RCB ಸೇರಿಕೊಂಡ ನಾಯಕ ವಿರಾಟ್ ಕೊಹ್ಲಿ; ಚೆನ್ನೈನಲ್ಲಿ ತರಬೇತಿ ಶಿಬಿರ!

First Published Apr 1, 2021, 3:05 PM IST

IPL 2021 ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ. ಇದೀಗ ಕ್ರಿಕೆಟಿಗರು ತಮ್ಮ ತಮ್ಮ ತಂಡ ಸೇರಿಕೊಳ್ಳುತ್ತಿದ್ದಾರೆ. ಕೊರೋನಾ ವೈರಸ್ ಕಾರಣ ಕ್ವಾರಂಟೈನ್, ಬಯೋಬಬಲ್ ಸರ್ಕಲ್ ನಿಯಮ ಪಾಲಿಸಬೇಕಿದೆ. ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಡಬಲ್ ಆಗಿದೆ. ಕಾರಣ ನಾಯಕ ವಿರಾಟ್ ಕೊಹ್ಲಿ ತಂಡ ಸೇರಿಕೊಂಡಿದ್ದಾರೆ.

ಎಪ್ರಿಲ್ 9 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಕೊರೋನಾ ನಡುವೆ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಿ ಟೂರ್ನಿ ಆಯೋಜನೆ ಮಾಡಲಾಗುತ್ತಿದೆ.
undefined
ಚೆನ್ನೈನಲ್ಲಿ ಬೀಡುಬಿಟ್ಟಿರುವ ಆರ್‌ಸಿಬಿ ತಂಡಕ್ಕೆ ಇದೀಗ ನಾಯಕ ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರು ತಂಡದ ಜೋಶ್ ಇಮ್ಮಡಿಯಾಗಿದೆ.
undefined
ಕ್ವಾರಂಟೈನ್, ಬಯೋಬಬಲ್ ನಿಯಮಗಳನ್ನು ಕೊಹ್ಲಿ ಪಾಲಿಸಬೇಕಿದೆ. ಇದು ಅತ್ಯಂತ ಕಠಿಣ ಸವಾಲು ಎಂದು ಕೊಹ್ಲಿ ಈಗಾಗಲೇ ಹೇಳಿದ್ದಾರೆ. ಆದರೆ ಕೊರೋನಾ ಕಾರಣ ನಿಯಮ ಕಡ್ಡಾಯವಾಗಿದೆ.
undefined
ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಸಿ ತವರಿಗೆ ವಾಪಾಸ್ಸಾಗಿದ್ದ ವಿರಾಟ್ ಕೊಹ್ಲಿ ಇದೀಗ ಚೆನ್ನೈನಲ್ಲಿರುವ ಬೆಂಗಳೂರು ತಂಡ ಕೂಡಿಕೊಂಡಿದ್ದಾರೆ. ಮಾರ್ಚ್ 31ಕ್ಕೆ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ಕೂಡ ಆರ್‌ಸಿಬಿ ಸೇರಿಕೊಂಡಿದ್ದಾರೆ.
undefined
ಆರ್‌ಸಿಬಿ ತಂಡ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ. ಇದಕ್ಕಾಗಿ ಈಗಾಗಲೇ ಆರ್‌ಸಿಬಿ ಅಭ್ಯಾಸ ಆರಂಭಿಸಿದೆ.
undefined
ಆರ್‌ಸಿಬಿ ತಂಡ ತನ್ನ ಮೊದಲ ಚರಣದ ಹೋರಾಟವನ್ನು ಚೆನ್ನೈನಲ್ಲಿ ನಡೆಸಲಿದೆ. ಮುಂಬೈ ವಿರುದ್ಧದ ಪಂದ್ಯದ ಬಳಿಕ ಹೈದರಾಬಾದ್, ಕೆಕೆಆರ್, ರಾಜಸ್ಥಾನ ವಿರುದ್ಧ ಹೋರಾಟ ನಡೆಸಲಿದೆ.
undefined
ಮೇ.30ರ ವರೆಗೆ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಂಡ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ
undefined
click me!