IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

Suvarna News   | Asianet News
Published : Oct 31, 2021, 12:08 PM IST

ಮುಂಬೈ: ಬಹುನಿರೀಕ್ಷಿತ 2022ನೇ ಸಾಲಿನ ಐಪಿಎಲ್‌ (IPL 2022) ಟೂರ್ನಿಯಲ್ಲಿ ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಮತ್ತೆರಡು ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಇನ್ನು ಕೆಲವೇ ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದೆ. ಇದರ ಬೆನ್ನಲ್ಲೇ ಬಿಸಿಸಿಐ (BCCI) ಹರಾಜಿನ ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.   

PREV
110
IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

ಮುಂಬರುವ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಸಂಬಂಧ ಬಿಸಿಸಿಐ ಕೆಲವು ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಇದು ಫ್ರಾಂಚೈಸಿಗಳಲ್ಲಿ ಹೊಸ ಹುರುಪು ತುಂಬುವಂತೆ ಮಾಡಿದೆ.

210

ಬಿಸಿಸಿಐ ಬಿಡುಗಡೆಗೊಳಿಸಿದ ಹೊಸ ನಿಯಮದನ್ವಯ ಎಲ್ಲಾ 10 ತಂಡಗಳು ಆಟಗಾರರಿಗೆ ಪಾವತಿಸುವ ಒಟ್ಟಾರೆ ವೇತನಕ್ಕೆ ತಲಾ 90 ಕೋಟಿ ರುಪಾಯಿ ಮಿತಿ ಹಾಕಲಾಗಿದೆ.

310

ಅಂದರೆ 90 ಕೋಟಿ ರುಪಾಯಿ ಒಳಗಡೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಈ ಮೊದಲು 85 ಕೋಟಿ ರುಪಾಯಿಯೊಳಗಡೆ ಆಟಗಾರರನ್ನು ಖರೀದಿಸಬೇಕಿತ್ತು.

410

ಇದಷ್ಟೇ ಅಲ್ಲದೇ ಹಳೆಯ 8 ತಂಡಗಳು ತಮಗೆ ಬೇಕಾದ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಉಳಿಸಿಕೊಳ್ಳುವ ನಾಲ್ವರ ಪೈಕಿ ಗರಿಷ್ಠ ಮೂವರು ಭಾರತೀಯ ಮತ್ತು ಓರ್ವ ವಿದೇಶಿ ಅಥವಾ ಇಬ್ಬರು ಭಾರತೀಯ ಮತ್ತು ಇಬ್ಬರು ವಿದೇಶಿ ಆಟಗಾರರಾಗಿರಬಹುದು.

510
আইপিএল নিলামের ছবি

ಇನ್ನು ತಂಡಗಳು ಉಳಿಸಿಕೊಂಡ 4 ಆಟಗಾರರಿಗೆ ನೀಡುವ ಗರಿಷ್ಠ ಮೊತ್ತ 42 ಕೋಟಿ ರು. ಆಗಿರಬೇಕು. ಒಂದು ವೇಳೆ ತಂಡಗಳು 3 ಆಟಗಾರರನ್ನು ಉಳಿಸಿಕೊಂಡರೆ ಅದಕ್ಕೆ 33 ಕೋಟಿ ರುಪಾಯಿ ಮಿತಿ, ಇಬ್ಬರನ್ನು ಉಳಿಸಿಕೊಂಡರೆ 24 ಕೋಟಿ ರುಪಾಯಿ ವೇತನ ಮಿತಿ ಇರಲಿದೆ.

610

ಅಂದರೆ ಒಂದು ಫ್ರಾಂಚೈಸಿ 4 ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ಮೊದಲ ಆಟಗಾರನಿಗೆ 16 ಕೋಟಿ ರುಪಾಯಿ, ಎರಡನೇ ಆಟಗಾರನಿಗೆ 12 ಕೋಟಿ ರುಪಾಯಿ, ಮೂರನೇ ಆಟಗಾರನಿಗೆ 8 ಕೋಟಿ ರುಪಾಯಿ ಹಾಗೂ ನಾಲ್ಕನೇ ಆಟಗಾರನಿಗೆ 6 ಕೋಟಿ ರುಪಾಯಿ ನೀಡಿ ತನ್ನಲ್ಲೇ ಉಳಿಸಿಕೊಳ್ಳಬಹುದಾಗಿದೆ.

710

ಇನ್ನು ಒಂದು ಫ್ರಾಂಚೈಸಿ 3 ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ಮೊದಲ ಆಟಗಾರನಿಗೆ 15 ಕೋಟಿ ರುಪಾಯಿ, ಎರಡನೇ ಆಟಗಾರನಿಗೆ 11 ಕೋಟಿ ರುಪಾಯಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರುಪಾಯಿ ನೀಡಿ ತನ್ನಲ್ಲೇ ಉಳಿಸಿಕೊಳ್ಳಬಹುದಾಗಿದೆ.

810

ಒಂದು ವೇಳೆ ಫ್ರಾಂಚೈಸಿ 2 ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ಮೊದಲ ಆಟಗಾರನಿಗೆ 14 ಕೋಟಿ ರುಪಾಯಿ ಹಾಗೂ ಎರಡನೇ ಆಟಗಾರನಿಗೆ 10 ಕೋಟಿ ರುಪಾಯಿ ನೀಡಬೇಕಾಗುತ್ತದೆ. ಒಂದು ವೇಳೆ ಫ್ರಾಂಚೈಸಿ ಕೇವಲ ಒಬ್ಬ ಆಟಗಾರನನ್ನು ಮಾತ್ರ ರೀಟೈನ್ ಮಾಡಿಕೊಳ್ಳಲು ಬಯಸಿದರೆ 14 ಕೋಟಿ ರುಪಾಯಿ ನೀಡಿ ಉಳಿಸಿಕೊಳ್ಳಬಹುದಾಗಿದೆ

910

ಇನ್ನು ಐಪಿಎಲ್‌ಗೆ ಸೇರ್ಪಡೆಯಾದ ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್‌ ತಂಡಗಳಿಗೆ ಆಕ್ಷನ್‌ ಪೂಲ್‌ನಿಂದ ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಇದರಲ್ಲಿ ಇಬ್ಬರು ಭಾರತೀಯ ಮತ್ತು ಓರ್ವ ವಿದೇಶಿ ಆಟಗಾರನಾಗಿರಬಹುದು.

1010

ಇದಷ್ಟೇ ಅಲ್ಲದೇ ಹಳೆಯ 8 ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಳ್ಳಲು 2021ರ ನವೆಂಬರ್ 01ರಿಂದ 2021ರ ನವೆಂಬರ್ 31ರ ವರೆಗೆ ಅವಕಾಶ ನೀಡಲಾಗಿದೆ. ಇನ್ನು 2 ಹೊಸ ಫ್ರಾಂಚೈಸಿಗಳು ಡಿಸೆಂಬರ್ 01ರಿಂದ ಡಿಸೆಂಬರ್ 25ರ ವರೆಗೆ ಆಕ್ಷನ್ ಪೂಲ್‌ನಿಂದ ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
 

Read more Photos on
click me!

Recommended Stories