ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಅಪರೂಪದ ದಾಖಲೆ ಬರೆದ ಜೇಮ್ಸ್‌ ಆ್ಯಂಡರ್‌ಸನ್‌..!

First Published Mar 5, 2021, 2:16 PM IST

ಅಹಮದಾಬಾದ್‌: ಸ್ವಿಂಗ್ ಕಿಂಗ್ ಎಂದೇ ಪ್ರಸಿದ್ದಿಯಾಗಿರುವ ಜೇಮ್ಸ್‌ ಆ್ಯಂಡರ್‌ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ದದ 4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್‌ 900 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್‌ ಕಬಳಿಸಿದ ಮೂರನೇ ವೇಗಿ ಹಾಗೂ ಒಟ್ಟಾರೆ ಅರನೇ ಬೌಲರ್‌ ಎನ್ನುವ ಪ್ರತಿಷ್ಠಿತ ಗೌರವಕ್ಕೆ ಜೇಮ್ಸ್‌ ಆ್ಯಂಡರ್‌ಸನ್‌ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧಕರ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ
 

ಗರಿಷ್ಠ ವಿಕೆಟ್‌ ಪಡೆದ ಹಾಲಿ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಜೇಮ್ಸ್‌ ಆ್ಯಂಡರ್‌ಸನ್‌ ಭಾರತ ವಿರುದ್ದದ 4ನೇ ಟೆಸ್ಟ್‌ ಪಂದ್ಯದಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ.
undefined
ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ವಿಕೆಟ್‌ ಕಬಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್‌ ಕಬಳಿಸಿದ ಮೂರನೇ ವೇಗಿ ಎನ್ನುವ ಗೌರವಕ್ಕೆ ಆ್ಯಂಡರ್‌ಸನ್‌ ಭಾಜನರಾಗಿದ್ದಾರೆ.
undefined
ಇದರೊಂದಿಗೆ 900 ವಿಕೆಟ್‌ ಕಬಳಿಸಿದ ಇಂಗ್ಲೆಂಡ್‌ನ ಮೊದಲ ಬೌಲರ್‌ ಎನ್ನುವ ಗೌರವವೂ ಆ್ಯಂಡರ್‌ಸನ್‌ ಪಾಲಾಗಿದೆ. ಇನ್ನು ಈ ಪಟ್ಟಿಯಲ್ಲಿ ಸದ್ಯ ಹಾಲಿ ಆಟಗಾರ ಎನಿಸಿಕೊಂಡಿರುವ ಸ್ಟುವರ್ಟ್ ಬ್ರಾಡ್‌ 760 ವಿಕೆಟ್‌ ಕಬಳಿಸಿದ್ದಾರೆ.
undefined
900ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಅಸೀಸ್‌ ದಿಗ್ಗಜ ಗ್ಲೆನ್‌ ಮೆಗ್ರಾತ್‌(949 ವಿಕೆಟ್) ಹಾಗೂ ಪಾಕ್‌ ಮಾರಕ ವೇಗಿ ವಾಸೀಂ ಅಕ್ರಂ(916 ವಿಕೆಟ್) ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ.
undefined
ಇನ್ನು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ದಾಖಲೆ ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್‌ ಹೆಸರಿನಲ್ಲಿದೆ.
undefined
ಮುರುಳೀಧರನ್‌ 1347 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಶೇನ್‌ ವಾರ್ನ್‌(1001 ವಿಕೆಟ್) ಹಾಗೂ ಕನ್ನಡಿಗ ಅನಿಲ್‌ ಕುಂಬ್ಳೆ 956 ವಿಕೆಟ್‌ ಗಳೊಂದಿಗೆ ಮೊದಲ ಮೂರು ಸ್ಥಾನ ಹಂಚಿಕೊಂಡಿದ್ದಾರೆ.
undefined
click me!