IPL 2021: ಈ ಮೂವರು ಆಟಗಾರರು ಬೆನ್ ಸ್ಟೋಕ್ಸ್‌ ಸ್ಥಾನ ತುಂಬಬಲ್ಲರು..!

Suvarna News   | Asianet News
Published : Apr 15, 2021, 06:31 PM IST

ನವದೆಹಲಿ: ಗಾಯದ ಮೇಲೆ ಬರೆ ಎನ್ನುವಂತೆ ಮೊದಲ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಶಾಕ್‌ ಎದುರಾಗಿದ್ದು ಸ್ಟಾರ್‌ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಗಾಯಗೊಂಡು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಸ್ಟೋಕ್ಸ್‌ ಸ್ಥಾನ ತುಂಬಬಲ್ಲ ಆಟಗಾರರು ಯಾರು ಎನ್ನುವುದು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಬೆನ್‌ ಸ್ಟೋಕ್ಸ್‌ ಬದಲಿಗೆ ರಾಜಸ್ಥಾನ ರಾಯಲ್ಸ್‌ ತಂಡ ಕೂಡಿಕೊಳ್ಳಬಲ್ಲ ಸಂಭಾವ್ಯ ಮೂರು ಆಟಗಾರರ ವಿವರ ಇಲ್ಲಿದೆ ನೋಡಿ.  

PREV
19
IPL 2021: ಈ ಮೂವರು ಆಟಗಾರರು ಬೆನ್ ಸ್ಟೋಕ್ಸ್‌ ಸ್ಥಾನ ತುಂಬಬಲ್ಲರು..!

1. ಡೆವೊನ್‌ ಕಾನ್ವೆ: ನ್ಯೂಜಿಲೆಂಡ್‌

1. ಡೆವೊನ್‌ ಕಾನ್ವೆ: ನ್ಯೂಜಿಲೆಂಡ್‌

29

ನ್ಯೂಜಿಲೆಂಡ್‌ನ ಸ್ಪೋಟಕ ಬ್ಯಾಟ್ಸ್‌ಮನ್‌, ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು.

39

ನ್ಯೂಜಿಲೆಂಡ್ ಪರ ಕಾನ್ವೆ ಇದುವರೆಗೂ 14 ಟಿ20 ಪಂದ್ಯಗಳನ್ನಾಡಿದ್ದು, 59.12ರ ಸರಾಸರಿಯಲ್ಲಿ 473 ರನ್‌ ರನ್‌ ಬಾರಿ ಮಿಂಚಿದ್ದಾರೆ. ಹೀಗಾಗಿ ರಾಜಸ್ಥಾನ ರಾಯಲ್ಸ್‌ ಕಿವೀಸ್‌ ಬ್ಯಾಟ್ಸ್‌ಮನ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.

49

2. ಮಾರ್ಟಿನ್‌ ಗಪ್ಟಿಲ್‌: ನ್ಯೂಜಿಲೆಂಡ್‌

2. ಮಾರ್ಟಿನ್‌ ಗಪ್ಟಿಲ್‌: ನ್ಯೂಜಿಲೆಂಡ್‌

59

ಕಿವೀಸ್‌ ಅನುಭವಿ ಬ್ಯಾಟ್ಸ್‌ಮನ್‌. ವಿಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಗಪ್ಟಿಲ್‌, ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

69

ನ್ಯೂಜಿಲೆಂಡ್‌ ಪರ 47 ಟೆಸ್ಟ್‌, 186 ಏಕದಿನ ಹಾಗೂ 102 ಟಿ20 ಪಂದ್ಯಗಳನ್ನಾಡಿ ಅಪಾರ ಅನುಭವ ಹೊಂದಿರುವ ಗಪ್ಟಿಲ್‌, ರಾಯಲ್ಸ್‌ ಪಾಲಿಗೆ ಉತ್ತಮ ಆಯ್ಕೆಯಾಗಬಲ್ಲರು.

79

3. ಅಲೆಕ್ಸ್‌ ಹೇಲ್ಸ್‌: ಇಂಗ್ಲೆಂಡ್‌

3. ಅಲೆಕ್ಸ್‌ ಹೇಲ್ಸ್‌: ಇಂಗ್ಲೆಂಡ್‌

89

ಇಂಗ್ಲೆಂಡ್‌ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌. ಬಿಗ್‌ ಬ್ಯಾಶ್ ಟೂರ್ನಿಯಲ್ಲಿ ಹೇಲ್ಸ್‌ ಕೇವಲ 47 ಪಂದ್ಯಗಳಲ್ಲಿ 152.12ರ ಸ್ಟ್ರೈಕ್‌ರೇಟ್‌ನಲ್ಲಿ 1474 ರನ್‌ ಚಚ್ಚಿದ್ದಾರೆ.

99

ಇನ್ನು ಇಂಗ್ಲೆಂಡ್ ಪರ ಹೇಲ್ಸ್‌ 60 ಟಿ20 ಪಂದ್ಯಗಳನ್ನಾಡಿ ಒಂದು ಶತಕ ಸಹಿತ 1644 ರನ್‌ ಬಾರಿಸಿದ್ದಾರೆ. ಸ್ಟೋಕ್ಸ್‌ ಬದಲಿಗೆ ಹೇಲ್ಸ್‌ಗೆ ರಾಜಸ್ಥಾನ ಮಣೆ ಹಾಕಿದರೂ ಅಚ್ಚರಿಪಡುವಂತಿಲ್ಲ.

click me!

Recommended Stories