ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

First Published | Jul 4, 2020, 3:50 PM IST

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಕ್ರಿಕೆಟ್ ಇಲ್ಲದ ಈ ಕೊರೋನಾ ಕಾಲದಲ್ಲಿ ಲಂಕಾ ಮಾಜಿ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗುವಂತೆ ಮಾಡಿತ್ತು.

ಮಾಜಿ ಕ್ರೀಡಾ ಸಚಿವರೇ ಹೀಗೊಂದು ಹೇಳಿಕೆ ನೀಡಿದರೆ ಯಾರು ಸುಮ್ಮನಾಗುತ್ತಾರೆ ಹೇಳಿ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ.
 

2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎಂದು ಸಾಬೀ​ತು ಮಾಡಲು ಯಾವುದೇ ಸಾಕ್ಷ್ಯಾ​ಧಾರ ಸಿಗದ ಕಾರಣ, ಪ್ರಕ​ರಣದ ತನಿಖೆಯನ್ನು ಶ್ರೀಲಂಕಾ ಪೊಲೀ​ಸರು ಮುಕ್ತಾ​ಯ​ಗೊ​ಳಿ​ಸಿ​ದ್ದಾರೆ.
undefined
ಗುರು​ವಾರ ಮಾಜಿ ನಾಯಕ ಕುಮಾರ ಸಂಗ​ಕ್ಕಾರ ಹಾಗೂ ಮಹೇಲಾ ಜಯ​ವ​ರ್ಧನೆಯನ್ನು 10 ಗಂಟೆಗೂ ಹೆಚ್ಚು ಕಾಲ ವಿಚಾ​ರಣೆ ನಡೆ​ಸಿದ ಬಳಿಕ ತನಿಖೆ ಕೈಬಿ​ಡಲು ಪೊಲೀ​ಸ​ರು ನಿರ್ಧರಿ​ಸಿ​ದ್ದಾರೆ.
undefined

Latest Videos


ಮಾಜಿ ಕ್ರೀಡಾ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ಫಿಕ್ಸಿಂಗ್‌ ಆರೋಪ ಮಾಡಿದ ಬಳಿಕ ಕ್ರೀಡಾ ಸಚಿ​ವಾ​ಲಯ ತನಿ​ಖೆಗೆ ಆದೇ​ಶಿಸಿತ್ತು.
undefined
ಇದರ ಬೆನ್ನಲ್ಲೇ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಮೊದಲಿಗೆ ಶ್ರೀಲಂಕಾ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಮುಖ್ಯ ಆಯ್ಕೆಗಾರ, ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವಾ ಅವರನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
undefined
ಇದಾದ ಬಳಿಕ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಉಪುಲ್ ತರಂಗಾ ಅವರನ್ನು 2 ಗಂಟೆಗಳ ಕಾಲ ಡ್ರಿಲ್ ಮಾಡಲಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತರಂಗಾ ಸುಮಾರು ಅರ್ಧತಾಸು ಕ್ರೀಸ್‌ನಲ್ಲಿದ್ದು 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
undefined
ಈ ಕುರಿತಂತೆ ಲಂಕಾ ಮಾಜಿ ಕ್ರೀಡಾಸಚಿವ ಮಹಿಂದಾನಂದ ಅಲುತ್ಗಾಮಗೆ ತಮ್ಮ ದೇಶದ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು.
undefined
ಆರಂಭದಲ್ಲೇ ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಕಬಳಿಸಿದ್ದ ಲಂಕಾ ಆತಿಥೇಯ ಟೀಂ ಇಂಡಿಯಾ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿತ್ತು.
undefined
ಆದರೆ ಧೋನಿ ಹಾಗೂ ಗಂಭೀರ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
undefined
ಇದರೊಂದಿಗೆ ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಬೀಗಿತು
undefined
click me!