1. ವಿರಾಟ್ ಕೊಹ್ಲಿ: ಕಳೆದೆರಡು ಪಂದ್ಯಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿರುವ ಆರ್‌ಸಿಬಿ ತಂಡದ ನಾಯಕ ಕೊಹ್ಲಿ, ಇದೀಗ ಹ್ಯಾಟ್ರಿಕ್ ಅರ್ಧಶತಕ ಬಾರಿಸಲು ಎದುರು ನೋಡುತ್ತಿದ್ದಾರೆ.
2. ದೇವದತ್ ಪಡಿಕ್ಕಲ್: ಕರ್ನಾಟಕ ಮೂಲದ ಯುವ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಯಾವುದೇ ಕ್ಷಣದಲ್ಲಿ ಬೇಕಾದರೂ ಕಮ್‌ಬ್ಯಾಕ್ ಮಾಡುವ ಕ್ಷಮತೆ ಪಡಿಕ್ಕಲ್‌ಗಿದೆ.
3. ಕೆ.ಎಸ್. ಭರತ್: ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಭರತ್ ಬಲಿಷ್ಠ ಮುಂಬೈ ಇಂಡಿಯನ್ಸ್ ಬೌಲಿಂಗ್ ಎದುರು ದಿಟ್ಟ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಭರತ್ ಇಂದಿನ ಪಂದ್ಯದಲ್ಲೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
4. ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್. ಮುಂಬೈ ಇಂಡಿಯನ್ಸ್ ಎದುರು ಆಕರ್ಷಕ ಅರ್ಧಶತಕ ಬಾರಿಸಿದ್ದಲ್ಲದೇ ಬೌಲಿಂಗ್‌ನಲ್ಲೂ ಸೈ ಎನಿಸಿಕೊಂಡಿರುವ ಮ್ಯಾಕ್ಸಿ ಮತ್ತೊಮ್ಮೆ ಮಿಂಚಿದರೆ ಆರ್‌ಸಿಬಿಗೆ ಗೆಲುವು ಕಟ್ಟಿಟ್ಟ ಬುತ್ತಿ.
5. ಎಬಿ ಡಿವಿಲಿಯರ್ಸ್: ಯುಎಇ ಚರಣದಲ್ಲಿ ಇದುವರೆಗೂ ಎಬಿಡಿ ಶೋ ನೋಡಲು ಸಿಕ್ಕಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಎಬಿ ಡಿವಿಲಿಯರ್ಸ್‌ಗಿದೆ.
6. ಟಿಮ್ ಡೇವಿಡ್: ಡೇನಿಯಲ್ ಕ್ರಿಶ್ಚಿಯನ್ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಇಲ್ಲವೇ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತಷ್ಟು ಭದ್ರಪಡಿಸಲು ಟಿಮ್ ಡೇವಿಡ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
7. ಶಾಬಾಜ್ ಅಹಮ್ಮದ್: ಆರ್‌ಸಿಬಿಯ ಮತ್ತೋರ್ವ ಆಲ್ರೌಂಡರ್, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತನ್ನದೇ ಆದ ಕಾಣಿಕೆ ನೀಡಬಲ್ಲ ಉಪಯುಕ್ತ ಆಟಗಾರ. ಕಳೆದ ಪಂದ್ಯದಲ್ಲಿ ಮಿಂಚಲು ಶಾಬಾಜ್‌ಗೆ ಸಾಧ್ಯವಾಗಿರಲಿಲ್ಲ.
8. ಹರ್ಷಲ್ ಪಟೇಲ್: ಮುಂಬೈ ಇಂಡಿಯನ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಪಂದ್ಯ ಆರ್‌ಸಿಬಿಯತ್ತ ವಾಲುವಂತೆ ಮಾಡಿದ್ದ ಹರ್ಷಲ್ ಪಟೇಲ್ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.
9. ಕೈಲ್ ಜೇಮಿಸನ್: ನ್ಯೂಜಿಲೆಂಡ್ ಮೂಲದ ವೇಗದ ಬೌಲರ್. ಯುಎಇ ಚರಣದಲ್ಲಿ ಅಷ್ಟೇನು ಪರಿಣಾಮಕಾರಿ ಪ್ರದರ್ಶನವನ್ನು ಜೇಮಿಸನ್ ನೀಡಿಲ್ಲ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳಲು ನೀಳಕಾಯದ ವೇಗಿ ಎದುರು ನೋಡುತ್ತಿದ್ದಾರೆ.
10. ಮೊಹಮ್ಮದ್ ಸಿರಾಜ್: ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಅಸ್ತ್ರ ಸಿರಾಜ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿ ಬೌಲಿಂಗ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದಷ್ಟೇ ಅಲ್ಲದೇ ರನ್‌ವೇಗಕ್ಕೂ ಕಡಿವಾಣ ಹಾಕುತ್ತಿರುವುದು ಆರ್‌ಸಿಬಿ ಪಾಲಿಗೆ ಒಳ್ಳೆಯ ಬೆಳವಣಿಗೆ
11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಸ್ಪಿನ್ ಬೌಲಿಂಗ್ ಅಸ್ತ್ರ. ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಿಕೊಡಬಲ್ಲ ಚಹಲ್, ಮುಂಬೈ ವಿರುದ್ದ ಚಾಣಾಕ್ಷ ಬೌಲಿಂಗ್ ಪ್ರದರ್ಶನ ತೋರಿ 3 ವಿಕೆಟ್ ಕಬಳಿಸಿದ್ದರು.