ಹೆಂಡತಿ ಇನ್ನೊಬ್ಬ ಕ್ರಿಕೆಟಿಗನ ಕೈ ಹಿಡಿದಾಗ ಖಿನ್ನತೆಗೊಳಗಾಗಿದ್ದರು Dinesh Karthik

First Published | Apr 6, 2022, 2:01 PM IST

ಐಪಿಎಲ್ 2022 ರಲ್ಲಿ (IPL 2022) ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವೆ ಭರ್ಜರಿ ಪಂದ್ಯ ನಡೆಯಿತು. ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ ಆರ್‌ಸಿಬಿಗೆ 170 ರನ್‌ಗಳ ಗುರಿ ನೀಡಿತ್ತು. ಅದನ್ನು ದಾಟುವಲ್ಲಿ ಬೆಂಗಳೂರು ಸಾಕಷ್ಟು ಬೆವರು ಹರಿಸಬೇಕಾಯಿತು. ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಹೋದ ಬಳಿಕ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ (Dinesh Karthik) 23 ಎಸೆತಗಳಲ್ಲಿ 44 ರನ್ ಗಳಿಸಿ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಜಯ ತಂದುಕೊಟ್ಟರು. ಆದರೆ, ದಿನೇಶ್ ಕಾರ್ತಿಕ್ ಕ್ರಿಕೆಟ್‌ನ ಹೊರತಾಗಿ, ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಮುಖ್ಯಾಂಶಗಳಲ್ಲಿದ್ದಾರೆ. ತನ್ನ ಮೊದಲ ಹೆಂಡತಿ ದ್ರೋಹ ಮಾಡಿದ ನಂತರ ಅವರು ಸ್ಕ್ವಾಷ್ ಆಟಗಾರ್ತಿಯನ್ನು ಮದುವೆಯಾದರು. ದಿನೇಶ್ ಮತ್ತು ದೀಪಿಕಾ ಪಳ್ಳಿಕಲ್ (Dipika Pallikal) ಅವರ ಪ್ರೇಮಕಥೆ ಇಲ್ಲಿದೆ.

ಭಾರತ ಕ್ರಿಕೆಟ್ ತಂಡದ  ಆಟಗಾರ ದಿನೇಶ್ ಕಾರ್ತಿಕ್ ಅವರು 2007 ರಲ್ಲಿ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ಮೊದಲು ವಿವಾಹವಾಗಿದ್ದರು. ಆದರೆ ಮದುವೆಯ ನಂತರ ನಿಕಿತಾ ವಂಜಾರಾ  ದಿನೇಶ್ ಸ್ನೇಹಿತ ಹಾಗೂ ಕ್ರಿಕೆಟಿಗ ಮುರಳಿ ವಿಜಯ್ ಗೆ ಮನಸೋತರು. ಐಪಿಎಲ್ 5ರಲ್ಲಿ ನಿಕಿತಾ ಹಾಗೂ ಮುರಳಿ ವಿಜಯ್ ನಡುವೆ ಆತ್ಮೀಯತೆ ಹೆಚ್ಚಿತ್ತು ಎನ್ನಲಾಗಿದೆ. 

ಈ ವೇಳೆ ನಿಕಿತಾ ಕೂಡ ಗರ್ಭಿಣಿಯಾಗಿದ್ದರು. ಈ ವಿಷಯ ತಿಳಿದ ಕಾರ್ತಿಕ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿದರು  ಮತ್ತು ಹುಟ್ಟಲಿರುವ ಮಗುವಿನ ಮೇಲೆ ಯಾವುದೇ ಹಕ್ಕನ್ನು ವ್ಯಕ್ತಪಡಿಸಲಿಲ್ಲ. ವಿಚ್ಛೇದನದ ನಂತರ, ನಿಕಿತಾ ಮುರಳಿ ವಿಜಯ್ ವಿವಾಹವಾದರು ಮತ್ತು ನಂತರ ಅವರಿಗೆ ಒಬ್ಬ ಮಗನಿದ್ದಾನೆ. 
 

Tap to resize

ಈ ಕಾರಣದಿಂದ ದಿನೇಶ್ ಕಾರ್ತಿಕ್ ಖಿನ್ನತೆಗೆ ಒಳಗಾಗಿದ್ದರು. ಅದರಿಂದ ಹೊರಬರಲು ಅವರಿಗೆ ಬಹಳ ಸಮಯ ಹಿಡಿಯಿತು. ಈ ವೇಳೆ ದಿನೇಶ್ ಜಿಮ್‌ಗೆ ಸೇರಿಕೊಂಡರು. 2009-10ರ ನಡುವೆ ಅವರು ಅಂತಾರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು. ಮೊದಲ ಭೇಟಿಯಲ್ಲಿಯೇ ದಿನೇಶ್ ದೀಪಿಕಾ ಅವರಿಗೆ ಮನಸೋತಿದ್ದರು.ಆದರೆ ದೀಪಿಕಾಗೆ ಅದರ ಬಗ್ಗೆ ತಿಳಿದಿರಲಿಲ್ಲ.

2012 ರಲ್ಲಿ, ದೀಪಿಕಾಗೆ  ನೀವು ರಾತ್ರಿಯ ಊಟಕ್ಕೆ ಏನು ಮಾಡುತ್ತೀರಿ?' ಎಂದು ದಿನೇಶ್ ಕಾರ್ತಿಕ್ ಮೆಸೇಜ್‌ ಮಾಡಿದ್ದರು. ಇದಾದ ನಂತರ 5-6 ಬಾರಿ ಕೇಳಿದರೂ ಉತ್ತರಿಸಲಿಲ್ಲ. ಮರು ದಿನ ಬೆಳಿಗ್ಗೆ ಜಿಮ್‌ನಲ್ಲಿ ಇಬ್ಬರೂ ಭೇಟಿಯಾದರು.

ನಂತರ ಇಬ್ಬರೂ ತಿಂಡಿಗೆ ಹೋದರು ಮತ್ತು ಇಬ್ಬರ ನಡುವೆ ಶುರುವಾದ ಮಾತುಕತೆ ಪ್ರೀತಿಗೆ ತಿರುಗಿತ್ತು. ಆಗ ಏನಾಯಿತೆಂದರೆ, ದೀಪಿಕಾ ಅವರ ಮನೆಯಲ್ಲಿ ವಿಷಯ ತಿಳಿಸಿದರು ಮತ್ತು ಇಬ್ಬರೂ ನವೆಂಬರ್ 2013 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಆಗಸ್ಟ್ 2015 ರಲ್ಲಿ ಇಬ್ಬರೂ ಮದುವೆಯಾದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರು ಅವಳಿ ಮಕ್ಕಳಿಗೆ ಪೋಷಕರಾದ್ದರು. ಇವರ ಮಕ್ಕಳ ಹೆಸರು ಕಬೀರ್ ಪಳ್ಳಿಕಲ್ ಕಾರ್ತಿಕ್ ಮತ್ತು ಜಿಯಾನ್ ಪಳ್ಳಿಕಲ್ ಕಾರ್ತಿಕ್.

ಫೈಲ್‌ ಫೋಟೊ

ದೀಪಿಕಾ  ಅಂತರರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ. 2014ರ ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಜೋಶ್ನಾ ಚಿನಪ್ಪ ಅವರೊಂದಿಗೆ ಡಬಲ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ಸಮಯದಲ್ಲಿ, 2018 ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಅವರು
ಮಿಶ್ರ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

ಮತ್ತೊಂದೆಡೆ, ದಿನೇಶ್ ಕಾರ್ತಿಕ್  ಈ ಬಾರಿ ಅವರು ಆರ್‌ಸಿಬಿ ಟೀಮ್‌ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಹಲವು ವರ್ಷಗಳ ಕಾಲ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದರು. ಇದುವರೆಗೆ ಅವರು ಈ ಋತುವಿನ ಮೂರು ಪಂದ್ಯಗಳಲ್ಲಿ 90 ರನ್ ಗಳಿಸಿದ್ದಾರೆ. ಮಂಗಳವಾರ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. 

Latest Videos

click me!