ಐಪಿಎಲ್ 2021 ಆರಂಭಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಬಿಸಿಸಿಐ ಈಗಾಗಲೇ ಕ್ರೀಡಾಂಗಣ, ದಿನಾಂಕ ಕುರಿತು ಹಲವು ಸುತ್ತಿನ ಮಾತುಕತೆ, ಸಭೆ ನಡೆಸಿದೆ. ಇದೀಗ 2021ರ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಾಂಕ ನಿಗದಿ ಪಡಿಸಿದೆ.
ಎಪ್ರಿಲ್ 9 ರಿಂದ ಮೇ.30ರ ವರೆಗೆ ಐಪಿಎಲ್ ಆಯೋಜಿಸಲು ನಿರ್ಧರಿಸಲಾಗಿದೆ. ಐಪಿಎಲ್ ಆರಂಭ ದಿನಾಂಕ ಕುರಿತು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಮುಂದಿನ ವಾರ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಸಭೆ ಸೇರಲಿದೆ. ಈ ವೇಳೆ ಅಂತಿಮ ನಿರ್ಧಾರ ಹೊರಬೀಳಲಿದೆ. ಇದೇ ವೇಳೆ ಕ್ರೀಡಾಂಗಣ ಕುರಿತ ವಿವರವೂ ಬಹಿರಂಗವಾಗಲಿದೆ.
ಎಪ್ರಿಲ್ 9ಕ್ಕೆ ಐಪಿಎಲ್ ಆರಂಭಿಸಲು ನಿರ್ಧರಿಸಲಾಗಿದೆ. ಮೇ.30 ರಂದು ಫೈನಲ್ ಪಂದ್ಯ ನಡೆಯಲಿದೆ. 4 ರಿಂದ 5 ನಗರಗಲ್ಲಿ ಐಪಿಎಲ್ ಆಯೋಜಿಸುವ ಪ್ಲಾನ್ ಮಾಡಲಾಗಿದೆ ಎಂದು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಸದಸ್ಯರು ಹೇಳಿ್ದ್ದಾರೆ.
52 ದಿನದ ಟೂರ್ನಿ ಇದಾಗಿದ್ದು, ಒಟ್ಟು 60 ಪಂದ್ಯಗಳು ನಡೆಯಲಿದೆ. ವೀಕೆಂಡ್ ದಿನಗಳಲ್ಲಿ ಡಬಲ್ ಹೆಡರ್ ಪಂದ್ಯ ಆಯೋಜಿಸಲಾಗುತ್ತದೆ ಗರ್ವನಿಂಗ್ ಕೌನ್ಸಿಲ್ ಸದಸ್ಯರು ಹೇಳಿದ್ದಾರೆ.
ಕೊರೋನಾ ವೈರಸ್ ಮತ್ತೆ ಹೆಚ್ಚಾಗುತ್ತಿರುವ ಕಾರಣ ಕೆಲ ನಗರಗಳಲ್ಲಿ ಐಪಿಎಲ್ ಆಯೋಜನೆ ಕಷ್ಟವಾಗಲಿದೆ. ಇದರಲ್ಲಿ ಮುಂಬೈ ಇದೀಗ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ.
ಕೊರೋನಾ ವೈರಸ್ ಕಾರಣ 2020ರ ಐಪಿಎಲ್ ಟೂರ್ನಿ ದುಬೈನಲ್ಲಿ ಆಯೋಜಿಸಲಾಗಿತ್ತು. ಆಟಗಾರರಿಗೆ ಬಯೋಬಬಲ್ ಸರ್ಕಲ್ ನಿರ್ಮಿಸಲಾಗಿತ್ತು. ಕೊರೋನಾ ನಡುವೆ ಬಿಸಿಸಿಐ ಯಶಸ್ವಿಯಾಗಿ ಟೂರ್ನಿ ಆಯೋಜಿಸಿತ್ತು.
ದುಬೈನಲ್ಲಿ ನಡೆದ 2020ರ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ 5ನೇ ಬಾರಿಗ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.