Happy Birthday ದಿಲೀಪ್ ವೆಂಗ್‌ಸರ್ಕಾರ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

Published : Apr 06, 2022, 11:58 AM IST

ಬೆಂಗಳೂರು: ಮುಂಬೈ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್, ಬುಧವಾರ(ಏ 06-2022)ವಾದ ಇಂದು ತಮ್ಮ 66ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ದಿಲೀಪ್ ವೆಂಗ್‌ಸರ್ಕಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

PREV
16
Happy Birthday ದಿಲೀಪ್ ವೆಂಗ್‌ಸರ್ಕಾರ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

Dilip Vengsarkar

ಭಾರತ ಕ್ರಿಕೆಟ್ ತಂಡವು ಜಗತ್ತಿಗೆ ಪರಿಚಯಿಸಿದ ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರು ಎನಿಸಿಕೊಂಡ ದಿಲೀಪ್ ವೆಂಗ್‌ಸರ್ಕಾರ್, ಮುಂಬೈನಲ್ಲಿ 1956ರಲ್ಲಿ ಜನಿಸಿದರು. ಅಗ್ರಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ವೆಂಗ್‌ಸರ್ಕಾರ್, 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 

26

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ದಿಲೀಪ್ ವೆಂಗ್‌ಸರ್ಕಾರ್, ಭಾರತ ಪರ 116 ಟೆಸ್ಟ್ ಪಂದ್ಯಗಳನ್ನಾಡಿ 17 ಶತಕ ಸಹಿತ 6,868 ರನ್ ಬಾರಿಸಿದ್ದಾರೆ. ಇದರ ಜತೆಗೆ ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ 3 ಶತಕ ಬಾರಿಸಿದ ಏಕೈಕ ವಿದೇಶಿ ಬ್ಯಾಟರ್ ಎನ್ನುವ ಹೆಗ್ಗಳಿಕೆ ದಿಲೀಪ್ ವೆಂಗ್‌ಸರ್ಕಾರ್ ಹೆಸರಿನಲ್ಲಿದೆ.

36
Dilip Vengsarkar

ಕ್ರಿಕೆಟ್‌ ದೈತ್ಯರೆನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ದವೂ ದಿಲೀಪ್ ವೆಂಗ್‌ಸರ್ಕಾರ್ ನಿರ್ಭೀತಿಯ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದರು. ಮಾಲ್ಕಂ ಮಾರ್ಶಲ್, ಮೈಕಲ್ ಹೋಲ್ಡಿಂಗ್ಸ್‌, ಆಂಡಿ ರಾರ್ಬರ್ಟ್ಸ್‌ ಅವರಂತಹ ಮಾರಕ ವೇಗಿಗಳಿದ್ದ ತಂಡವಾದ ವಿಂಡೀಸ್ ಎದುರು ವೆಂಗ್‌ಸರ್ಕಾರ್ 6 ಶತಕ ಚಚ್ಚಿದ್ದರು.

46

1975ರ ಇರಾನಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಆಕರ್ಷಕ ಶತಕ ಸಿಡಿಸಿ ಅದ್ಭುತ ಪ್ರದರ್ಶನ ತೋರಿದ್ದರಿಂದ ದಿಲೀಪ್ ವೆಂಗ್‌ಸರ್ಕಾರ್, 1975-76ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಟೀಂ ಇಂಡಿಯಾ ಆರಂಭಿಕನಾಗಿ ಪಾದಾರ್ಪಣೆ ಮಾಡಿದ್ದರು.

56

1987ರ ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಕಪಿಲ್ ದೇವ್ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ದಿಲೀಪ್ ವೆಂಗ್‌ಸರ್ಕಾರ್ ಟೀಂ ಇಂಡಿಯಾ ನಾಯಕನಾಗಿ ನೇಮಕಗೊಂಡಿದ್ದರು. ಆದರೆ 1989ರಲ್ಲಿ ಬಿಸಿಸಿಐ ಜತೆ ಮನಸ್ತಾಪ ಮಾಡಿಕೊಂಡು ನಾಯಕತ್ವಕ್ಕೆ ಗುಡ್‌ ಬೈ ಹೇಳಿದ್ದರು. ಇದಾದ ಬಳಿಕ ತಂಡದಿಂದ ಹೊರಬಿದ್ದರು. ಮರುವರ್ಷ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದರಾದರೂ, ಹಳೆಯ ಖದರ್ ಮುಂದುವರೆಸಲು ಸಾಧ್ಯವಾಗಲಿಲ್ಲ.

66

ಇನ್ನು 2006ರಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ದಿಲೀಪ್ ವೆಂಗ್‌ಸರ್ಕಾರ್ ನೇಮಕವಾದರು. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಧೋನಿ ಅವರನ್ನು ಹುಡುಕಿ ಟೀಂ ಇಂಡಿಯಾಗೆ ಆಡಲು ಅವಕಾಶ ಮಾಡಿಕೊಟ್ಟ ಹಿರಿಮೆ ಕೂಡಾ ದಿಲೀಪ್‌ ವೆಂಗ್‌ಸರ್ಕಾರ್‌ಗೆ ಸಲ್ಲುತ್ತದೆ.

Read more Photos on
click me!

Recommended Stories