IPL 2022 - ಬಾಲಿವುಡ್ ಬೆಡಗಿಯರ ಜೊತೆ ಕ್ರಿಕೆಟಿಗರ ಲವ್‌ ಆಫೇರ್ಸ್‌!

First Published | Apr 1, 2022, 9:45 PM IST

ಭಾರತದಲ್ಲಿ  ಕ್ರಿಕೆಟ್ ಮತ್ತು ಬಾಲಿವುಡ್ ಯಾವಾಲೂ ಹಾಟ್‌ ಟಾಪಿಕ್‌ಗಳಾಗಿವೆ. ಈ ಎರಡು ವಿಷಯಗಳು ಹೆಚ್ಚು ವೀಕ್ಷಿಸಲ್ಪಡುತ್ತವೆ ಮತ್ತು ಇಷ್ಟಪಡುತ್ತವೆ. ಬಾಲಿವುಡ್ ನಟಿಯರೊಂದಿಗೆ ಕ್ರಿಕೆಟಿಗರು ಸಂಬಂಧದ ಸುದ್ದಿ ಬಂದಾಗ, ಅಭಿಮಾನಿಗಳು ಅದರ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅನೇಕ ಕ್ರಿಕೆಟಿಗರು ಪ್ರಸಿದ್ಧ ಬಾಲಿವುಡ್ ನಟಿಯರನ್ನು ಮದುವೆಯಾದರು.ಆದರೆ ಕೆಲವರ ಸಂಬಂಧ ಮುಂದುವರೆಯದೆ ಹಾಗೇ ಅಪೂರ್ಣವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಕೆಲವು ಆಟಗಾರರ ಹೆಸರುಗಳು ಬಾಲಿವುಡ್ ನಟಿಯರೊಂದಿಗೆ ಸೇರಿಕೊಂಡಿತ್ತು ಮತ್ತು  ಅವರ ಸಂಬಂಧವೂ ಸಾಕಷ್ಟು ಚರ್ಚೆಯಾಯಿತು.  ಕೊನೆಯಲ್ಲಿ ಇಬ್ಬರೂ ಬೇರೆಯಾದ ಹಲವು ಉದಾಹರಣೆಗಳು ಇಲ್ಲಿವೆ.  ಬಾಲಿವುಡ್ ನಟಿಯೊಂದಿಗೆ ಲಿಂಕ್-ಅಪ್ ಸುದ್ದಿ ಹೊಂದಿರುವ ಕ್ರಿಕೆಟಿಗರು ಇವರು.

ಎಂಎಸ್ ಧೋನಿ ಮತ್ತು ದೀಪಿಕಾ ಪಡುಕೋಣೆ:
ಬಾಲಿವುಡ್‌ನ ಮಸ್ತಾನಿ ದೀಪಿಕಾ ಪಡುಕೋಣೆ ಮತ್ತು ಭಾರತದ ಯಶಸ್ವಿ ನಾಯಕ ಎಂಎಸ್ ಧೋನಿ ಸಂಬಂಧದ ಸುದ್ದಿಯೂ ಸುದ್ದಿಯಲ್ಲಿತ್ತು. ದೀಪಿಕಾಳ ಪ್ರೀತಿಯಲ್ಲಿ ಧೋನಿ ಎಷ್ಟು ಸೋತಿದ್ದನೆಂದರೆ, ಆಕೆಯನ್ನು ಮದುವೆಯ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ, ಯುವರಾಜ್ ಜೊತೆಗಿನ ದೀಪಿಕಾ ಅವರ ಆಪ್ತತೆಯಿಂದ ಧೋನಿ ತಮ್ಮ ಪ್ರೀತಿಯನ್ನು ತ್ಯಜಿಸಿದರು. ಇದಾದ ನಂತರ ಯುವರಾಜ್ ಮತ್ತು ದೀಪಿಕಾ ಕೂಡ ಬೇರ್ಪಟ್ಟರು. ನಂತರ ದೀಪಿಕಾ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಈಗ ಧೋನಿ ಮತ್ತು ಸಾಕ್ಷಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್:

ಬಾಲಿವುಡ್ ನಟಿ ಊರ್ವಶಿ ರೌಟೇಲಾ 2018 ರಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಲೇಟ್‌ ನೈಟ್‌ ಪಾರ್ಟಿಗಳಲ್ಲಿ ಇವರಿಬ್ಬರೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವ ಮೊದಲು, ಇಬ್ಬರೂ ಬೇರೆಯಾದರು. ಅವರ ಸಂಬಂಧವನ್ನು ಮುಂದುವರಿಸಲು ಬಯಸದ ಕಾರಣ ಪಂತ್ ಊರ್ವಶಿಯನ್ನು ವಾಟ್ಸಾಪ್‌ನಲ್ಲಿ ಬ್ಲಾಕ್‌ ಕೂಡ ಎಂಬ ವರದಿಗಳೂ ಇವೆ. ಈಗ ರಿಷಬ್ ಪಂತ್ ಇಶಾ ನೇಗಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

Tap to resize

ಸೋನಾಲ್ ಚೌಹಾಣ್ ಮತ್ತು ಕೆಎಲ್ ರಾಹುಲ್:

ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಈ ದಿನಗಳಲ್ಲಿ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ಕ್ರಿಕೆಟಿಗನ ಹೆಸರು 'ಜನ್ನತ್' ನಟಿ ಸೋನಾಲ್ ಚೌಹಾಣ್ ಸೇರಿದಂತೆ ಹಲವಾರು ನಟಿಯರೊಂದಿಗೆ ಕೇಳಿ ಬಂದಿದೆ.

ಹಾರ್ದಿಕ್ ಪಾಂಡ್ಯ ಮತ್ತು ಪರಿಣಿತಿ ಚೋಪ್ರಾ:
ಟ್ವಿಟ್ಟರ್‌ನಲ್ಲಿ ಪರಿಣಿತಿ ಮತ್ತು ಹಾರ್ದಿಕ್ ಅವರ ಸಂಭಾಷಣೆಯ ಕಾರಣದಿಂದ ಅವರ ಪ್ರೇಮ ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇಬ್ಬರೂ ಒಟ್ಟಿಗೆ ವಿದೇಶಕ್ಕೆ ಹೋಗಿದ್ದರು ಎಂದು ಕೂಡ ಹೇಳಲಾಗಿತ್ತು. ಆದರೆ ಕಾರ್ಯಕ್ರಮವೊಂದರಲ್ಲಿ 'ನಾನು ಒಂಟಿಯಾಗಿದ್ದೇನೆಯೇ ಇಲ್ಲವೇ ಎಂಬುದು ಚರ್ಚೆಯಲ್ಲ, ಆದರೆ ನಾನು ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡುತ್ತಿಲ್ಲ' ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು ಪರಿಣಿತಿ.

ಯುವರಾಜ್ ಸಿಂಗ್ ಮತ್ತು ಕಿಮ್ ಶರ್ಮಾ:

ಭಾರತದ ಆಲ್‌ರೌಂಡರ್ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಕಿಮ್ ಶರ್ಮಾ ಅವರೊಂದಿಗೆ 4 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಮದುವೆಯಾಗಲು ಬಯಸಿದ್ದರು ಆದರೆ ಯುವರಾಜ್ ಅವರ ತಾಯಿ ಈ ಸಂಬಂಧದಿಂದ ಸ್ವಲ್ಪವೂ ಸಂತೋಷವಾಗಿರಲಿಲ್ಲ. ಆದ್ದರಿಂದ ಅವರು ಬೇರ್ಪಟ್ಟರು. ಯುವರಾಜ್ ನಂತರ ಬಾಲಿವುಡ್ ನಟಿ ಹೇಜಲ್ ಕೀಚ್ ಅವರನ್ನು ವಿವಾಹವಾದರು. ಈ ವರ್ಷ ಮಗನ ತಂದೆಯೂ ಆಗಿದ್ದಾರೆ ಯುವರಾಜ್‌.

ಜಸ್ಪ್ರೀತ್ ಬುಮ್ರಾ ಮತ್ತು ಅನುಪಮಾ ಪರಮೇಶ್ವರನ್:

ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರಿತ್ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಅವರೊಂದಿಗೆ ರಿಲೆಷನ್‌ಶಿಪ್‌ನಲ್ಲಿ ಹೊಂದಿದ್ದರು. ಕಳೆದ ವರ್ಷ ಅವರ ಮದುವೆಗೂ ಮುನ್ನ ಅವರು ಅನುಪಮಾ ಅವರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಅವರು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರ ಜೊತೆ ಸಪ್ತಪದಿ ತುಳಿದರು.

ರೋಹಿತ್ ಶರ್ಮಾ ಮತ್ತು ಸೋಫಿಯಾ ಹಯಾತ್:

ಒಂದು ಕಾಲದಲ್ಲಿ ರೋಹಿತ್ ಶರ್ಮಾ ಮತ್ತು ಸೋಫಿಯಾ ಹಯಾತ್ ಸಾಕಷ್ಟು ಸುದ್ದಿ ಮಾಡಿದ್ದರು. ಬ್ರಿಟಿಷ್-ಭಾರತೀಯ ಮಾಡೆಲ್ ಸೋಫಿಯಾ ಹಯಾತ್ ರೋಹಿತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇಬ್ಬರೂ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಗಳು ಹೇಳುತ್ತವೆ.

Latest Videos

click me!