ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋಲಲಿದೆ; ಟೀಕಾಕಾರರ ಬಾಯಿ ಮುಚ್ಚಿಸಿದ ಯಂಗಿಸ್ತಾನ್‌..!

First Published Jan 20, 2021, 2:23 PM IST

ಬೆಂಗಳೂರು: ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಕಾಂಗರೂ ನಾಡಿನಲ್ಲಿ ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ಎದುರು ವೈಟ್‌ವಾಷ್‌ ಆಗಲಿದೆ, ಹೀನಾಯ ಸೋಲು ಕಾಣಲಿದೆ ಎಂದೆಲ್ಲಾ ಭವಿಷ್ಯ ನುಡಿದಿದ್ದರು. ಆದರೆ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಬಳಿಕ ಫಿನಿಕ್ಸ್‌ನಂತೆ ಎದ್ದುಬರುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಯಾವೆಲ್ಲಾ ದಿಗ್ಗಜರು ಟೀಂ ಇಂಡಿಯಾ ಬಗ್ಗೆ ಏನೆಲ್ಲಾ ಹೇಳಿದ್ರು ಎನ್ನುವುದರ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ

ಡಿಸೆಂಬರ್‌ 19ರಂದು ಮೊದಲ ಟೆಸ್ಟ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿದ್ದ ಭಾರತ, ಸರಿಯಾಗಿ ಒಂದು ತಿಂಗಳ ಬಳಿಕ ಅದೇ ದಿನ(ಜನವರಿ 19) ಗಾಬಾ ಮೈದಾನದಲ್ಲಿ 328 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
undefined
ವಿರಾಟ್ ಕೊಹ್ಲಿ ಇದ್ದಾಗಿಯೂ ಟೀಂ ಇಂಡಿಯಾ ಈ ರೀತಿ ಸೋಲು ಕಂಡಿದೆ. ಇನ್ನು ವಿರಾಟ್ ತವರಿಗೆ ಮರಳಿದ ಬಳಿಕ ತಂಡ ಹೀನಾಯವಾಗಿ ಸೋಲು ಕಾಣಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು.
undefined
ಅಡಿಲೇಡ್‌ನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಮುಖಭಂಗ ಅನುಭವಿಸಿತ್ತು.
undefined
ಆದರೆ ಕೊನೆಯ 3 ಟೆಸ್ಟ್‌ ಪಂದ್ಯಗಳಲ್ಲಿ ಕೆಚ್ಚೆದೆಯ ಪ್ರದರ್ಶನ ತೋರಿದ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ.
undefined
ಮುಂದಿನ ಎರಡು ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇಲ್ಲದ ಭಾರತದ ಬ್ಯಾಟಿಂಗ್ ಲೈನ್‌ ಅಪ್‌ ಊಹಿಸಿಕೊಳ್ಳಲು ಸಾಧ್ಯವೇ? ಟೀಂ ಇಂಡಿಯಾ ಸದ್ಯ ದೊಡ್ಡ ಸಮಸ್ಯೆಯಲ್ಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದರು.
undefined
ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಇಲ್ಲದೇ ಇರುವುದರಿಂದ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ದ ವೈಟ್‌ವಾಷ್ ಸಾಧನೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಅಡಿಲೇಡ್ ಟೆಸ್ಟ್ ಹೀನಾಯ ಸೋಲಿನ ಆಘಾತದಿಂದ ತಂಡವನ್ನು ಮೇಲೆತ್ತುವವರು ಯಾರು ಕಾಣುತ್ತಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದ್ದರು.
undefined
ಅಡಿಲೇಡ್‌ ಟೆಸ್ಟ್‌ನಲ್ಲಿ ಮೂರೇ ದಿನದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಸೋಲುಣಿಸಿದೆ. ಭಾರತ ತಿರುಗೇಟು ನೀಡಲಿದೆ ಎಂದು ನನಗನಿಸುತ್ತಿಲ್ಲ. ಆಸ್ಟ್ರೇಲಿಯಾ ಈ ಸರಣಿಯನ್ನು 4-0 ಅಂತರದಲ್ಲಿ ಜಯಿಸಲಿದೆ ಎಂದು ಆಸೀಸ್‌ ಮಾಜಿ ನಾಯಕ ಮಾರ್ಕ್ ವಾ ಭವಿಷ್ಯ ನುಡಿದಿದ್ದರು.
undefined
ಈ ಮೊದಲೇ ಹೇಳಿದ್ದೆನಲ್ಲಾ, ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು 4-0 ಅಂತರದಲ್ಲಿ ಬಗ್ಗುಬಡಿಯಲಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ವೈಕೆಲ್ ವಾನ್ ಅಭಿಪ್ರಾಯ ಪಟ್ಟಿದ್ದರು.
undefined
ನನಗನಿಸಿದ್ದು, ಭಾರತ ಹೆಚ್ಚೆಂದರೆ ಅಡಿಲೇಡ್‌ನಲ್ಲಿ ಮಾತ್ರ ಗೆಲ್ಲಲು ಅವಕಾಶವಿತ್ತು. ಈ ಅವಕಾಶ ಕೈಚೆಲ್ಲಿದ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಲಿದೆ ಎಂದು ನನಗನಿಸುತ್ತಿಲ್ಲ ಎಂದು ಆಸೀಸ್‌ ಮಾಜಿ ವಿಕೆಟ್‌ ಕೀಪರ್‌ ಬ್ರಾಡ್ ಹಡ್ಡಿನ್ ಹೇಳಿದ್ದರು.
undefined
click me!