IPL 2022 ಹೀಗಿದೆ ನೋಡಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ RCB ಸಂಭಾವ್ಯ ತಂಡ

Published : May 04, 2022, 05:20 PM IST

ಬೆಂಗಳೂರು(ಮೇ.4): 15ನೇ ಅವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಪುಣೆಯ ಎಂಸಿಎ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯವು ಆರ್‌ಸಿಬಿ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಚೆನ್ನೈ ಎದುರಿನ ಪಂದ್ಯಕ್ಕೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಹೀಗಿದೆ ನೋಡಿ.

PREV
111
IPL 2022 ಹೀಗಿದೆ ನೋಡಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ RCB ಸಂಭಾವ್ಯ ತಂಡ

1. ಫಾಫ್ ಡು ಪ್ಲೆಸಿಸ್: ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಎರಡು ಅರ್ಧಶತಕ ಚಚ್ಚಿದ್ದು, ಆರ್‌ಸಿಬಿ ಪರ ಸದ್ಯ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದಾರೆ. ಇದೀಗ ಫಾಫ್ ತಮ್ಮ ಮಾಜಿ ತಂಡದ ಎದುರು ದೊಡ್ಡ ಮೊತ್ತ ಬಾರಿಸುವ ಲೆಕ್ಕಾಚಾರದಲ್ಲಿದ್ದಾರೆ.

211

2. ವಿರಾಟ್ ಕೊಹ್ಲಿ: ಆರಂಭಿಕ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಹ್ಲಿ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಸಿಎಸ್‌ಕೆ ಎದುರು ಅದೇ ಫಾರ್ಮ್‌ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

311

Royal Challengers Bangalore
Virat Kohli, AB de Villiers, Devdutt Padikkal, Md. Siraj, Navdeep Saini, Washington Sundar, Yuzvendra Chahal, Joshua Phillipe, Pavan Deshpande, Shahbaz Ahmed, Adam Zampa, Kane Richardson, Kyle Jamieson, Glenn Maxwell, Dan Christian, Sachin Baby, Rajat Patidar, Mohammed Azharudeen, Suyash Prabhudesai and Kona Srikar Bharat.

3. ರಜತ್ ಪಾಟೀದಾರ್: ಯುವ ಬ್ಯಾಟರ್ ಪಾಟೀದರ್ ಕೂಡಾ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಚೊಚ್ಚಲ ಐಪಿಎಲ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಇಂದು ಕೂಡಾ ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

411

4. ಗ್ಲೆನ್ ಮ್ಯಾಕ್ಸ್‌ವೆಲ್‌: ಆಸೀಸ್ ಆಲ್ರೌಂಡರ್‌ ಮ್ಯಾಕ್ಸ್‌ವೆಲ್‌ ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತೋರಿದಂತಹ ಪ್ರದರ್ಶನವನ್ನು ಮರುಕಳಿಸುವಲ್ಲಿ ಈ ಬಾರಿ ವಿಫಲವಾಗಿದ್ದಾರೆ. ಆದರೆ ಮ್ಯಾಕ್ಸಿ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸುವ ಕ್ಷಮತೆ ಹೊಂದಿದ್ದಾರೆ.

511

5. ಶಾಬಾಜ್ ಅಹಮ್ಮದ್: ಆರ್‌ಸಿಬಿ ತಂಡದ ಪರ ಶಾಬಾಜ್ ಅಹಮ್ಮದ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಶಾಬಾಜ್ ಬೌಲಿಂಗ್‌ನಲ್ಲೂ ಕೂಡಾ ಉತ್ತಮ ಪ್ರದರ್ಶನ ತೋರಿದ್ದರು.

611

6. ದಿನೇಶ್ ಕಾರ್ತಿಕ್‌: ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್‌ ದಿನೇಶ್ ಕಾರ್ತಿಕ್ ಆರಂಭಿಕ ಕೆಲ ಪಂದ್ಯಗಳನ್ನು ಅಬ್ಬರಿಸಿದರಾದರೂ, ಆ ಬಳಿಕ ತಮ್ಮ ಹಳೆಯ ಖದರ್ ಕಳೆದುಕೊಂಡಿದ್ದಾರೆ. ಸಿಎಸ್‌ಕೆ ಎದುರು ಕಾರ್ತಿಕ್ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

711

7. ಮಹಿಪಾಲ್ ಲೋಮ್ರರ್: ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಆರ್‌ಸಿಗೆ ಪಾದಾರ್ಪಣೆ ಮಾಡಿರುವ ಲೋಮ್ರರ್, ಮೊದಲು ಪಂದ್ಯದಲ್ಲೇ ಚುರುಕಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ದಾರೆ.

811
Wanindu Hasaranga RCB

8. ವನಿಂದು ಹಸರಂಗ: ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿರುವ ಲಂಕಾದ ಸ್ಪಿನ್ನರ್‌ ಹಸರಂಗ, ಇದೀಗ ಸಿಎಸ್‌ಕೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

911

9. ಹರ್ಷಲ್‌ ಪಟೇಲ್‌: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಜಯಿಸಿದ್ದ ಹರ್ಷಲ್ ಪಟೇಲ್ ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ವಿಕೆಟ್ ಕಬಳಿಸಲು ಪಟೇಲ್ ಕೊಂಚ ಹಿಂದೆ ಬಿದ್ದಿದ್ದರೂ ಸಹಾ, ಡೆತ್ ಓವರ್‌ನಲ್ಲಿ ಎದುರಾಳಿ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

1011

10. ಜೋಶ್ ಹೇಜಲ್‌ವುಡ್: ಆರ್‌ಸಿಬಿ ತಂಡದ ವೇಗಿ ಹೇಜಲ್‌ವುಡ್‌ 6 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದಾರೆ. ಹೇಜಲ್‌ವುಡ್‌ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಸ್‌ಕೆ ಎದುರು ಆರ್‌ಸಿಬಿ ಗೆಲ್ಲಬೇಕಿದ್ದರೆ ಹೇಜಲ್‌ವುಡ್‌ ಮಾರಕ ದಾಳಿ ನಡೆಸಬೇಕಿದೆ.

1111

11. ಮೊಹಮ್ಮದ್ ಸಿರಾಜ್: ಹೈದರಾಬಾದ್ ಮೂಲದ ವೇಗಿ ಸಿರಾಜ್ ಈ ಬಾರಿಯ ಐಪಿಎಲ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸಲು ವಿಫಲರಾಗಿದ್ದಾರೆ. ಸಿರಾಜ್ ಅವರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.

Read more Photos on
click me!

Recommended Stories