ಇಂಟ್ರೆಸ್ಟಿಂಗ್ ಆಗಿದೆ ಶಿವಂ ದುಬೆ ಲವ್ ಸ್ಟೋರಿ..! ಅಂಜುಂ ಖಾನ್ ಕೈ ಹಿಡಿದ ಭಾರತೀಯ ಕ್ರಿಕೆಟಿಗನ ಪ್ರೇಮ್ ಕಹಾನಿ ಇದು

Published : Jan 17, 2024, 03:15 PM IST

ಬೆಂಗಳೂರು: ಟೀಂ ಇಂಡಿಯಾ ಪ್ರತಿಭಾನ್ವಿತ ಆಲ್ರೌಂಡರ್ ಶಿವಂ ದುಬೆ, ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ನಾವಿಂದು ನೀವೆಲ್ಲೂ ಕೇಳಿರದ ದುಬೆಯ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ ಹೇಳುತ್ತಿದ್ದೇವೆ ನೋಡಿ.  

PREV
110
ಇಂಟ್ರೆಸ್ಟಿಂಗ್ ಆಗಿದೆ ಶಿವಂ ದುಬೆ ಲವ್ ಸ್ಟೋರಿ..! ಅಂಜುಂ ಖಾನ್ ಕೈ ಹಿಡಿದ ಭಾರತೀಯ ಕ್ರಿಕೆಟಿಗನ ಪ್ರೇಮ್ ಕಹಾನಿ ಇದು

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶಿವಂ ದುಬೆ ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಯಲ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಆಫ್ಘಾನ್ ಎದುರಿನ ಮೊದಲೆರಡು ಪಂದ್ಯಗಳಲ್ಲೂ ದುಬೆ ಆಕರ್ಷಕ ಅರ್ಧಶತಕ ಚಚ್ಚಿದ್ದಾರೆ.
 

210

ಶಿವಂ ದುಬೆ, ಮೊದಲೆರಡು ಟಿ20 ಪಂದ್ಯಗಳಲ್ಲಿ ಸ್ಪೋಟಕ ಅರ್ಧಶತಕ ಬಾರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ದುಬೆಯ ಕುರಿತಾದ ಚರ್ಚೆಗಳು ಹೆಚ್ಚು ಮುನ್ನೆಲೆಗೆ ಬಂದಿವೆ. ಇದೇ ವೇಳೆ ದುಬೆಯ ವೈಯುಕ್ತಿಕ ಜೀವನದ ಕುರಿತಂತೆಯೂ ಚರ್ಚೆಗಳು ಶುರುವಾಗಿವೆ.
 

310

ಶಿವಂ ದುಬೆ 2021ರಲ್ಲಿ ತಮ್ಮ ದೀರ್ಘಕಾಲದ ಗೆಳತಿ ಅಂಜುಂ ಖಾನ್ ಅವರನ್ನು ಮದುವೆಯಾದರು. ಇವರಿಬ್ಬರೂ ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ನಡೆಸಿ ಆ ಬಳಿಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

410

ಶಿವಂ ದುಬೆ ಹಾಗೂ ಅಂಜುಂ ಖಾನ್ ಅವರ ಮದುವೆ ಮುಂಬೈನಲ್ಲಿ ನಡೆಯಿತು. ಶಿವಂ ದುಬೆ ತಮ್ಮ ಮದುವೆಯ ಫೋಟೋ ಜತೆಗೆ 'ನಾವು ಪ್ರೀತಿಯ ಯಾವ ಪ್ರೀತಿಗೂ ಕಮ್ಮಿಯಿಲ್ಲ. ಈಗ ನಾವಿಬ್ಬರೂ ಹೊಸ ಜೀವನವನ್ನು ಆರಂಭಿಸುತ್ತಿದ್ದೇವೆ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

510

ಅಸಲಿಗೆ ಶಿವಂ ದುಬೆ ಹಾಗೂ ಅವರ ಪತ್ನಿ ಬೇರೆ-ಬೇರೆ ಧರ್ಮದವರಾಗಿದ್ದರೂ, ಇವರ ಪ್ರೀತಿಗೆ ಧರ್ಮ ಅಡ್ಡಿಯಾಗಲಿಲ್ಲ. ಇವರ ಮದುವೆಯು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ನಡೆಯಿತು.

610

ಮದುವೆಯ ಒಂದು ಫೋಟೋದಲ್ಲಿ ಶಿವಂ ದುಬೆ ಹಾಗೂ ಅಂಜುಂ ಖಾನ್ ಇಬ್ಬರೂ ಕೈ ಮೇಲೆ ಹಿಡಿದು ಆಶೀರ್ವಾದ ಬೇಡುತ್ತಿರುವ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಈ ಫೋಟೋವು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುತ್ತಿರುವುದಾಗಿದೆ. 

710

ಅಂಜುಂ ಖಾನ್ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಅವರು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಫೈನ್ ಆರ್ಟ್ಸ್‌ನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ

810

ಅಂಜುಂ ಅವರಿಗೆ ಅಭಿನಯ ಹಾಗೂ ಮಾಡೆಲಿಂಗ್‌ನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಅವರು ಹಿಂದಿ ಸೀರಿಯಲ್ ಜತೆಗೆ ಮ್ಯೂಸಿಕ್ ಆಲ್ಬಂವೊಂದಕ್ಕೂ ಕೆಲಸ ಮಾಡಿದ್ದಾರೆ.

910

ಇನ್ನು ಶಿವಂ ದುಬೆ ಹುಟ್ಟಿ ಬೆಳೆದಿದ್ದು ಎಲ್ಲವೂ ಮಾಯಾನಗರಿ ಮುಂಬೈನಲ್ಲಿಯೇ. ಎಡಗೈ ಬ್ಯಾಟರ್ ಶಿವಂ ದುಬೆ 2019ರಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

1010

ಶಿವಂ ದುಬೆ ಇಲ್ಲಿಯವರೆಗೂ ಭಾರತ ಪರ ಟಿ20 ಹಾಗೂ ಏಕದಿನ ಕ್ರಿಕೆಟ್‌ ಆಡಿದ್ದಾರೆ. ಸ್ಪೋಟಕ ಆಟಕ್ಕೆ ಹೆಸರುವಾಸಿಯಾಗಿರುವ ದುಬೆ, 2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

Read more Photos on
click me!

Recommended Stories