಿ ಸ್ವೀಪ್‌ ಶಾಟ್‌ ಯತ್ನಿಸಲು ಹೋಗಿ 6 ವಿಕೆಟ್‌ ಕಳೆದುಕೊಂಡ ಆಸೀಸ್‌:

ಆಸೀಸ್‌ ತಂಡದ ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಮ್ಯಾಟ್ ರೆನ್‌ಶೋ, ಅಲೆಕ್ಸ್‌ ಕೇರಿ ಸೇರಿದಂತೆ ಪ್ರಮುಖ ಆರು ಬ್ಯಾಟರ್‌ಗಳು ಸ್ವೀಪ್‌ ಮಾಡುವ ಯತ್ನದಲ್ಲೇ ವಿಕೆಟ್‌ ಕಳೆದುಕೊಂಡಿದ್ದು, ಕಾಂಗರೂ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. 
 

5. ಆಸೀಸ್‌ 150ಕ್ಕೂ ಹೆಚ್ಚು ಟಾರ್ಗೆಟ್‌ ನಿಗದಿ ಮಾಡುವುದನ್ನು ತಪ್ಪಿಸಿದ ಜಡೇಜಾ, ಅಶ್ವಿನ್‌:

ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಆರಂಭ ಪಡೆದಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ದಿನದಾಟದ ಆರಂಭದಲ್ಲೇ ನಾಟಕೀಯ ಕುಸಿತ ಕಾಣುವ ಮೂಲಕ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು. ಜಡೇಜಾ 7 ಹಾಗೂ ಅಶ್ವಿನ್ 3 ವಿಕೆಟ್ ಕಬಳಿಸಿದ್ದರಿಂದಾಗಿ ಆಸೀಸ್‌ ದೊಡ್ಡ ಮೊತ್ತ ಕೆಲಹಾಕುವ ಆಸೆಗೆ ತಣ್ಣೀರೆರಚುವಂತೆ ಮಾಡಿತು.
 

click me!