ಐಪಿಎಲ್ 2021: ಸ್ಟಾರ್ ಸ್ಪಿನ್ನರ್‌ಗೆ ಸಿಎಸ್‌ಕೆ ತಂಡದಿಂದ ಗೇಟ್‌ಪಾಸ್‌..!

Suvarna News   | Asianet News
Published : Jan 20, 2021, 04:47 PM IST

ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಫೆಬ್ರವರಿ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೂ ಜನವರಿ 20ರೊಳಗಾಗಿ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವ ಹೆಸರನ್ನು ಅಂತಿಮಗೊಳಿಸಲು ಸೂಚಿಸಿದೆ. ಇದರ ಭಾಗವಾಗಿ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಫ್ರಾಂಚೈಸಿ ತಮ್ಮ ಅನುಭವಿ ಸ್ಪಿನ್ನರ್‌ಗೆ ಗೇಟ್‌ ಪಾಸ್‌ ನೀಡಿದೆ. ಯಾರು ಆ ಸ್ಪಿನ್ನರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.  

PREV
16
ಐಪಿಎಲ್ 2021: ಸ್ಟಾರ್ ಸ್ಪಿನ್ನರ್‌ಗೆ ಸಿಎಸ್‌ಕೆ ತಂಡದಿಂದ ಗೇಟ್‌ಪಾಸ್‌..!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

26

ಈ ಮೊದಲು ಆಡಿದ ಎಲ್ಲಾ 10 ಆವೃತ್ತಿಗಳಲ್ಲೂ ಪ್ಲೇ ಆಫ್‌ ಪ್ರವೇಶಿಸಿದ್ದ ಏಕೈಕ ತಂಡ ಎನಿಸಿಕೊಂಡಿದ್ದ ಸಿಎಸ್‌ಕೆ ತಂಡವು ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು.

36

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಸುರೇಶ್ ರೈನಾ ಹಾಗೂ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣಗಳಿಂದ ತಂಡದಿಂದ ಹಿಂದೆ ಸರಿದಿದ್ದು ಸಿಎಸ್‌ಕೆ ಪಾಲಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು.

46

ಕಳೆದ ಆವೃತ್ತಿಯಲ್ಲಿನ ನೀರಸ ಪ್ರದರ್ಶನದಿಂದ ಎಚ್ಚೆತ್ತುಕೊಂಡಂತಿರುವ ಸಿಎಸ್‌ಕೆ ಫ್ರಾಂಚೈಸಿ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ.

56

ಇದರ ಭಾಗವಾಗಿ ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್‌ ಸಿಂಗ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಗೇಟ್‌ ಪಾಸ್ ನೀಡಲಾಗಿದೆ. 

66

ಈ ಕುರಿತಂತೆ ಟ್ವೀಟ್‌ ಮಾಡಿರುವ ಭಜ್ಜಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದೊಂದಿಗಿನ ನನ್ನ ಒಪ್ಪಂದ ಅಂತ್ಯವಾಗಿದೆ. ಸಿಎಸ್‌ಕೆ ತಂಡದೊಟ್ಟಿಗಿನ ಒಡನಾಟ ಒಂದು ಅದ್ಭುತ ಅನುಭವ. ಸಾಕಷ್ಟು ನೆನಪುಗಳು ಈ ತಂಡದೊಂದಿಗೆ ಇದೆ. 2 ವರ್ಷಗಳ ಕಾಲ ಜತೆಯಾಗಿದ್ದಕ್ಕೆ ಸಿಎಸ್‌ಕೆ ಆಡಳಿತ ಮಂಡಳಿ, ಸಿಬ್ಬಂದಿಗಳಿಗೆ ಹಾಗೂ ಆಭಿಮಾನಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories