ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಡುತ್ತದೆ ಎನ್ನುವಂತಹ ಹೆಡ್‌ಲೈನ್ ನೋಡೋದೇ ಕಷ್ಟ ಅಂತ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಐಪಿಎಲ್ 2025 ರ ಆಟಗಾರರ ಪಟ್ಟಿ ಬಿಡುಗಡೆಗೆ ದಿನಾಂಕ ಹತ್ತಿರವಾಗ್ತಿದ್ದಂತೆ, ಪ್ರತಿ ತಂಡಗಳು ಚರ್ಚೆಯಲ್ಲಿ ಬ್ಯುಸಿಯಾಗಿವೆ. ಆದ್ರೆ, ಐಪಿಎಲ್ 2025 ಅಂದ್ರೆ ಎಲ್ಲರ ಬಾಯಲ್ಲೂ ಇರೋ ಹೆಸರು ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ. ಯಾಕಂದ್ರೆ ಇಬ್ಬರೂ ತಮ್ಮ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಧೋನಿ ಸ್ವಂತ ಇಚ್ಛೆಯಿಂದ ಸಿಎಸ್‌ಕೆ ನಾಯಕತ್ವ ಬಿಟ್ಟಿದ್ದಾರೆ. ಅವರ ಜಾಗಕ್ಕೆ ಋತುರಾಜ್ ಗಾಯಕ್‌ವಾಡ್ ಬಂದಿದ್ದಾರೆ. ಆದ್ರೆ, ಮುಂಬೈ ಇಂಡಿಯನ್ಸ್‌ನಲ್ಲಿ ಪರಿಸ್ಥಿತಿ ಹಾಗಿಲ್ಲ. ರೋಹಿತ್ ಶರ್ಮಾ 10 ವರ್ಷಗಳ ಕಾಲ ಮುಂಬೈ ಪರ ಆಡಿ, ಯಾವ ನಾಯಕನೂ ಮಾಡದ ಸಾಧನೆ ಮಾಡಿ ತೋರಿಸಿದ್ದಾರೆ.