ಶೂನ್ಯ ಸಂಪಾದನೆಯಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್‌ ಕೊಹ್ಲಿ..!

First Published Mar 5, 2021, 3:46 PM IST

ಅಹಮದಾಬಾದ್‌: ಟೀಂ ಇಂಡಿಯಾ ನಾಯಕ ರನ್‌ ಗಳಿಕೆ ವಿಚಾರದಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಬ್ರೇಕ್‌ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಶೂನ್ಯ ಸುತ್ತುವ ವಿಚಾರದಲ್ಲಿ ಬೇಡದ ದಾಖಲೆಗೆ ಭಾಜನರಾಗಿದ್ದಾರೆ.
ಹೌದು, ಇಂಗ್ಲೆಂಡ್‌ ವಿರುದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡುವ ವಿಚಾರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ.
 

4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್‌ ಖಾತೆ ತೆರೆಯುವ ಮುನ್ನವೇ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ಬೆನ್‌ ಫೋಕ್ಸ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದ್ದಾರೆ.
undefined
ಕೇವಲ 8 ಎಸೆತಗಳನ್ನಷ್ಟೇ ಎದುರಿಸಿದ ಕೊಹ್ಲಿ ಅನಿರೀಕ್ಷಿತವಾಗಿ ಪುಟಿದೆದ್ದ ಚೆಂಡನ್ನು ಗ್ರಹಿಸದೇ ವಿಕೆಟ್‌ ಕೈಚೆಲ್ಲಿ ನಿರಾಸೆ ಅನುಭವಿಸಿದ್ದಾರೆ.
undefined
ಇದರೊಂದಿಗೆ 2014ರ ಬಳಿಕ ಎರಡನೇ ಬಾರಿಗೆ ಸರಣಿಯೊಂದರಲ್ಲಿ 2 ಸಲ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ವೈಫಲ್ಯ ಅನುಭವಿಸಿದ್ದಾರೆ.
undefined
4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೋಯಿನ್‌ ಅಲಿ ಎಸೆತದಲ್ಲಿ ಕ್ಲೀನ್‌ ಬೌಲ್ಡ್ ಆಗುವ ಮೂಲಕ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ದರು.
undefined
ಅಹಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಾಯಕನಾಗಿ 8 ಬಾರಿ ಶೂನ್ಯ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.
undefined
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿಹೆಚ್ಚು ಶೂನ್ಯ ಸಂಪಾದನೆ ಮಾಡಿದ ಭಾರತೀಯ ಕ್ರಿಕೆಟಿಗ ಎನ್ನುವ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿದೆ.
undefined
ಸೌರವ್‌ ಗಂಗೂಲಿ ಬರೋಬ್ಬರಿ 13 ಬಾರಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಭಾರತ ಪರ ಅತಿಹೆಚ್ಚು ಬಾರಿ ಖಾತೆ ತೆರೆಯದೇ ವಿಕೆಟ್‌ ಒಪ್ಪಿಸಿದ ನಾಯಕ ಎನಿಸಿಕೊಂಡಿದ್ದಾರೆ.
undefined
ಇನ್ನು ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಶೂನ್ಯ ಸಂಪಾದಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಜತೆ ವಿರಾಟ್ ಕೊಹ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
undefined
ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್‌ ಬುಮ್ರಾ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 4 ಬಾರಿ ಸೊನ್ನೆ ಸುತ್ತಿ ಪೆವಿಲಿಯನ್‌ ಸೇರಿದ್ದಾರೆ.
undefined
click me!