ಎಂಎಸ್ ಧೋನಿಯಿಂದ ಸ್ಮೃತಿ ಮಂಧಾನವರೆಗೆ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗರು

First Published | Jan 13, 2023, 4:03 PM IST

ಕ್ರಿಕೆಟ್ ಅತ್ಯಂತ ಶ್ರೀಮಂತ ಕ್ರೀಡೆ  ಭಾರತದಲ್ಲಿ ಅದರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಕ್ರಿಕೆಟ್ ಮಂಡಳಿ BCCI, ಇತರ ಎಲ್ಲಕ್ಕಿಂತ ಶ್ರೀಮಂತವಾಗಿದೆ ಮತ್ತು ಪ್ರತಿ ವರ್ಷ ತನ್ನ ಆಟಗಾರರಿಗೆ ಭಾರಿ ಮೊತ್ತವನ್ನು ಪಾವತಿಸುತ್ತದೆ. ಇದಲ್ಲದೆ, ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಂದ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ದೊಡ್ಡ ಮೊತ್ತವನ್ನೂ ಸಂಭಾವನೆಯಾಗಿ ಪಡೆಯುತ್ತಾರೆ. ಹೀಗಾಗಿ  ಭಾರತದ ಕ್ರಿಕೆಟಿಗರು ಇತರ ಸೆಲೆಬ್ರಿಟಿಗಳಂತೆ ಅದ್ದೂರಿ ಜೀವನವನ್ನು ನಡೆಸುತ್ತಾರೆ. ಇತ್ತೀಚೆಗೆ ಐಷಾರಾಮಿ ಕಾರುಗಳನ್ನು ಖರೀದಿಸಿ ಭಾರತೀಯ ಕ್ರಿಕೆಟಿಗರ ವಿವರ ಇಲ್ಲಿದೆ.
 

ಸ್ಮೃತಿ ಮಂದಾನ -  Range rover:

ಭಾರತೀಯ ಮಹಿಳಾ ಕ್ರಿಕೆಟ್ ತಂಡದ  ಓಪನರ್ ಸ್ಮೃತಿ ಮಂದಾನ ಕೂಡ 2022 ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಇತ್ತೀಚೆಗೆ 72 ಲಕ್ಷ ಮೌಲ್ಯದ ರೇಂಜ್ ರೋವರ್ ಖರೀದಿಸಿದ್ದಾರೆ. ಅವರು ಹೀರೋ ಮೋಟೋಕಾರ್ಪ್, ಬೂಸ್ಟ್, ಹ್ಯುಂಡೈ ಮುಂತಾದ ಜನಪ್ರಿಯ ಬ್ರ್ಯಾಂಡ್‌ಗಳ ಅಂಬಾಸೈಡರ್‌ ಆಗಿದ್ದಾರೆ.

ಅಜಿಂಕ್ಯ ರಹಾನೆ - BMW 6 :

ಅಜಿಂಕ್ಯ ರಹಾನೆ ಅವರು ಮೇ 2022 ರಲ್ಲಿ ₹69.9 ಲಕ್ಷ ಮೌಲ್ಯದ BMW 6 ಸರಣಿಯ ಕಾರನ್ನು ಖರೀದಿಸಿದರು. 2023 ರ IPL  ಅವರು ₹50 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ಬಿಡ್‌ ಮಾಡಿದೆ.

Tap to resize

ರೋಹಿತ್ ಶರ್ಮಾ - Lamborghini Urus

ರೋಹಿತ್ ಶರ್ಮಾ ಅವರಿಗೆ 2022 ಉತ್ತಮ ಕ್ರಿಕೆಟ್ ವರ್ಷವಾಗಿಲ್ಲದಿರಬಹುದು, ಆದರೆ ಭಾರತೀಯ ಆರಂಭಿಕ ಆಟಗಾರನ ಗ್ಯಾರೇಜ್‌ಗೆ ಭಾರಿ ಮೊತ್ತದ ದೊಡ್ಡ ಕಾರು ಸೇರ್ಪಡೆಯಾಗಿದೆ. ರೋಹಿತ್‌ ಶರ್ಮ ಅವರು ಕಳೆದ ವರ್ಷ 3.5 ಕೋಟಿ ಮೌಲ್ಯದ ಲಂಬೋರ್ಗಿನಿ ಉರುಸ್ ಖರೀದಿಸಿದ್ದರು.ರೋಹಿತ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸಿದ್ದಾರೆ ಮತ್ತು ಅವರ ತಂಡಕ್ಕೆ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 2022 ರ T20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು ಮತ್ತು ಅವರ ವಾರ್ಷಿಕ ಆದಾಯ ಅಂದಾಜು 16 ಕೋಟಿ.

ಸೂರ್ಯಕುಮಾರ್ ಯಾದವ್ – Mercedes GLS 20

ಕಳೆದ ವರ್ಷ ಅದ್ಭುತ ರನ್ ಗಳಿಸಿದ ಮತ್ತು T20I ನಲ್ಲಿ ಭಾರತಕ್ಕೆ ಅತಿ ಹೆಚ್ಚು ರನ್ ಗಳಿಸಿದ ಸೂರ್ಯಕುಮಾರ್ ಯಾದವ್, 1.5 ಕೋಟಿ ಮೌಲ್ಯದ ಮರ್ಸಿಡಿಸ್ GLS 20 ಅನ್ನು ಖರೀದಿಸಿದ್ದಾರೆ. 2022 ರಲ್ಲಿ, ಯಾದವ್ ಟಿ 20ನಲ್ಲಿ 1164 ರನ್ ಗಳಿಸಿದರು. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸುತ್ತಾರೆ ಮತ್ತು ವಾರ್ಷಿಕ ₹ 8 ಕೋಟಿ ಸಂಬಳ ಪಡೆಯುತ್ತಾರೆ

ಶಿಖರ್ ಧವನ್ - BMW M8 Coupe :

 ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಐಷಾರಾಮಿ ಕಾರುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಈ ವರ್ಷ ದೆಹಲಿಯ ಕ್ರಿಕೆಟಿಗ  ತನ್ನ ಗ್ಯಾರೇಜ್‌ಗೆ BMW M8 Coupeಯನ್ನು ಸೇರಿಸಿದ್ದಾರೆ  ಮತ್ತು ಹೊಚ್ಚಹೊಸ ಕಾರಿನೊಂದಿಗೆ ಪೋಸ್ ನೀಡುತ್ತಿರುವ ಒಂದೆರಡು ಸ್ನ್ಯಾಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಧವನ್ ಖರೀದಿಸಿರುವ ಕಾರು ಮೆಟಾಲಿಕ್ ಬ್ಲ್ಯಾಕ್ ಶೇಡ್ ಆಗಿದ್ದು,  ಐಪಿಎಲ್  ಹರಾಜಿನಲ್ಲಿ ಎಡಗೈ ಬ್ಯಾಟರ್  ಪಂಜಾಬ್ ಕಿಂಗ್ಸ್  8.25 ಕೋಟಿಗೆ ತೆಗೆದುಕೊಂಡಿತು.

MS ಧೋನಿ – Kia EV6:

ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್‌ಗಳೆಂದರೆ ಸಖತ್‌ ಕ್ರೇಜ್‌ ಆದರೆ ಅವರ ಕಾರುಗಳ ಮೇಲಿನ ಪ್ರೀತಿ ಕಡಿಮೆಯೇನಲ್ಲ. ಕಳೆದ ವರ್ಷ, ಅವರು ತಮ್ಮ ಸಂಗ್ರಹಕ್ಕೆ ಹೊಸ SUV Kia EV6 ಕಾರನ್ನು ಸೇರಿಸಿದರು

ಶ್ರೇಯಸ್ ಅಯ್ಯರ್ - Mercedes AMG 63:

ಶ್ರೇಯಸ್ ಅಯ್ಯರ್  2022 ವರ್ಷವನ್ನು ಸಖತ್‌ ಸ್ಟೈಲ್‌ ಆಗಿ  ಮುಗಿಸಿದರು ಮತ್ತು ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಭಾರತದ ಪ್ರಮುಖ ರನ್ ಸ್ಕೋರರ್ ಆಗಿರುವ ಶ್ರೇಯಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 12.25 ಕೋಟಿಗೆ ಸಹಿ ಹಾಕಿದೆ. ಅಯ್ಯರ್ ಅವರು ಜೂನ್ 2022ರಲ್ಲಿ  2.45 ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ-63 ಕಾರನ್ನು ಖರೀದಿಸಿದ್ದಾರೆ. ಅವರು ತಮ್ಮ ಐಷಾರಾಮಿ ಕಾರಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Latest Videos

click me!