IPL 2022: ಈ ಭಾರತೀಯ ಯುವ ಆಟಗಾರರು ಸಖತ್‌ ಫಿಟ್ನೆಸ್‌ ಫ್ರೀಕ್‌!

First Published Apr 6, 2022, 5:14 PM IST

ಕ್ರಿಕೆಟ್‌ ಆಟಗಾರ ಫಿಟ್ ಆಗಿರುವುದು ಬಹಳ  ಮುಖ್ಯ . ಬ್ಯಾಟಿಂಗ್-ಬೌಲಿಂಗ್‌ನಿಂದ ಹಿಡಿದು ಮೈದಾನದಲ್ಲಿ ಚುರುಕುತನದ ಜೊತೆಗೆ ಕ್ರಿಕೆಟರ್ಸ್‌ಗೆ ಅವರ  ಫಿಟ್‌ನೆಸ್ ಸಹ  ಮುಖ್ಯವಾಗಿದೆಫಿಟ್ ಆಟಗಾರರ ಮಾತು ಬಂದಾಗಲೆಲ್ಲಾ ಮೊದಲು ಬರುವ ಹೆಸರು ವಿರಾಟ್ ಕೊಹ್ಲಿ. ಆದರೆ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್‌ಗೆ ಪೈಪೋಟಿ ನೀಡುವ ಅನೇಕ ಯುವ ಆಟಗಾರರು ಅವರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ. ಫಿಟ್ನೆಸ್ ಫ್ರೀಕ್ಆ ಗಿರುವ ಅಂತಹ ಯುವ ಆಟಗಾರರ ಬಗ್ಗೆ ಇಲ್ಲಿದೆ ವಿವರ.

ಕೆಎಲ್ ರಾಹುಲ್:
ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ಭಾರತದ ಫಿಟ್ ಆಟಗಾರರಲ್ಲಿ ಒಬ್ಬರು. ಆರೋಗ್ಯ ಮತ್ತು ಸ್ಟ್ರಾಂಗ್‌ ಆಗುವ ವಿಷಯ ಬಂದಾಗ, ಅವರು ತನ್ನ ದಿನಚರಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಂದರ್ಶನವೊಂದರಲ್ಲಿ, ಫಿಟ್‌ನೆಸ್ ಬಹು ಆಯಾಮದ ವಿಷಯವಾಗಿದ್ದು ಅದನ್ನು ಜಿಮ್ ಅಥವಾ ಓಟಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಪೋಷಣೆ, ನಿದ್ರೆ, ಚೇತರಿಕೆ ಮತ್ತು ಮಸಾಜ್ ಜಿಮ್‌ನಲ್ಲಿ ಬೆವರುವಷ್ಟೇ ಮುಖ್ಯ ಎಂದು ಹೇಳಿದ್ದರು. 

ಜಸ್ಪ್ರೀತ್ ಬುಮ್ರಾ:

ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಅನ್ನು ಮೈದಾನದಲ್ಲಿ ಅವರ ಚುರುಕುತನದಿಂದ ಅಳೆಯಬಹುದು. ಬುಮ್ರಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ನೋಡಿದಾಗ, ಅವರು ಹೆಚ್ಚಾಗಿ ಲೋವರ್ ಬಾಡಿ ವರ್ಕೌಟ್‌ಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಅವರು ಓಟ, ಈಜು ಮತ್ತು ಕಾರ್ಡಿಯೋ ಮೇಲೆ ಹೆಚ್ಚು ಗಮನಹರಿಸುತ್ತಾರೆ.

ಹಾರ್ದಿಕ್ ಪಾಂಡ್ಯ:

ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರು ಫಿಟ್ನೆಸ್ ವಿಷಯದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಸ್ಪರ್ಧಿಸುತ್ತಾರೆ. ಆದರೆ, ಸಂದರ್ಶನವೊಂದರಲ್ಲಿ ಅವರು ವಿರಾಟ್ ಕೊಹ್ಲಿಯಿಂದ ಫಿಟ್‌ನೆಸ್ ಪ್ರೇರಣೆ ಪಡೆಯುತ್ತಾರೆ ಎಂದು ಹೇಳಿದ್ದರು. 

ನವದೀಪ್ ಸೈನಿ:
ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ನವದೀಪ್ ಸೈನಿ ಫಿಟ್ನೆಸ್ ವಿಷಯದಲ್ಲಿ ದೊಡ್ಡ ಫಿಟ್ನೆಸ್ ಫ್ರೀಕ್‌ಗಳಿಗೆ ಪೈಪೋಟಿ ನೀಡುತ್ತಾರೆ. ಈ ಫೋಟೋದಲ್ಲಿ ಕಾಣುವ  ಅವರ ಸಿಕ್ಸ್ ಪ್ಯಾಕ್ ಅಬ್ಸ್‌  ನೋಡಿದರೆ ನವದೀಪ್ ಸೈನಿ ಫಿಟೆಸ್ಟ್‌ ಆಟಗಾರಗಾರಲ್ಲಿ ಒಬ್ಬರು ಎಂಬುದು ತಿಳಿಯುತ್ತದೆ.

ದೀಪಕ್ ಚಹಾರ್:

ಸಿಎಸ್‌ಕೆಯ ಯುವ ಆಲ್‌ರೌಂಡರ್ ದೀಪಕ್ ಚಹಾರ್ ಕೂಡ ಫಿಟ್‌ನೆಸ್ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಗಂಟೆಗಟ್ಟಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುವುದಲ್ಲದೆ, ಸೈಕ್ಲಿಂಗ್ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಓಡುವುದು ಅವರಿಗೆ ತುಂಬಾ ಇಷ್ಟ.

click me!