ಐಪಿಎಲ್‌ನಲ್ಲಿ ಈ ಮೂರು ತಂಡಗಳ ಪರ ಆಡಲು ಬಯಸಿದ ವೇಗಿ ಶ್ರೀಶಾಂತ್

First Published Jul 4, 2020, 4:10 PM IST

ಟೀಂ ಇಂಡಿಯಾದ ಕಂಡ ಅತ್ಯಂತ ಆಕ್ರಮಣಶೀಲ ವೇಗಿ ಎಸ್. ಶ್ರೀಶಾಂತ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಮೈದಾನದಾಚೆಗೆ ಸುದೀರ್ಘ ಕಾನೂನು ಹೋರಾಟದ ಮೂಲಕ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಶ್ರೀ ಕ್ಲೀನ್‌ಚಿಟ್ ಪಡೆದಿದ್ದಾರೆ.

ಹೌದು, 2013ರಲ್ಲಿನ ಐಪಿಎಲ್ ಟೂರ್ನಿಯ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಕೇರಳ ವೇಗಿ ತುತ್ತಾಗಿದ್ದರು. ಇದಾದ ಬಳಿಕ ಬಿಸಿಸಿಐನಿಂದ ಅಜೀವ ನಿಷೇಧ ಶಿಕ್ಷೆಗೆ ಶ್ರೀಶಾಂತ್ ಗುರಿಯಾಗಿದ್ದರು. ಇದಾದ ಬಳಿಕ ಸುಪ್ರೀಂ ಸೂಚನೆಯಂತೆ ಬಿಸಿಸಿಐ ಶಿಕ್ಷೆಯನ್ನು 7 ವರ್ಷಕ್ಕೆ ಮಿತಿಗೊಳಿಸಿತ್ತು. ನಿಷೇಧ ಶಿಕ್ಷೆ ಬರುವ ಆಗಸ್ಟ್‌ಗೆ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಶ್ರೀಶಾಂತ್ ಐಪಿಎಲ್‌ನಲ್ಲಿ ಮೂರು ಫ್ರಾಂಚೈಸಿ ಪರ ಆಡಲು ಕನಸು ಕಾಣುತ್ತಿದ್ದಾರೆ. 

ಮುಂದಿನ ವರ್ಷ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗ​ಳೂರು (ಆರ್‌ಸಿಬಿ) ಸೇರಿದಂತೆ ಮತ್ತೆರಡು ತಂಡಗಳ ಪರ ಆಡಲು ಆಸೆ ಇದೆ ಎಂದು ವೇಗಿ ಶ್ರೀಶಾಂತ್‌ ಹೇಳಿ​ಕೊಂಡಿ​ದ್ದಾರೆ.
undefined
7 ವರ್ಷಗಳ ಬಳಿಕ ಸ್ಪರ್ಧಾ​ತ್ಮಕ ಕ್ರಿಕೆಟ್‌ಗೆ ವಾಪ​ಸಾ​ಗಲು ಸಿದ್ಧ​ರಾ​ಗಿ​ರುವ ಶ್ರೀಶಾಂತ್‌ಗೆ, 2020-21ರ ಸಾಲಿನ ದೇಸಿ ಋುತು​ವಿ​ನಲ್ಲಿ ಕೇರಳ ತಂಡ​ದಲ್ಲಿ ಸ್ಥಾನ ಸಿಗುವುದು ಬಹು​ತೇಕ ಖಚಿತವಾಗಿದೆ.
undefined
ಇತ್ತೀ​ಚೆ​ಗಷ್ಟೇ ಕೇರಳ ಕ್ರಿಕೆಟ್‌ ಸಂಸ್ಥೆ ಶ್ರೀಶಾಂತ್‌, ರಾಜ್ಯ ತಂಡ​ದಲ್ಲಿ ವಾಪ​ಸಾ​ಗಲು ಹಸಿರು ನಿಶಾನೆ ತೋರಿತ್ತು. ರಾಜ್ಯ ತಂಡ​ದಲ್ಲಿ ಆಡಿ​ದರೆ ಸಹ​ಜ​ವಾ​ಗಿಯೇ ಐಪಿ​ಎಲ್‌ನಲ್ಲೂ ಆಡಲು ಅವರು ಅರ್ಹತೆ ಪಡೆ​ಯ​ಲಿ​ದ್ದಾರೆ.
undefined
‘ಖಂಡಿತವಾಗಿಯೂ ಹರಾ​ಜಿ​ನಲ್ಲಿ ಪಾಲ್ಗೊ​ಳ್ಳು​ತ್ತೇನೆ. ಆರ್‌ಸಿಬಿ, ಮುಂಬೈ ಇಲ್ಲವೇ ಚೆನ್ನೈ ತಂಡ​ದಲ್ಲಿ ಆಡುವ ಆಸೆ ಇದೆ’ ಎಂದು ಶ್ರೀಶಾಂತ್‌ ಹೇಳಿ​ದ್ದಾರೆ.
undefined
2013ರಲ್ಲಿ ನಡೆಯಿತೆನ್ನಲಾದ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಕೇರಳ ವೇಗಿ ಶ್ರೀಶಾಂತ್ 7 ವರ್ಷಗಳ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದರು. ಆ ಬಳಿಕ ಸಾಕ್ಷ್ಯಧಾರಗಳ ಕೊರತೆಯಿಂದಾಗಿ ವಿಶೇಷ ನ್ಯಾಯಾಲಯ 2015ರಲ್ಲಿ ಶ್ರೀಶಾಂತ್ ಅವರನ್ನು ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಳಿಸಿತ್ತು.
undefined
ಇನ್ನು ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿದ್ದ ಜೀವಾವಧಿ ನಿಷೇಧ ಶಿಕ್ಷೆಯನ್ನು ಕೇರಳ ಹೈಕೋರ್ಟ್ ತೆರವುಗೊಳಿಸಲು ಸೂಚಿಸಿತ್ತು. ಆದರೆ ವಿಭಾಗೀಯ ಪೀಠ ನಿಷೇಧವನ್ನು ತೆರವುಗೊಳಿಸಿರಲಿಲ್ಲ.
undefined
ಇಷ್ಟಕ್ಕೆ ಸುಮ್ಮನಾಗದ ಶ್ರೀಶಾಂತ್ ವಿಭಾಗೀಯ ಪೀಠದ ನಿಲುವಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2019ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮನವಿಯನ್ನು ಪುರಸ್ಕರಿಸಿತ್ತು, ಮಾತ್ರವಲ್ಲದೇ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ಬಿಸಿಸಿಐಗೆ ಸೂಚಿಸಿತ್ತು.
undefined
ಆ ಬಳಿಕ ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿದ್ದ ಜೀವಾವಧಿ ನಿಷೇಧ ಶಿಕ್ಷೆ ಬದಲು 7 ವರ್ಷಕ್ಕೆ ಸೀಮಿತಗೊಳಿಸಿತ್ತು. ಈ ನಿಷೇಧ ಅವಧಿ 2020ರ ಆಗಸ್ಟ್ ವೇಳೆಗೆ ಅಂತ್ಯವಾಗಲಿದೆ.
undefined
ಆಕ್ರಮಣಶೀಲ 37 ವರ್ಷದ ವೇಗಿ ಶ್ರೀಶಾಂತ್ ಭಾರತ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 87, 75 ಹಾಗೂ 7 ವಿಕೆಟ್ ಕಬಳಿಸಿದ್ದಾರೆ.
undefined
click me!