2021ರ IPL ಟೂರ್ನಿಯಲ್ಲಿ ಅಬ್ಬರಿಸಿದ ಈ ನಾಲ್ವರು ಆಟಗಾರರು ಈ ಬಾರಿ ಫುಲ್ ಸೈಲೆಂಟ್‌..!

Published : May 23, 2022, 03:15 PM IST

ಮುಂಬೈ: ಹೇಳಿ ಕೇಳಿ ಐಪಿಎಲ್​​​ನ (Indian Premier League 2022) ಬ್ಯಾಟರ್​​ಗಳ ನೆಚ್ಚಿನ ಕ್ರೀಡೆ. ಪ್ರತಿ ಸೀಸನ್​​ನಲ್ಲಿ ಬೌಲರ್ಸ್​ಗಿಂತ ಬ್ಯಾಟರ್ಸ್​ ಅಬ್ಬರವೇ ಹೆಚ್ಚು. ಅಂತೆಯೇ ಈ ಐವರು ಕಳೆದ ಸೀಸನ್​​ನ ಐಪಿಎಲ್ (IPL Tournament) ಟೂರ್ನಿಯಲ್ಲಿ ಧೂಳೆಬ್ಬಿಸಿದ್ರು. ಟೂರ್ನಿ ಆರಂಭದಿಂದ ಕೊನೆಯವರೆಗೆ ಸಿಕ್ಸರ್​​​-ಬೌಂಡ್ರಿಗಳ ಮಳೆಗರೆದ್ರು. ಅಭಿಮಾನಿಗಳಂತೂ ಈ ಜಬರ್ದಸ್ತ್​​ ಆಟವನ್ನ ಸಖತ್​ ಎಂಜಾಯ್​ ಮಾಡಿದ್ರು. ಆದ್ರೆ ಕಳೆದ ಸೀಸನ್​​ನಲ್ಲಿ ಅಬ್ಬರಿಸಿದ ಈ ನಾಲ್ವರು ಈ ಸಲ ಫ್ಲಾಫ್ ಶೋ ನೀಡಿ ಫ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

PREV
14
2021ರ IPL ಟೂರ್ನಿಯಲ್ಲಿ ಅಬ್ಬರಿಸಿದ ಈ ನಾಲ್ವರು ಆಟಗಾರರು ಈ ಬಾರಿ ಫುಲ್ ಸೈಲೆಂಟ್‌..!
1. ಪಂಜಾಬ್​ ಕ್ಯಾಪ್ಟನ್ ಆಗ್ತಿದ್ದಂತೆ ಮಂಕಾದ ಮಯಾಂಕ್ ಅಗರ್‌ವಾಲ್​​:

ಕಳೆದ ಸೀಸನ್​​ನಲ್ಲಿ ಕನ್ನಡಿಗ ಮಯಾಂಕ್​ ಅಗರ್‌ವಾಲ್​ 441 ರನ್​ ಬಾರಿಸಿ ಶೈನ್ ಆಗಿದ್ರು. ಕಳೆದ ಆವೃತ್ತಿಯಲ್ಲಿ ಪಂಜಾಬ್​ ಕಿಂಗ್ಸ್ ಪರ ಸೆಕೆಂಡ್​​​ ಹೈಯೆಸ್ಟ್​​​ ಸ್ಕೋರರ್ ಅನ್ನಿಸಿಕೊಂಡ್ರು. ಈ ಸಲನೂ ಮಯಾಂಕ್​​ರಿಂದ ಅಂತಹದೇ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದ್ರೆ ಈ ಸಲ 12 ಇನ್ನಿಂಗ್ಸ್​ಗಳಿಂದ ಮಯಾಂಕ್ ಜಸ್ಟ್​ 196 ರನ್​ ಗಳಿಸಿ ಭಾರಿ ನಿರಾಸೆ ಮೂಡಿಸಿದ್ರು.

24
2. ಬರೀ ಒಂದು ಸೀಸನ್​​ ಹೀರೋ ಆದ ವೆಂಕಟೇಶ್ ಅಯ್ಯರ್:

ಮಧ್ಯಪ್ರದೇಶದ ವೆಂಕಟೇಶ್ ಅಯ್ಯರ್​​​ ಕಳೆದ ಬಾರಿ ಕೆಕೆಆರ್ ಪರ ರನ್​ ಹೊಳೆ ಹರಿಸಿದ್ರು. 370 ರನ್​​ ಬಾರಿಸಿ ತಂಡ ಫೈನಲ್​ ತಲುಪಲು ಕಾರಣರಾಗಿದ್ರು. ಆದ್ರೆ ಇದೇ ವೆಂಕಿ ಈ ಸಲ ಪ್ಲಾಫ್​ ಶೋ ನೀಡಿದ್ರು. ಬರೀ ಒಂದು ಅರ್ಧಶತಕ ಗಳಿಸಿದ್ದು, ತೀರಾ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

34
3. ಡೇಂಜರಸ್​ ಪೊಲ್ಲಾರ್ಡ್​ ಗಳಿಸಿದ್ದು ಬರೀ 144 ರನ್:

ಇನ್ನು ಕಳೆದ 11 ಸೀಸನ್​​ಗಳಿಂದ ಮುಂಬೈ ಇಂಡಿಯನ್ಸ್ ಪರ ಕಿರನ್ ಪೊಲ್ಲಾರ್ಡ್​ ಫಿನಿಶಿಂಗ್​ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ರು. ಆದ್ರೆ ಈ ಬಾರಿ ಟೂರ್ನಿಯುದ್ದಕ್ಕೂ ದೈತ್ಯ ಪೊಲ್ಲಾರ್ಡ್​ ಕಳಪೆ ಆಟವಾಡಿದ್ರು. ಬರೀ 144 ರನ್​ ಗಳಿಸಿ ಪ್ಲೇಯಿಂಗ್​ ಇಲೆವೆನ್​​ನಿಂದ ಹೊರಬಿದ್ರು.
 

44
4. ಸೈಲೆಂಟಾದ ಪರ್ಪಲ್​ ಕ್ಯಾಪ್ ವಿನ್ನರ್​ ಹರ್ಷಲ್​ ​:

ಹರ್ಷಲ್ ಪಟೇಲ್​​ 2021ರಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿ ಪರ್ಪಲ್​ ಕ್ಯಾಪ್​​ ಗೆದ್ದಿದ್ರು. ಇಂತಹ ಬೌಲರ್ ಈ ಸಲ ಹಿಂದಿನ ಖದರ್ ತೋರಿಸಿಲ್ಲ. ಈವರೆಗೆ ಒಟ್ಟು 18 ವಿಕೆಟ್​​​ ಕಬಳಿಸಿದ್ದಾರೆ. ಸ್ಲಾಗ್​​​ನಲ್ಲಿ  ಹೇರಳವಾಗಿ ರನ್​​​​​ ಕೂಡ ಬಿಟ್ಟುಕೊಟ್ಟಿದ್ದಾರೆ. ಫೈನಲಿ ಮೇಲಿನ ಪ್ಲೇಯರ್ಸ್​ ಒಂದು ಸೀಸನ್​​ನಲ್ಲಿ ಹೀರೋ ಅನ್ನಿಸಿಕೊಂಡ್ರೆ ಇನ್ನೊಂದು ಸೀಸನ್​​ನಲ್ಲಿ ವಿಲನ್ ಆಗಿದ್ದಾರೆ.

Read more Photos on
click me!

Recommended Stories