ಟೀಂ ಇಂಡಿಯಾಗೆ ಬಿಗ್‌ ಶಾಕ್‌; ಏಕದಿನ ವಿಶ್ವಕಪ್‌ನಿಂದಲೂ ರಿಷಭ್‌ ಪಂತ್ ಔಟ್..?

Published : Apr 26, 2023, 03:57 PM IST

ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್‌ ಪಂತ್, ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಪಂತ್, ಮುಂಬರು ಏಷ್ಯಾಕಪ್ ಮಾತ್ರವಲ್ಲದೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
18
ಟೀಂ ಇಂಡಿಯಾಗೆ ಬಿಗ್‌ ಶಾಕ್‌; ಏಕದಿನ ವಿಶ್ವಕಪ್‌ನಿಂದಲೂ ರಿಷಭ್‌ ಪಂತ್ ಔಟ್..?

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್, ಕ್ರಿಕೆಟ್‌ ಮೈದಾನಕ್ಕಿಳಿಯುವ ಸಾಧ್ಯತೆ ಮತ್ತ ತಡವಾಗುವ ಸಾಧ್ಯತೆಯಿದೆ. ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ಪಂತ್‌, ಗಂಭೀರ ಕಾರು ಅಪಘಾತಕ್ಕೊಳಗಾಗಿದ್ದರು.

28

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್, ಕ್ರಿಕೆಟ್‌ ಮೈದಾನಕ್ಕಿಳಿಯುವ ಸಾಧ್ಯತೆ ಮತ್ತ ತಡವಾಗುವ ಸಾಧ್ಯತೆಯಿದೆ. ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ಪಂತ್‌, ಗಂಭೀರ ಕಾರು ಅಪಘಾತಕ್ಕೊಳಗಾಗಿದ್ದರು.

38

ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಾಗಿ, ಸದ್ಯ ವಾಕರ್‌ಗಳ ಸಹಾಯದಿಂದ ಒಂದೊಂದೆ ಹೆಜ್ಜೆಹಾಕುತ್ತಾ ಓಡಾಡುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ರೀತಿ ಐಪಿಎಲ್‌ನ ಕೆಲ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೆಂಬಲಿಸಲು ಸ್ಟೇಡಿಯಂನಲ್ಲೂ ಕಾಣಿಸಿಕೊಂಡಿದ್ದರು.
 

48

ಈ ಸಂದರ್ಭದಲ್ಲಿ ಮಾತನಾಡಿದ್ದ ರಿಷಭ್ ಪಂತ್, ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಕ್ರಿಕೆಟ್‌ ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವನ್ನು ಪಂತ್ ವ್ಯಕ್ತಪಡಿಸಿದ್ದರು.
 

58

ಆದರೆ ಹೊಸ ಬೆಳವಣಿಗೆಯೊಂದರಲ್ಲಿ ರಿಷಭ್‌ ಪಂತ್ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಹಾಗೂ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.

68

ಖ್ಯಾತ ಕ್ರಿಕೆಟ್‌ ವೆಬ್‌ಸೈಟ್ ವರದಿಯೊಂದರ ಪ್ರಕಾರ ರಿಷಭ್ ಪಂತ್‌, 2024ರ ಜನವರಿ ವೇಳೆಗೆ ಸಂಪೂರ್ಣ ಫಿಟ್‌ ಆಗಿ ಮೈದಾನಕ್ಕೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

78

ಒಂದು ವೇಳೆ ಏಕದಿನ ವಿಶ್ವಕಪ್ ಟೂರ್ನಿಯಿಂದ ರಿಷಭ್ ಪಂತ್ ಹೊರಗುಳಿದರೆ, ಕನ್ನಡಿಗ ಕೆ ಎಲ್ ರಾಹುಲ್ ಇಲ್ಲವೇ ಇಶಾನ್‌ ಕಿಶನ್‌ ಭಾರತ ತಂಡದ ವಿಕೆಟ್‌ ಕೀಪರ್ ಪಾತ್ರವನ್ನು ನಿಭಾಯಿಸುವ ಸಾಧ್ಯತೆಯಿದೆ.

88

ಈಗಾಗಲೇ ರಿಷಭ್ ಪಂತ್, ಮುಂಬರುವ ಜೂನ್ 07ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಿಂದಲೂ ಹೊರಬಿದ್ದಿದ್ದು, ಪಂತ್ ಬದಲಿಗೆ ಕೆ ಎಸ್ ಭರತ್ ಹಾಗೂ ಕೆ ಎಲ್ ರಾಹುಲ್‌ ವಿಕೆಟ್ ಕೀಪರ್ ರೂಪದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
 

Read more Photos on
click me!

Recommended Stories