IPL 2023: ಈ 3 ಅನ್‌ಸೋಲ್ಡ್‌ ಆಟಗಾರರ ಪೈಕಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ರಿಷಭ್ ಪಂತ್ ಸ್ಥಾನ ತುಂಬುವವರಾರು..?

First Published Jan 13, 2023, 3:49 PM IST

ಬೆಂಗಳೂರು(ಜ.13): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್‌ ಡೈರೆಕ್ಟರ್ ಆಗಿ ನೇಮಕವಾಗಿದ್ದು, ಪಂತ್ ಅಲಭ್ಯತೆ ಬಗ್ಗೆ ಖಚಿತಪಡಿಸಿದ್ದಾರೆ. 
ಇದೀಗ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಪಾತ್ರ ನಿಭಾಯಿಸುವವರು ಯಾರು ಎನ್ನುವ ಕುತೂಹಲ ಜೋರಾಗಿದೆ. ಇದೀಗ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಈ ಕೆಳಕಂಡ ಮೂವರು ವಿಕೆಟ್ ಕೀಪರ್‌ಗಳು ಪಂತ್ ಸ್ಥಾನವನ್ನು ಸಮರ್ಥವಾಗಿ ತುಂಬುವ ಕ್ಷಮತೆ ಹೊಂದಿದ್ಧಾರೆ. 
 

1. ದಿನೇಶ್ ಬಾಣಾ:

ಕಳೆದ ವರ್ಷ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್ ಬಾಣಾ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಹೀಗಿದ್ದೂ ಬಾಣಾ, ಅವರನ್ನು ಖರೀದಿಸಲು ಈ ಬಾರಿಯ ಹರಾಜಿನಲ್ಲಿ ಯಾವೊಬ್ಬ ಫ್ರಾಂಚೈಸಿಯು ಒಲವು ತೋರಿರಲಿಲ್ಲ.
 

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ದಿನೇಶ್ ಬಾಣಾ, ಕೇವಲ ಚಾಣಾಕ್ಷ ವಿಕೆಟ್ ಕೀಪರ್ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ಸುಲಭವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಪಂತ್‌ಗೆ ಬಾಣಾ ಪರ್ಯಾಯ ಆಯ್ಕೆಯಾಗಬಲ್ಲರು.

2. ಶೆಲ್ಡನ್ ಜಾಕ್ಸನ್‌:

ಸೌರಾಷ್ಟ್ರ ಮೂಲದ ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್‌, ದೇಶಿ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 
 

ಕಳೆದ ವರ್ಷ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಶೆಲ್ಡನ್ ಜಾಕ್ಸನ್‌, ಸಚಿನ್‌ ತೆಂಡುಲ್ಕರ್ ಮೆಚ್ಚುಗೆಯನ್ನೂ ಗಳಿಸಿದ್ದರು. ಹೀಗಿದ್ದೂ ಈ ಬಾರಿ ಅನ್‌ಸೋಲ್ಡ್ ಆಗಿದ್ದ ಶೆಲ್ಡನ್ ಜಾಕ್ಸನ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದರೂ ಅಚ್ಚರಿಯಿಲ್ಲ.

3. ಲುವ್ನಿತ್ ಸಿಸೋಡಿಯಾ:

ಕರ್ನಾಟಕ ಮೂಲದ ಪ್ರತಿಭಾನ್ವಿತ ಬ್ಯಾಟರ್ ಲುವ್ನಿತ್ ಸಿಸೋಡಿಯಾ, ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿಯ ಮಿನಿ ಹರಾಜಿನಲ್ಲಿ ಸಿಸೋಡಿಯಾ ಅನ್‌ಸೋಲ್ಡ್ ಆಗಿದ್ದರು.

ಪಂತ್ ಅವರಂತೆಯೇ ಸ್ಪೋಟಕ ಎಡಗೈ ಬ್ಯಾಟರ್ ಆಗಿರುವ ಲುವ್ನಿತ್ ಸಿಸೋಡಿಯಾ, ಕರ್ನಾಟಕ ತಂಡದ ಪರ 15 ಪಂದ್ಯಗಳನ್ನಾಡಿ 127.83ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. ಇದೀಗ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವು ಸಿಸೋಡಿಯಾಗೆ ಬುಲಾವ್ ಬಂದರೂ ಅಚ್ಚರಿಯಿಲ್ಲ

click me!