1 ದೇವದತ್ ಪಡಿಕ್ಕಲ್: ಆರ್‌ಸಿಬಿ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟ್ಸ್‌ಮನ್. ನಾಯಕ ವಿರಾಟ್ ಕೊಹ್ಲಿ ಜತೆಗೂಡಿ ಪವರ್ ಪ್ಲೇ ನಲ್ಲಿ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ.
Virat Kohli
2. ವಿರಾಟ್ ಕೊಹ್ಲಿ: ಆರ್‌ಸಿಬಿ ತಂಡದ ನಾಯಕ, ತಂಡದ ರನ್ ಮಷೀನ್. ಕಳೆದ ಕೆಲವು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದು, ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.
3. ಶ್ರೀಕರ್ ಭರತ್: ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಸಿಕ್ಕಿದ ಕೆಲವೇ ಅವಕಾಶವನ್ನು ಭರಪೂರವಾಗಿ ಬಳಸಿಕೊಳ್ಳುವಲ್ಲಿ ಆಂಧ್ರ ಮೂಲದ ಆಟಗಾರ ಯಶಸ್ವಿಯಾಗಿದ್ದು, ಅವಕಾಶ ಸಿಕ್ಕರೆ ಮತ್ತೆ ಮಿಂಚುವ ವಿಶ್ವಾಸದಲ್ಲಿದ್ದಾರೆ ಭರತ್
4. ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಪರ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಮೂರು ಪಂದ್ಯಗಳಲ್ಲೂ 50+ ರನ್ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಅಗತ್ಯವಿದ್ದಾಗ ಬೌಲಿಂಗ್‌ನಲ್ಲೂ ಮ್ಯಾಕ್ಸ್‌ವೆಲ್ ನೆರವಾಗಿದ್ದಾರೆ.
5. ಎಬಿ ಡಿವಿಲಿಯರ್ಸ್: ಆರ್‌ಸಿಬಿ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟ್ಸ್‌ಮನ್. ಯುಎಇ ಚರಣದ ಪಂದ್ಯದಲ್ಲಿ ಎಬಿಡಿಗೆ ಅಬ್ಬರಿಸಲು ಸರಿಯಾದ ಅವಕಾಶವಿನ್ನು ಸಿಕ್ಕಿಲ್ಲ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಎಬಿ ಡಿವಿಲಿಯರ್ಸ್‌ಗಿದೆ.
6. ಟಿಮ್ ಡೇವಿಡ್: ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಪದೇ ಪದೇ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ನಿರಾಸೆ ಅನುಭವಿಸುತ್ತಿದ್ದು, ಇಂದಿನ ಪಂದ್ಯದಲ್ಲಿ ಕ್ರಿಶ್ಚಿಯನ್‌ಗೆ ವಿಶ್ರಾಂತಿಯನ್ನು ನೀಡಿ ಟಿಮ್ ಡೇವಿಡ್‌ಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.
7. ಶಹಬಾಜ್ ಅಹಮ್ಮದ್: ಆರ್‌ಸಿಬಿ ತಂಡದ ಉಪಯುಕ್ತ ಬೌಲಿಂಗ್ ಆಲ್ರೌಂಡರ್. ಮಿಂಚಿನ ಸ್ಪಿನ್ ಬೌಲಿಂಗ್ ದಾಳಿಯ ಮೂಲಕ ವಿಕೆಟ್ ಕಬಳಿಸಬಲ್ಲ ಶಹಬಾಜ್, ಅಗತ್ಯವಿದ್ದಾಗ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಕ್ರಿಕೆಟರ್
8. ಜಾರ್ಜ್ ಗಾರ್ಟನ್: ಯುವ ವೇಗಿ ಜಾರ್ಜ್ ಗಾರ್ಟನ್ ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗುತ್ತಿದ್ದರೂ, ಉಪಯುಕ್ತ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಹೀಗಾಗಿ ಗಾರ್ಟನ್ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿದೆ.
Harshal Patel
9. ಹರ್ಷಲ್ ಪಟೇಲ್: ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್ ಸದ್ಯ ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದು, ವಿಕೆಟ್ ಕಬಳಿಸುವುದರ ಜತೆ ಜತೆಗೆ ಎದುರಾಳಿ ತಂಡದ ರನ್ ವೇಗಕ್ಕೂ ಕಡಿವಾಣ ಹಾಕುತ್ತಿರುವುದು ತಂಡದ ಪಾಲಿಗೆ ಪ್ಲಸ್ ಪಾಯಿಂಟ್
10. ಮೊಹಮ್ಮದ್ ಸಿರಾಜ್: ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಅಸ್ತ್ರ. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಸಾಕಷ್ಟು ಸುಧಾರಿತ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
11. ಯುಜುವೇಂದ್ರ ಚಹಲ್: ಯುಎಇ ಚರಣದ ಐಪಿಎಲ್‌ನಲ್ಲಿ ಲೆಗ್ ಸ್ಪಿನ್ನರ್ ಚಹಲ್ ಮತ್ತೆ ಹಳೆ ಖದರ್‌ಗೆ ಮರುಳಿದ್ದು, ಯಶಸ್ವಿಯಾಗಿ ಎದುರಾಳಿ ತಂಡದ ವಿಕೆಟ್ ಬೇಟೆಯಾಡುವ ಮೂಲಕ ಸಿಂಹ ಸ್ವಪ್ನರಾಗಿ ಕಾಡುತ್ತಿದ್ದಾರೆ.