ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್‌ 5 ರಿಯಲ್‌ ಹೀರೋಗಳಿವರು!

Suvarna News   | Asianet News
Published : Jan 20, 2021, 11:39 AM IST

ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಯಂಗಿಸ್ತಾನ್‌ ಇತಿಹಾಸ ನಿರ್ಮಿಸಿದೆ. ಆಸ್ಪ್ರೇಲಿಯಾದ ಸವಾಲನ್ನು ಮೀರಿ ಐತಿಹಾಸಿಕ ಸರಣಿ ಗೆಲುವಿಗೆ ಶ್ರಮಿಸಿದ ಭಾರತದ ಯುವ ಆಟಗಾರರು ತಮ್ಮ ನಿಜ ಜೀವನದಲ್ಲೂ ಅನೇಕ ಕಷ್ಟಗಳನ್ನು ಮೆಟ್ಟಿನಿಂತಿದ್ದಾರೆ.   

PREV
110
ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್‌ 5 ರಿಯಲ್‌ ಹೀರೋಗಳಿವರು!

1. ಟಿ. ನಟರಾಜನ್‌: 

1. ಟಿ. ನಟರಾಜನ್‌: 

210

ಕಡುಬಡತನದಲ್ಲಿ ಬೆಳೆದ ನಟರಾಜನ್‌ ಹೊಸ ಶೂ ಖರೀದಿಸಬೇಕಿದ್ದರೆ 100 ಬಾರಿ ಯೋಚಿಸಬೇಕಿತ್ತು. ತಂದೆ, ತಾಯಿ ದಿನಗೂಲಿ ಮಾಡಿಕೊಂಡು ಮಗನ ಕ್ರಿಕೆಟ್‌ ಬದುಕಿಗೆ ನೀರೆರೆದರು. ಐಪಿಎಲ್‌ನಲ್ಲಿ ಮಿಂಚಿ, ಭಾರತ ತಂಡಕ್ಕೆ ಕಾಲಿಟ್ಟ ನಟರಾಜನ್‌ ಮೊದಲ ಪ್ರವಾಸದಲ್ಲೇ ಮಿಂಚಿದರು.

310

2. ಶಾರ್ದೂಲ್ ಠಾಕೂರ್‌:

2. ಶಾರ್ದೂಲ್ ಠಾಕೂರ್‌:

410

ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದ ಶಾರ್ದೂಲ್‌ ಠಾಕೂರ್‌ಗೆ ತೂಕ ಇಳಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಸ್ವತಃ ಸಚಿನ್‌ ತೆಂಡುಲ್ಕರ್‌ ಹೇಳಿದ್ದರು. ಪಾದಾರ್ಪಣಾ ಟೆಸ್ಟ್‌ನಲ್ಲೇ ಗಾಯಗೊಂಡು ಹೊರಬಿದ್ದಿದ್ದ ಶಾರ್ದೂಲ್‌ ಮತ್ತೆ ಟೆಸ್ಟ್‌ ಆಡಲು 2 ವರ್ಷ ಕಾಯಬೇಕಾಯಿತು.

510

3. ಮೊಹಮ್ಮದ್ ಸಿರಾಜ್‌: 

3. ಮೊಹಮ್ಮದ್ ಸಿರಾಜ್‌: 

610

ಹೈದರಾಬಾದ್‌ನ ಆಟೋ ಚಾಲಕನ ಪುತ್ರ ಮೊಹಮ್ಮದ್‌ ಸಿರಾಜ್‌, ಬಡತನವನ್ನು ಮೀರಿ ಬೆಳೆದ ಪ್ರತಿಭೆ. ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಅವರ ತಂದೆ ಮೃತರಾಗಿದ್ದರಿಂದ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹ ಆಗಲಿಲ್ಲ.

710

4. ವಾಷಿಂಗ್ಟನ್‌ ಸುಂದರ್‌:

4. ವಾಷಿಂಗ್ಟನ್‌ ಸುಂದರ್‌:

810

ಚೆನ್ನೈನಲ್ಲಿ ತಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದ ಶ್ರೀಮಂತ ವ್ಯಕ್ತಿ ಪಿ.ಡಿ.ವಾಷಿಂಗ್ಟನ್‌, ಆರ್ಥಿಕ ನೆರವು ನೀಡಿದ್ದರಿಂದ ಸುಂದರ್‌ ತಮ್ಮ ಮಗನನ್ನು ಕ್ರಿಕೆಟರ್‌ ಮಾಡಿದರು.  ನೆರವು ನೀಡಿದ ವ್ಯಕ್ತಿಯ ನೆನಪಿನಲ್ಲಿ ತಮ್ಮ ಪುತ್ರನಿಗೆ ವಾಷಿಂಗ್ಟನ್‌ ಸುಂದರ್‌ ಎಂದು ಹೆಸರಿಟ್ಟರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಭಾರತದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ ವಾಷಿಂಗ್ಟನ್‌.

910

5. ನವದೀಪ್ ಸೈನಿ:

5. ನವದೀಪ್ ಸೈನಿ:

1010

ನವ್‌ದೀಪ್‌ ಸೈನಿಯ ತಂದೆ ಹರ್ಯಾಣ ಸರ್ಕಾರಿ ಬಸ್‌ ಡ್ರೈವರ್‌. ತಮ್ಮ ಕ್ರಿಕೆಟ್‌ ಬದುಕಿಗೆ ಕುಟುಂಬ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದಾಗ ಸೈನಿ ಸ್ಥಳೀಯ ಟೆನಿಸ್‌ ಬಾಲ್‌ ಟೂರ್ನಿಗಳಲ್ಲಿ ಆಡಿ ಹಣ ಸಂಪಾದಿಸಿ, ಕ್ರಿಕೆಟ್‌ ಬದುಕು ಕಟ್ಟಿಕೊಂಡರು.

click me!

Recommended Stories