IPL 2023 ಪಾನಿಪೂರಿ ಮಾರಾಟದಿಂದ ಐಪಿಎಲ್‌ವರೆಗೆ..! ಶತಕವೀರ ಯಶಸ್ವಿ ಜೈಸ್ವಾಲ್ ಸಾಧನೆಗೆ ಸೆಲ್ಯೂಟ್

Published : May 01, 2023, 03:52 PM IST

ಮುಂಬೈ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ದಿನಕ್ಕೊಬ್ಬರು ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಯಶಸ್ವಿ ಜೈಸ್ವಾಲ್ ಎನ್ನುವ ಅಪ್ಪಟ ಪ್ರತಿಭೆಗಳು ಕ್ರಿಕೆಟ್‌ ಜಗತ್ತಿನಲ್ಲಿ ಬೆಳೆದು ನಿಂತ ಕಥೆ ತಿಳಿದರೆ ಎಂತಹವರಿಗೂ ಸ್ಪೂರ್ತಿಯಾಗಬಲ್ಲದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

PREV
111
IPL 2023 ಪಾನಿಪೂರಿ ಮಾರಾಟದಿಂದ ಐಪಿಎಲ್‌ವರೆಗೆ..! ಶತಕವೀರ ಯಶಸ್ವಿ ಜೈಸ್ವಾಲ್ ಸಾಧನೆಗೆ ಸೆಲ್ಯೂಟ್

ಒಂದು ಕಾಲದಲ್ಲಿ ಟೆಂಟ್‌ನಲ್ಲಿ ಉಳಿದುಕೊಂಡು, ತಮ್ಮ ಕ್ರಿಕೆಟ್ ಆಡುವ ಕನಸನ್ನು ನನಸಾಗಿಸಿಕೊಳ್ಳಲು ಬೀದಿ ಬದಿಯಲ್ಲಿ ತಂದೆಯ ಜತೆಗೂಡಿ ಪಾನಿಪೂರಿ ಮಾರುತ್ತಿದ್ದ ಯುವಕ ಯಶಸ್ವಿ ಜೈಸ್ವಾಲ್ ಈಗ ಟಾಕ್‌ ಆಫ್‌ ದಿ ಟೌನ್ ಎನಿಸಿದ್ದಾರೆ.
 

211

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ 21 ವರ್ಷದ ಯಶಸ್ವಿ ಜೈಸ್ವಾಲ್‌ ಕೇವಲ 62 ಎಸೆತಗಳಲ್ಲಿ 124 ರನ್ ಸಿಡಿಸಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

311

ಉತ್ತರ ಪ್ರದೇಶದ ತೀರಾ ಕಡುಬಡತನದ ಕುಟುಂಬದಲ್ಲಿ ಜನಿಸಿದ ಯಶಸ್ವಿ ಜೈಸ್ವಾಲ್, ಇಂದು ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದಾರೆ. ಎಂತಹ ಸ್ಟೋರಿ. ಎಂತಹ ಅದ್ಭುತ ಪ್ರತಿಭೆ. ಯಶಸ್ವಿ ಜೈಸ್ವಾಲ್ ಸೂಪರ್ ಸ್ಟಾರ್ ಆಗುವತ್ತ ಸಾಗುತ್ತಿದ್ದಾರೆ ಎಂದು ಐಪಿಎಲ್‌ ಮಾಜಿ ಕೋಚ್ ಟಾಮ್ ಮೂಡಿ ಟ್ವೀಟ್ ಮಾಡಿ ಎಡಗೈ ಬ್ಯಾಟರ್ ಗುಣಗಾನ ಮಾಡಿದ್ದಾರೆ.

411

ಕ್ರಿಕೆಟ್‌ನಲ್ಲಿ ಏನನ್ನಾದರೂ ಸಾಧಿಸಲೇ ಬೇಕು ಎನ್ನುವ ಛಲದಿಂದ ಯಶಸ್ವಿ ಜೈಸ್ವಾಲ್‌, ಪೋಷಕರನ್ನು ಬಿಟ್ಟು ಉತ್ತರಪ್ರದೇಶದಿಂದ ವಾಣಿಜ್ಯನಗರಿ ಮುಂಬೈಗೆ ಬಂದರು. ಆಗ ಯಶಸ್ವಿ ವಯಸ್ಸು 11 ವರ್ಷ. 

511

ಈ ಕುರಿತಂತೆ 2020ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶಸ್ವಿ, ಮೊದಲಿಗೆ ನಾನು ಮುಂಬೈನ ಡೈರಿಯಲ್ಲಿ ಮಲಗುತ್ತಿದ್ದೆ. ಇದಾದ ಬಳಿಕ ನಮ್ಮ ಅಂಕಲ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ, ಅವರೂ ನೀನು ಇರಲು ಬೇರೆ ಜಾಗ ಹುಡುಕಿಕೋ ಎಂದರು ಎಂದು ಎಎಫ್‌ಪಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

611

ಇದಾದ ಬಳಿಕ ನಾನು ಮುಂಬೈ ಸ್ಪೋರ್ಟ್ಸ್‌ ಗ್ರೌಂಡ್ ಸಮೀಪದಲ್ಲಿರುವ ಆಝಾದ್‌ ಮೈದಾನದ ಬಳಿಯೇ ಟೆಂಟ್‌ನಲ್ಲಿ ಉಳಿದುಕೊಂಡಿದ್ದೆ. ಹಗಲು ಹೊತ್ತಿನಲ್ಲಿ ನಾನಲ್ಲಿಯೇ ಕ್ರಿಕೆಟ್ ಆಡುತ್ತಿದ್ದೆ ಎಂದು ಜೈಸ್ವಾಲ್ ಹೇಳಿದ್ದರು.

711

ಮುಂಬೈನ ಪ್ರಸಿದ್ದ ರಸ್ತೆಯೊಂದರಲ್ಲಿ ರಾತ್ರಿ ವೇಳೆಗೆ ಪಾನಿಪೂರಿ ಮಾರುತ್ತಿದ್ದೆ. ಅದರಲ್ಲಿ ಬಂದ ಹಣವನ್ನು ನನ್ನ ಊಟದ ವ್ಯವಸ್ಥೆಗೆ ಬಳಸಿಕೊಳ್ಳುತ್ತಿದ್ದೆ ಎಂದು ಯಶಸ್ವಿ ಆ ದಿನಗಳನ್ನು ಮೆಲುಕು ಹಾಕಿದ್ದರು.
 

811

ಇದಾದ ಬಳಿಕ ಯಶಸ್ವಿ ಜೈಸ್ವಾಲ್, ಕೋಚ್ ಜ್ವಾಲಾ ಸಿಂಗ್ ಅವರ ಕಣ್ಣಿಗೆ ಬಿದ್ದರು. ಜ್ವಾಲಾ ರಾಜ್ಯಮಟ್ಟದ ಆಟಗಾರರಾಗಿದ್ದರು. ನನಗಿಂತ ಚಿಕ್ಕವನಾದ ಯಶಸ್ವಿ ಆಟವನ್ನು ಗಮನಿಸಿದ ಬಳಿಕ ಕ್ರಿಕೆಟ್‌ ಜರ್ನಿ ಮುಂದುವರೆಸಲು ದೇವರು ನನಗೆ ಇನ್ನೊಂದು ಅವಕಾಶ ನೀಡಿದ ಎಂದು ಭಾವಿಸಿದೆ ಎಂದು ಜ್ವಾಲಾ ಸಿಂಗ್ ಹೇಳಿದ್ದರು.

911

ನಿರಂತರ ಪರಿಶ್ರಮದ ಬಳಿಕ 2019ರಲ್ಲಿ ಮುಂಬೈ ತಂಡದಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್ ಆ ಬಳಿಕ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಇನ್ನು ಇದೇ ವರ್ಷ ರಾಜಸ್ಥಾನ ರಾಯಲ್ಸ್‌ ತೆಕ್ಕೆಗೆ ಜೈಸ್ವಾಲ್ ಸೇರಿಕೊಂಡರು.

1011

ಇನ್ನು  2020ರಲ್ಲಿ ಅಂಡರ್ 19 ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎನಿಸಿದರು. ಇದಾದ ಬಳಿಕ 2020ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

1111

ಇದೀಗ ಯಶಸ್ವಿ ಜೈಸ್ವಾಲ್, ಮುಂಬೈ ಎದುರು ಶತಕ ಸಿಡಿಸುವುದರ ಜತೆಗೆ 9 ಪಂದ್ಯಗಳಿಂದ 47.56ರ ಬ್ಯಾಟಿಂಗ್ ಸರಾಸರಿಯಲ್ಲಿ 428 ರನ್ ಗಳಿಸಿ ಆರೆಂಜ್‌ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಯಶಸ್ವಿ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

Read more Photos on
click me!

Recommended Stories