IPL 2023: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿ ಹೆಸರಿನಲ್ಲಿವೆ ಯಾರೂ ಮುರಿಯಲಾರದ 4 ದಾಖಲೆಗಳು..!

First Published Jan 13, 2023, 5:12 PM IST

ಬೆಂಗಳೂರು(ಜ013): ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂದೆನಿಸಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಐಪಿಎಲ್‌ನಲ್ಲಿ ಧೋನಿ ಹೆಸರಿನಲ್ಲಿರುವ ಯಾರೂ ಮುರಿಯಲಾರದ 4 ದಾಖಲೆಗಳ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ...
 

1. ಅತಿಹೆಚ್ಚು ಬಾರಿ ನಾಯಕನಾಗಿ ಐಪಿಎಲ್‌ ತಂಡವನ್ನು ಮುನ್ನಡೆಸಿರುವ ಧೋನಿ:

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಯಶಸ್ಸಿನ ಹಿಂದೆ ಧೋನಿಯ ಕೈಚಳಕವಿದೆ. 41 ವರ್ಷದ ಧೋನಿ ಇದುವರೆಗೂ 210 ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದಾರೆ. 
 

ಇನ್ನು ಧೋನಿ ಬಳಿಕ ಅತಿಹೆಚ್ಚು ಐಪಿಎಲ್‌ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದು, ಹಿಟ್‌ಮ್ಯಾನ್ 143 ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

2. 20ನೇ ಓವರ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗ ಮಾಹಿ..!

ಕ್ಯಾಪ್ಟನ್ ಕೂಲ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಅತ್ಯುತ್ತಮ ಮ್ಯಾಚ್ ಫಿನಿಶರ್ ಕೂಡಾ ಹೌದು. ಧೋನಿ 20ನೇ ಓವರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವುದು ಗೊತ್ತೇ ಇದೆ. ಧೋನಿ ಐಪಿಎಲ್‌ನಲ್ಲಿ 20ನೇ ಓವರ್‌ನಲ್ಲಿ ಬರೋಬ್ಬರಿ 52 ಸಿಕ್ಸರ್ ಸಿಡಿಸಿದ್ದಾರೆ.
 

ಇನ್ನು ಧೋನಿ ನಂತರದ ಸ್ಥಾನದಲ್ಲಿರುವುದು ಇತ್ತೀಚೆಗಷ್ಟೇ ಐಪಿಎಲ್‌ಗೆ ಗುಡ್‌ ಬೈ ಹೇಳಿದ ಕೀರನ್‌ ಪೊಲ್ಲಾರ್ಡ್‌. ವಿಂಡೀಸ್ ದೈತ್ಯ ಪೊಲ್ಲಾರ್ಡ್‌ ಕೊನೆಯ ಓವರ್‌ನಲ್ಲಿ 33 ಸಿಕ್ಸರ್ ಚಚ್ಚಿದ್ದಾರೆ. ಸದ್ಯಕ್ಕಂತೂ ಧೋನಿ ರೆಕಾರ್ಡ್ ಬ್ರೇಕ್ ಆಗೋದು ಡೌಟ್.
 

3. ಐಪಿಎಲ್‌ನಲ್ಲಿ ಅತಿಹೆಚ್ಚು ಗೆಲುವು ಕಂಡ ನಾಯಕ ಧೋನಿ:

ಧೋನಿ ಕಳೆದೊಂದುವರೆ ದಶಕದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 123 ಗೆಲುವುಗಳನ್ನು ಕಂಡಿದೆ.
 

ಇನ್ನು ಧೋನಿ ನಂತರದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ, ಇದ್ದು, ರೋಹಿತ್ ಶರ್ಮಾ ನಾಯಕನಾಗಿ 79 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಹೀಗಾಗಿ ಈ ದಾಖಲೆ ಕೂಡಾ ಸದ್ಯಕ್ಕೆ ಅಳಿಸಿಹಾಕುವುದು ಕನಸಿನ ಮಾತೇ ಸರಿ.

4. 20ನೇ ಓವರ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಧೋನಿ

ಧೋನಿ 20ನೇ ಓವರ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲ, ಅತಿಹೆಚ್ಚು ರನ್ ಬಾರಿಸಿದ ದಾಖಲೆಗೂ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಧೋನಿ 20ನೇ ಓವರ್‌ನಲ್ಲಿ 243.49ರ ಸ್ಟ್ರೈಕ್‌ರೇಟ್‌ನಲ್ಲಿ 655 ರನ್ ಬಾರಿಸಿದ್ದಾರೆ. 

ಇನ್ನುಳಿದಂತೆ ಕೀರನ್ ಪೊಲ್ಲಾರ್ಡ್‌ 20ನೇ ಓವರ್‌ನಲ್ಲಿ 405 ರನ್ ಬಾರಿಸಿದ್ದರೇ, ಚೆನ್ನೈ ಸೂಪರ್ ಕಿಂಗ್ಸ್ ಸಹ ಆಟಗಾರ ರವೀಂದ್ರ ಜಡೇಜಾ 308 ರನ್ ಬಾರಿಸಿದ್ದಾರೆ. 20ನೇ ಓವರ್‌ ರನ್‌ ದಾಖಲೆ ಸದ್ಯಕ್ಕೆ ಬ್ರೇಕ್ ಆಗೋ ಚಾನ್ಸ್ ಇಲ್ಲ.

click me!