ದಿನೇಶ್‌ ಕಾರ್ತಿಕ್‌ ರೀತಿ, ಮತ್ತೆ ಸೆಕೆಂಡ್‌ ಚಾನ್ಸ್‌ಗೋಸ್ಕರ ಕಾಯ್ತಿರೋ ಭಾರತೀಯ ಕ್ರಿಕೆಟರ್ಸ್‌ ಇವರು!

Published : Sep 03, 2025, 04:02 PM IST

ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್‌ ಪತ್ನಿಯೇ ಅವರ ಟೀಂಮೇಟ್‌ ಮುರಳಿ ವಿಜಯ್‌ ಜೊತೆ ಲವ್‌ನಲ್ಲಿ ಬಿದ್ದು ಮೋಸ ಮಾಡಿದರು ಎನ್ನಲಾಗಿದೆ. ಆ ಬಳಿಕ ಕರಿಯರ್‌ನಲ್ಲಿಯೂ ಹಿನ್ನಡೆ ಪಡೆದರು. ಆಮೇಲೆ ದೀಪಿಕಾ ಪಲ್ಲಿಕಲ್‌ರನ್ನು ಮದುವೆಯಾದರು. ಈಗ ಅವಳಿ ಮಕ್ಕಳಿಗೆ ತಂದೆಯಾಗಿ, ಹೊಸ ಮನೆ ಖರೀದಿಸಿದರು. 

PREV
16
ಸಾಥ್‌ ಕೊಟ್ಟ ದಿನೇಶ್‌ ಕಾರ್ತಿಕ್‌ ಎರಡನೇ ಪತ್ನಿ ದೀಪಿಕಾ!

ದಿನೇಶ್‌ ಕಾರ್ತಿಕ್‌ ಅವರಿಗೆ ಮೊದಲ ಪತ್ನಿ ಇನ್ನೋರ್ವ ವ್ಯಕ್ತಿ ಜೊತೆ ಲವ್‌ನಲ್ಲಿ ಬಿದ್ದು ಡಿವೋರ್ಸ್‌ ನೀಡಿದರು. ಆದರೆ ಎರಡನೇ ಪತ್ನಿ ದೀಪಿಕಾ ಮಾತ್ರ ದಿನೇಶ್‌ರ ಕರಿಯರ್‌ಗೆ ಸಾಥ್‌ ನೀಡಿದರು, ಇಬ್ಬರು ಕರಿಯರ್‌ನಲ್ಲಿ ಯಶಸ್ಸು ಪಡೆದರು. ಈಗ ಹೊಸ ಮನೆ ಖರೀದಿಸಿ, ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ.

26
ರವಿ ಶಾಸ್ತ್ರೀ

1990 ರಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ, ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರು ರಿತು ಸಿಂಗ್‌ ಜೊತೆ ಮದುವೆಯಾಗಿ, 2012 ರಲ್ಲಿ ಡಿವೋರ್ಸ್‌ ಪಡೆದಿದ್ದಾರೆ. ಈ ಮೂಲಕ 22 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಇವರಿಗೆ 2008 ರಲ್ಲಿ ಅಲೇಖಾ ಎಂಬ ಮಗಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ರಿವೀಲ್‌ ಆಗಿಲ್ಲವಾದರೂ ಕೂಡ, ಇದು ಇವರ ಜೀವನದ ಮಹತ್ವದ ತಿರುವು ಎನ್ನಲಾಗಿದೆ.

36
ಮೊಹಮ್ಮದ್ ಅಜಹರುದ್ದೀನ್

1987ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಮೊಹಮ್ಮದ್ ಅಜಹರುದ್ದೀನ್, ನೌರೀನ್‌ರನ್ನು ಮದುವೆಯಾಗಿದ್ದಾರೆ. ಇವರಿಗೆ ಮೊಹಮ್ಮದ್ ಅಸಾದುದ್ದೀನ್, ಮೊಹಮ್ಮದ್ ಅಯಾಜುದ್ದೀನ್ ಎಂಬ ಮಕ್ಕಳಿದ್ದಾರೆ. 1996 ರಲ್ಲಿ ಇವರಿಬ್ಬರು ಡಿವೋರ್ಸ್‌ ಪಡೆದಿದ್ದಾರೆ. ಅಜಹರುದ್ದೀನ್ ಅವರು ಆಮೇಲೆ ಬಾಲಿವುಡ್ ನಟಿ ಸಂಗೀತಾ ಬಿಜಲಾನಿಯವರನ್ನು ಮದುವೆಯಾದರು. ಈ ಮದುವೆಯೂ ಕೂಡ ಬಾಳಿಕೆ ಬರಲಿಲ್ಲ. 2010 ರಲ್ಲಿ ಮೊಹಮ್ಮದ್‌ಗೆ ಸಾಕಷ್ಟು ಮಹಿಳೆಯರ ಜೊತೆ ಸಂಬಂಧ ಇರೋ ವಿಷಯ ಕೂಡ ಗುಲ್ಲಾಗಿತ್ತು.

46
ಶಿಖರ್ ಧವನ್

ಶಿಖರ್ ಧವನ್‌ ಅವರು ಕಿಕ್‌ಬಾಕ್ಸರ್ ಐಶಾ ಮುಖರ್ಜಿ ಜೊತೆ 2012 ರಲ್ಲಿ ಮದುವೆಯಾದರು. ಅದಕ್ಕೂ ಮುನ್ನ ಐಶಾಗೆ ಇಬ್ಬರು ಮಕ್ಕಳಿದ್ದಾರೆ. ಆಮೇಲೆ ಶಿಖರ್‌ಗೆ ಗಂಡು ಮಗ ಜನಿಸಿದ್ದಾನೆ. 2021 ರಲ್ಲಿ ಈ ಜೋಡಿ ಬೇರೆ ಆಗಲು ನಿರ್ಧಾರ ಮಾಡಿತ್ತು. 2023 ರಲ್ಲಿ ದೆಹಲಿಯ ನ್ಯಾಯಾಲಯವು ಐಶಾರಿಂದ ಮಾನಸಿಕ ಕ್ರೌರ್ಯ ಆಗಿದೆ ಎಂದು ಉಲ್ಲೇಖಿಸಿ ಧವನ್‌ಗೆ ಡಿವೋರ್ಸ್‌ ಕೊಟ್ಟಿತು. ಇವರಿಬ್ಬರ ನಡುವೆ ಸಾಂಸ್ಕೃತಿಕ ವ್ಯತ್ಯಾಸ, ನಿರಂತರ ವೈಯಕ್ತಿಕ ಭಿನ್ನಾಭಿಪ್ರಾಯಗಳು ಬಂದಿತ್ತು ಎನ್ನಲಾಗಿದೆ. ಶಿಖರ್‌ ಧವನ್‌ಗೂ ಗರ್ಲ್‌ಫ್ರೆಂಡ್‌ ಇದ್ದು, ಇವರಿಬ್ಬರು ಇನ್ನೂ ಮದುವೆ ಆಗಿಲ್ಲ, ಮದುವೆ ಬಗ್ಗೆಯೂ ಹೇಳಿಲ್ಲ. 

56
ಹಾರ್ದಿಕ್ ಪಾಂಡ್ಯ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2020ಲ್ಲಿ ನತಾಶಾ ಸ್ಟಾಂಕೋವಿಕ್ ಜೊತೆ ಉಂಗುರ ಬದಲಾಯಿಸಿಕೊಂಡರು. ಆ ಬಳಿಕ ಅದೇ ವರ್ಷ ಗಂಡು ಮಗುವನ್ನು ಪಡೆದರು. ಅದಾದ ಬಳಿಕ 2023 ರ ಫೆಬ್ರವರಿ 14 ರಂದು ರಾಜಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾದರು. ಈ ಮದುವೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಭಾಗಿಯಾಗಿದ್ದಾರೆ. 2024ರಲ್ಲಿ ಈ ಜೋಡಿ ಬೇರೆ ಆಯಿತು. ಹಾರ್ದಿಕ್‌ ಪಾಂಡ್ಯ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಮದುವೆ ಬಳಿಕವೇ ಈ ವಿಷಯ ಪಕ್ಕಾ ಆಗೋದು. 

66
ಯುಜವೇಂದ್ರ ಚಾಹಲ್

ಯುಜವೇಂದ್ರ ಚಾಹಲ್, ಅವರು 2020 ರಲ್ಲಿ ಕೊರಿಯೊಗ್ರಾಫರ್ ಧನಶ್ರೀ ವರ್ಮರನ್ನು ಪ್ರೀತಿಸಿ ಮದುವೆಯಾದರು. ಆಮೇಲೆ 2025ರಲ್ಲಿ ಈ ಜೋಡಿ ಡಿವೋರ್ಸ್‌ ಪಡೆದಿತು. ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿ ಈಗ ಸಂದರ್ದಶನಗಳಲ್ಲಿ ಪರಸ್ಪರ ಆರೋಪ ಮಾಡಿಕೊಳ್ತಿದ್ದು, ಇನ್ನೊಂದು ಲವ್‌ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದೆ. ಇವರ ಲೈಫ್‌ನಲ್ಲಿಯೂ ಲೇಡಿ ಲವ್‌ ಇದ್ದಾರೆ ಎನ್ನಲಾಗ್ತಿದೆ. ಆದರೆ ಮದುವೆಯಾದನಂತರವೇ ಪಕ್ಕಾ ಆಗೋದು. 

Read more Photos on
click me!

Recommended Stories