18ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶೆಫಾಲಿ ವರ್ಮಾ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published Jan 28, 2022, 4:57 PM IST

ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ ಶಫಾಲಿ ವರ್ಮಾ (Shafali Verma) ಶುಕ್ರವಾರ ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಬಿರುಸಿನ ಬ್ಯಾಟಿಂಗ್‌ಗಾಗಿ ಶೆಫಾಲಿ ವರ್ಮಾ ಅವರನ್ನು 'ಲೇಡಿ ಸೆಹ್ವಾಗ್' ಎಂದೂ ಕರೆಯುತ್ತಾರೆ.  ಶೆಫಾಲಿಯ ಜನ್ಮದಿನದ ಸಂದರ್ಭದಲ್ಲಿ  ಅವಳಿಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳು  ಮತ್ತು  ಅವರ ದಾಖಲೆಗಳ ಮಾಹಿತಿ ಇಲ್ಲಿದೆ

ಶಫಾಲಿ ವರ್ಮಾ 28 ಜನವರಿ 2004 ರಂದು ಹರಿಯಾಣದ ರೋಹ್ಟಕ್‌ನಲ್ಲಿ ಜನಿಸಿದರು. ಶೆಫಾಲಿ 2019 ರಲ್ಲಿ ಕಿರಿಯ (ಕೇವಲ 15 ವರ್ಷ) ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ತಮ್ಮ ಬಿರುಸಿನ ಬ್ಯಾಟಿಂಗ್‌ಗಾಗಿ ಶಫಾಲಿ ವರ್ಮಾ ಅವರನ್ನು 'ಲೇಡಿ ಸೆಹ್ವಾಗ್' ಎಂದೂ ಕರೆಯುತ್ತಾರೆ. ಮೈದಾನದಲ್ಲಿ ಸೆಹ್ವಾಗ್ ಅವರಂತೆ ಲಾಂಗ್‌ ಸಿಕ್ಸರ್‌ಗಳನ್ನು ಹೊಡೆಯಲು ಇಷ್ಟಪಡುತ್ತಾರೆ ಶಫಾಲಿ ವರ್ಮಾ.

ಶಫಾಲಿ ವರ್ಮಾ ಅವರು ತಮ್ಮ 9 ನೇ ವಯಸ್ಸಿನಲ್ಲಿ (ನವೆಂಬರ್ 2013 ರಲ್ಲಿ) ಸಚಿನ್ ತೆಂಡೂಲ್ಕರ್ ಅವರ ಕೊನೆಯ ರಣಜಿ ಟ್ರೋಫಿ ಪಂದ್ಯವನ್ನು ದೆಹಲಿಯ ಬಳಿಯ ರೋಹ್ಟಕ್ ಕ್ರೀಡಾಂಗಣದಲ್ಲಿ ತಮ್ಮ ತಂದೆಯೊಂದಿಗೆ ವೀಕ್ಷಿಸಿದರು. ಶೆಫಾಲಿ ಪ್ರಕಾರ, ಸಚಿನ್ ಮುಂಬೈಯನ್ನು ಗೆದ್ದುದನ್ನು ನೋಡಿ, ಅವರು ಕ್ರಿಕೆಟ್‌ನಲ್ಲಿ ಮುಂದುವರಿಯಲು ಸ್ಫೂರ್ತಿ ಪಡೆದರು.

ಶೆಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 49 ಎಸೆತಗಳಲ್ಲಿ 73 ರನ್ ಗಳಿಸಿದರು.

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 30 ವರ್ಷಗಳ ಹಳೆಯ ದಾಖಲೆಯನ್ನು ಶಫಾಲಿ ವರ್ಮಾ ಮುರಿದಿದ್ದಾರೆ. ಶೆಫಾಲಿ 15 ವರ್ಷ, 285 ದಿನಗಳ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದರು. ಸಚಿನ್ ತಮ್ಮ 16 ವರ್ಷ, 214 ದಿನಗಳ ವಯಸ್ಸಿನಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿದರು.

ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಮಹಿಳಾ ಆಟಗಾರ್ತಿ. ಶೆಫಾಲಿ ವರ್ಮಾ ವಿಶ್ವ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿಯಾಗಿದ್ದಾರೆ. ಅವರು ಬ್ರಿಸ್ಟಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 159 ರನ್ (1 ನೇ ಇನ್ನಿಂಗ್ಸ್ - 96 ರನ್ ಮತ್ತು 2 ನೇ ಇನ್ನಿಂಗ್ಸ್ - 63 ರನ್) ಗಳಿಸಿದರು.

24 सितंबर 2019 को साउथ अफ्रीका के खिलाफ भारत के लिए डेब्यू करने वाली शेफाली सबसे कम उम्र की महिला है। उन्होंने कम उम्र में डेब्यू करके मास्टर-ब्लास्टर सचिन का रिकॉर्ड भी तोड़ दिया है।

ಚೊಚ್ಚಲ ಪಂದ್ಯದಲ್ಲಿ 90 ಪ್ಲಸ್ ರನ್‌ ಗಳಿಸಿದ 8ನೇ ಮಹಿಳಾ ಕ್ರಿಕೆಟಿಗ. ಶೆಫಾಲಿ ವರ್ಮಾ ತನ್ನ ಚೊಚ್ಚಲ ಪಂದ್ಯದಲ್ಲೇ 90 ಪ್ಲಸ್ ಗಳಿಸಿದ ವಿಶ್ವ ಕ್ರಿಕೆಟ್‌ನಲ್ಲಿ 8 ನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಅವರು ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 96 ರನ್ ಗಳಿಸಿದರು. 

शेफाली के पिता बताते हैं कि 'कोई भी मेरी बेटी को एकेडमी में एडमिशन नहीं देना चाहता था, क्योंकि रोहतक में लड़कियों के लिए एक भी एकेडमी नहीं थी। मैंने उनसे भीख मांगी कि उसे एडमिशन दे दें, लेकिन किसी ने नहीं सुनी। तब मैंने अपनी बेटी के बाल कटवा कर उसका एक लड़के की तरह एडमिशन कराया।'

ಶಫಾಲಿ ವರ್ಮಾ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 60.50 ಸರಾಸರಿಯಲ್ಲಿ 242 ರನ್ ಗಳಿಸಿದ್ದಾರೆ ಮತ್ತು 62.05 ಸ್ಟ್ರೈಕ್ ರೇಟ್ ಮಾಡಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 96 ಆಗಿತ್ತು. ಅವರು ಒಟ್ಟು ನಾಲ್ಕು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 3 ರಲ್ಲಿ ಐವತ್ತು ಗಳಿಸಿದ್ದಾರೆ.

click me!