ಇಂಡೋ-ಪಾಕ್ ಫೈನಲ್ ವೀಕ್ಷಿಸುವ ಫ್ಯಾನ್ಸ್‌ ನಿಯಮ ಬ್ರೇಕ್ ಮಾಡಿದರೆ 7.24 ಲಕ್ಷ ರೂ ದಂಡ

Published : Sep 28, 2025, 04:18 PM IST

ಇಂಡೋ-ಪಾಕ್ ಫೈನಲ್ ವೀಕ್ಷಿಸುವ ಫ್ಯಾನ್ಸ್‌ಗೆ ಮಾರ್ಗಸೂಚಿ ಪ್ರಕಟ, ಹಲವು ನಿರ್ಬಂಧ ವಿಧಿಸಲಾಗಿದೆ. ಬದ್ಧವೈರಿಗಳ ಕದನಕ್ಕೆ ದುಬೈ ಪೊಲೀಸರು ಭಾರಿ ತಯಾರಿ ಮಾಡಿದ್ದರೆ. ಇಷ್ಟೇ ಅಲ್ಲ, ಅಭಿಮಾನಿಗಳು ಕೆಲ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ.

PREV
16
41 ವರ್ಷ ಬಳಿಕ ಮುಖಾಮುಖಿ, ಕಠಿಣ ನಿಯಮ

41 ವರ್ಷ ಬಳಿಕ ಮುಖಾಮುಖಿ, ಕಠಿಣ ನಿಯಮ

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಅಖಾಡ ಸಜ್ಜಾಗಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ಆಯೋಜನೆಗೊಂಡಿದೆ. ಇಂದು (ಸೆ.28) ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

26
ಅಭಿಮಾನಿಗಳಿಗೆ ಹಲವು ನಿರ್ಬಂಧ

ಅಭಿಮಾನಿಗಳಿಗೆ ಹಲವು ನಿರ್ಬಂಧ

ಇಂಡೋ ಪಾಕ್ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ಕಟ್ಟು ನಿಟ್ಟಿನ ಸೂಚನೆ ಪಾಲಿಸುವಂತೆ ದುಬೈ ಪೊಲೀಸರು ಖಡಕ್ ಆದೇಶ ನೀಡಿದ್ದಾರೆ. ಪ್ರಮುಖವಾಗಿ ಭದ್ರತೆ ಹಾಗೂ ಪ್ರಚೋದನೆಗಳಿಂದ ದುಬೈ ಪೊಲೀಸರು ಮೊದಲೇ ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಹಲವು ಕಠಿಣ ನಿಯಮ ಹೇರಲಾಗಿದೆ.

36
ಬ್ಯಾನರ್, ಫ್ಲ್ಯಾಗ್ ಬ್ಯಾನ್

ಬ್ಯಾನರ್, ಫ್ಲ್ಯಾಗ್ ಬ್ಯಾನ್

ಏಷ್ಯಾಕಪ್ ಫೈನಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳು ಯಾವುದೇ ಬ್ಯಾನರ್ ತೆಗೆದುಕೊಂಡು ಹೋಗುವಂತಿಲ್ಲ. ಇಷ್ಟೇ ಅಲ್ಲ ಕ್ರಿಕೆಟಿಗರು ಹುರಿದುಂಬಿಸಲು ಯಾವುದೇ ರೀತಿ ಬಾವುಟಗಳನ್ನು ಕೊಂಡೊಯ್ಯುವಂತಿಲ್ಲ. ಪಟಾಕಿ ಸೇರಿದಂತೆ ಇತರ ಕೆಲ ವಸ್ತುಗಳನ್ನು ಕ್ರೀಡಾಂಗಣಕ್ಕೆ ಕೊಂಡೊಯ್ಯುವಂತಿಲ್ಲ. ಯಾವುದೇ ರೀತಿಯ ಪ್ರಚೋದನೆ, ವ್ಯಂಗ್ಯ, ಅಣಕಿಸುವ ಬರಹಗಳನ್ನು ಪ್ರದರ್ಶಿಸುವಂತಿಲ್ಲ.

46
ನಿಯಮ ಉಲ್ಲಂಘಿಸಿದರೆ ಗರಿಷ್ಠ 7.24 ಲಕ್ಷ ರೂಪಾಯಿ ದಂಡ

ನಿಯಮ ಉಲ್ಲಂಘಿಸಿದರೆ ಗರಿಷ್ಠ 7.24 ಲಕ್ಷ ರೂಪಾಯಿ ದಂಡ

ದುಬೈ ಪೊಲೀಸರು ಬ್ಯಾನರ್ ಬ್ಯಾನ್ ಸೇರಿದಂತೆ ಹಲವು ನಿರ್ಬಂಧ ಹೇರಿದ್ದಾರೆ. ದುಬೈ ಪೊಲೀಸರು ಸೂಚನೆ ಮೀರಿದರೆ ಗರಿಷ್ಠ 7.24 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ನಿಯಮ ಉಲ್ಲಂಘನೆ ಮೇಲೆ ಗರಿಷ್ಠ 3 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗುತ್ತದೆ ಎಂದಿದ್ದಾರೆ.

56
ಆಟಗಾರರ ನಿಂದಿಸಿದರೂ 7.24 ಲಕ್ಷ ರೂಪಾಯಿ ದಂಡ

ಆಟಗಾರರ ನಿಂದಿಸಿದರೂ 7.24 ಲಕ್ಷ ರೂಪಾಯಿ ದಂಡ

ಆಟಗಾರರ ನಿಂದಿಸುವುದು, ಪ್ರಚೋದಿಸುವುದು, ಕೆಟ್ಟ ಕಮೆಂಟ್ ಪಾಸ್ ಮಾಡಿವುದು ಮಾಡಿದರೆ 2.41 ಲಕ್ಷ ರೂಪಾಯಿಯಿಂದ 7.24 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ನೀರಿನ ಬಾಟಲಿ ಸೇರಿದಂತೆ ಯಾವುದೇ ವಸ್ತುಗಳನ್ನು ಆಟಗಾರರ ಮೇಲೆ, ಕ್ರೀಡಾಂಗಣದೊಳಕ್ಕೆ ಎಸೆದರೂ ಈ ದುಬಾರಿ ದಂಡ ವಿಧಿಸಲಾಗುತ್ತದೆ.

66
ಸುರಕ್ಷತೆಗೆ ಆದ್ಯತೆ

ಸುರಕ್ಷತೆಗೆ ಆದ್ಯತೆ

ಇತರ ಪ್ರೇಕ್ಷಕರ ಸುರಕ್ಷತೆಗೆ, ಆಟಗಾರರು, ಸಿಬ್ಬಂಧಿಗಳ ಸುರಕ್ಷತೆಗೆ ಧಕ್ಕೆಯಾಗುವು ಯಾವುದೇ ಘಟನೆಗಳನ್ನು ಹತ್ತಿಕ್ಕಲಾಗುತ್ತದೆ ಎಂದು ದುಬೈ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

Read more Photos on
click me!

Recommended Stories