ENG vs IND ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

First Published Jun 22, 2022, 11:24 PM IST
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹತ್ವದ ಸರಣಿ
  • ನಾಳೆಯಿಂದ ಅಭ್ಯಾಸ ಪಂದ್ಯ ಆರಂಭ
  • ಜೂನ್ 1 ಕ್ಕೆ 5ನೇ ಟೆಸ್ಟ್ ಪಂದ್ಯ, ತಂಡ ಹಾಗೂ ವೇಳಾಪಟ್ಟಿ ವಿವರ

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್‌‌ನಲ್ಲಿ ಬೀಡುಬಿಟ್ಟಿದೆ. ಆಂಗ್ಲರ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಇದರ ನಡುವೆ ಟೀಂ ಇಂಡಿಯಾಗೆ ಕೋವಿಡ್ ಆತಂಕವೂ ಎದುರಾಗಿದೆ. 

ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್‌ಗೆ ಕೋವಿಡ್ ದೃಢಪಟ್ಟಿದೆ. ನಾಳೆಯಿಂದ 4 ದಿನಗಳ ಟೆಸ್ಟ್ ಅಭ್ಯಾಸ ಪಂದ್ಯ ನಡೆಯಲಿದೆ. ಜುಲೈ 1 ರಂದು ಭಾರತ ಇಂಗ್ಲೆಂಡ್ ನಡುವಿನ ಬಾಕಿ ಉಳಿದ 5ನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

Team India

ಕಳೆದ ವರ್ಷ ಆಯೋಜಿಸಿದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯ ಮುಗಿಯುತ್ತಿದ್ದಂತೆ ಕೋವಿಡ್ ಆತಂಕ ಎದುರಾಗಿತ್ತು. ಹೀಗಾಗಿ 5ನೇ ಪಂದ್ಯವನ್ನು ಮುಂದೂಡಲಾಗಿತ್ತು. ಈ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ఇంగ్లాండ్‌తో జరిగిన టెస్టు మ్యాచ్‌లో 7 వికెట్లు కోల్పోయి 759 పరుగులు చేసి డిక్లేర్ చేసింది విరాట్ సేన...

ಜುಲೈ 1 ರಿಂದ 5ರ ವರೆಗೆ ಭಾರತ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನಾ 3.30ಕ್ಕೆ ಆರಂಭಗೊಳ್ಳಲಿದೆ. ಈ ರೋಚಕ ಹಣಾಹಣಿಗೂ ಮೊದಲೇ ಟೀಂ ಇಂಡಿಯಾದಲ್ಲಿ ಕೋವಿಡ್ ಜೊತೆಗೆ ಇಂಜುರಿ ಸಮಸ್ಯೆ ಕೂಡ ಕಾಡುತ್ತಿದೆ.

Visakhapatnam: Indian players react after the end of the 3rd T20 cricket match between India and South Africa, at Dr. Y. S. Rajasekhara Reddy International Cricket Stadium, in Visakhapatnam, Tuesday, June 14, 2022. India won the match by 48 runs. (PTI PhotoR Senthil Kumar)(PTI06_14_2022_000421B)

ಇನ್ನು ಜುಲೈ 7 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಜುಲೈ 7 ರಂದ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯ ರಾತ್ರಿ 11.ಗಂಟೆಗೆ ಆರಂಭಗೊಳ್ಳಲಿದೆ. ಇನ್ನು ಜುಲೈ 9 ರಂದು 2ನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಜುಲೈ 10 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ರಾತ್ರಿ 11 ಗಂಟೆಗೆ ಆರಂಭಗೊಳ್ಳಲಿದೆ.

ಜುಲೈ 12 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳು ಮಹ್ನಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಜೂನ್ 12 ರಂದು ಮೊದಲ ಏಕದಿನ, ಜುಲೈ 14 ರಂದು 2ನೇ ಹಾಗೂ ಜುಲೈ 17 ರಂದು 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

Image credit: PTI

ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಶ್ರೀಕರ್ ಭರತ್

click me!